Yash: ಹನುಮಾನ್ ಸೀಕ್ವೆಲ್‌ನಲ್ಲಿ ನಟಿಸ್ತಾರ ಯಶ್‌? ಭಜರಂಗಿ ಪಾತ್ರಕ್ಕೆ ಓಕೆ ಅಂದ್ರಾ ರಾಕಿಂಗ್ ಸ್ಟಾರ್?

ತೆಲುಗಿನ ಹನುಮಾನ್ ಸಿನಿಮಾ ನಿರೀಕ್ಷೆಗೂ ಮೀರಿ ಮೆಗಾ ಹಿಟ್ ಆಗಿದೆ. ಮಹೇಶ್ ಬಾಬು ಸಿನಿಮಾ ಎದುರು ಬಿಡುಗಡೆಯಾಗಿದ್ದ ಹನುಮಾನ್ ದೊಡ್ಡ ಚಿತ್ರದ ಎದುರೇ ಗೆದ್ದು ಬೀಗಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 286 ಕೋಟಿ ರೂಪಾಯಿ ಗಳಿಸಿದೆ.

ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಸಂದರ್ಭದಲ್ಲಿ, ಚಲನಚಿತ್ರ ನಿರ್ಮಾಪಕ ಪ್ರಶಾಂತ್ ವರ್ಮಾ ಹನುಮಾನ್ ಸಿನಿಮಾದ ಮುಂದುವರಿದ ಭಾಗ ಜೈ ಹನುಮಾನ್ ಸಿನಿಮಾ ಮಾಡುವುದಾಗಿ ಘೋಷಿಸಿದರು.

Truth Behind Viral Rumors: Yashs Role as Lord Hanuman in Prasanth Varmas Jai HanuMan

ಕಳೆದ ಕೆಲವು ದಿನಗಳಿಂದ, ಕೆಜಿಎಫ್ ಬ್ಲಾಕ್‌ಬಸ್ಟರ್‌ಗಳಲ್ಲಿ ನಟಿಸಿರುವ ಸೂಪರ್‌ಸ್ಟಾರ್ ಯಶ್, ಜೈ ಹನುಮಾನ್ ಚಿತ್ರದಲ್ಲಿ ಹನುಮಾನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಚಿತ್ರತಂಡ ಯಶ್ ಜೊತೆ ಹನುಮಾನ್ ಪಾತ್ರ ಮಾಡುವಂತೆ ಸಂಪರ್ಕಿಸಿದೆ ಎನ್ನುವ ಮಾಹಿತಿ ವ್ಯಾಪಕ ವೈರಲ್ ಆಗಿತ್ತು.

ಹನುಮಾನ್ ಪಾತ್ರದಲ್ಲಿ ಯಶ್ ನಟಿಸಲ್ಲ

ಈ ವರದಿಗಳು ಆಧಾರರಹಿತ ಮತ್ತು ಸುಳ್ಳು ಎಂದು ಯಶ್ ತಂಡದ ಮೂಲವೊಂದು ಖಚಿತಪಡಿಸಿದೆ ಎಂದು ಡಿಎನ್‌ಎ ವರದಿ ಮಾಡಿದೆ. ಮುಂಬರುವ ಚಿತ್ರದಲ್ಲಿ ಯಶ್ ಹನುಮಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಮಾತನಾಡಿದ್ದು, ಅವರ ತಂಡದ ವಿಶ್ವಾಸಾರ್ಹ ಮೂಲವು ದೃಢಪಡಿಸಿದೆ, "ವರದಿಗಳಲ್ಲಿ ಯಾವುದೇ ಸತ್ಯವಿಲ್ಲ, ಅವರು ಅಂತಹ ಯಾವುದೇ ಪಾತ್ರವನ್ನು ಪರಿಗಣಿಸುತ್ತಿಲ್ಲ. ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸಿನಿಮಾಗೆ ಸಾಕಷ್ಟು ಸಮಯವನ್ನು ನೀಡುತ್ತಾರೆ. ಇದೀಗ ಅವರು ಸಂಪೂರ್ಣವಾಗಿ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಚಿತ್ರಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.

ಟಾಕ್ಸಿಕ್ ಚಿತ್ರವನ್ನು ನಟಿ- ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದಾರೆ. ಕ್ರೈಂ ಥ್ರಿಲ್ಲರ್ ಸಿನಿಮಾವನ್ನು ಕನ್ನಡದಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು ಇದು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಡಬ್ಬಿಂಗ್ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಏಪ್ರಿಲ್ 10, 2025 ರಂದು ವಿಶ್ವದಾದ್ಯಂತ ತೆರೆಗೆ ತರಲು ಚಿತ್ರತಂಡ ಕೆಲಸ ಮಾಡುತ್ತಿದೆ.

ಯಶ್ ಶೀಘ್ರದಲ್ಲೇ ನಿತೇಶ್ ತಿವಾರಿಯ ರಾಮಾಯಣದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಯಶ್ ರಾವಣ ಪಾತ್ರ ಮಾಡುವುದು ಬಹುತೇಕ ಖಚಿತವಾಗಿದೆ. ಇದರಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಸನ್ನಿ ಡಿಯೋಲ್ ಹನುಮಾನ್ ಆಗಿ ನಟಿಸಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ ಇದು ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+