Toxic Update: ಟಾಕ್ಸಿಕ್ ಟಿಕೆಟ್ ಬುಕಿಂಗ್‌ನಲ್ಲಿ ಯಶ್ ಹೊಸ ದಾಖಲೆ; ಕರ್ನಾಟಕದಲ್ಲೇ ₹7.75 ಕೋಟಿ ಸೇಲ್!

Toxic Update: ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಟಿಕೆಟ್ ಬುಕಿಂಗ್ ಇಂದು ಆಗಸ್ಟ್ 21ರಂದು ಶುರುವಾಗಿದ್ದು, ಮಾರಾಟದಲ್ಲಿ ಕರ್ನಾಟಕದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಯಶ್ ಫ್ಯಾನ್ಸ್ ಟಿಕೆಟ್ ಮುಗಿಬಿದ್ದು ಖರೀದಿಸಿದ್ದು, ಬೆಳಗ್ಗೆ ಟಿಕೆಟ್ ಬುಕಿಂಗ್ ವಿಂಡೋ ತೆರೆಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಎಲ್ಲ ಥಿಯೇಟರ್‍‌, ಮಲ್ಪಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿವೆ. ದಾವಣಗೆರೆ, ಬೆಂಗಳೂರು ಸೇರಿದಂತೆ ಕೆಲವು ಥಿಯೇಟರ್‍‌ಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋ ಪ್ರಸಾರ ಮಾಡಲಾಗುತ್ತಿದೆ.

ಜಾಗತಿಕವಾಗಿ ಇದೇ ಆಗಸ್ಟ್ 26ರಂದು 'ಟಾಕ್ಸಿಕ್' ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ಟಿಕೆಟ್ ಬುಕಿಂಗ್‌ನಲ್ಲಿ ಯಶ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಕರ್ನಾಟಕವೊಂದರಲ್ಲೇ ಇಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ 7.75 ಕೋಟಿ ರೂ. ಟಿಕೆಟ್ ಗಳು ಮಾರಾಟವಾಗಿವೆ ಎಂದು 'ಕನ್ನಡ ಪಿಕ್ಚರ್' ಯೂಟ್ಯೂಬ್ ಚಾನಲ್ ಮಾಹಿತಿ ಹಂಚಿಕೊಂಡಿದೆ. ಟಿಕೆಟ್ ಎಲ್ಲವು ಬಹುಬೇಗನೆ ಮಾರಾಟವಾದ್ದು, ಆದರೆ ಅದೆಲ್ಲದರ ಹಣ ಸಂಗ್ರಹದ ಪೂರ್ಣ ಲೆಕ್ಕ, ಅಂಕಿ ಅಂಶಗಳು ಇನ್ನಷ್ಟೇ ಸಿಗಬೇಕಿದೆ. ಇಂದು ರಾತ್ರಿ ಹೊತ್ತಿಗೆ ಒಟ್ಟಾರೆ ಟಿಕೆಟ್ ಸೇಲ್ ಕಲೆಕ್ಷನ್ ಮಾಹಿತಿ ಸಿಗಲಿದೆ ಎನ್ನಲಾಗಿದೆ.

Toxic Movie Ticket Sales

ಇದು ಕರ್ನಾಟಕದಲ್ಲಿ ಸೇಲ್ ಆದ ಟಿಕೆಟ್ ಹಣದ ವಿವರ, ಇನ್ನೂ ಇಡೀ ದೇಶ ಒಳಗೊಂಡಂತೆ ವಿಶ್ವದಾದ್ಯಂತ ಕೋಟ್ಯಾಂತರ ರೂಪಾಯಿಯ ಟಿಕೆಟ್‌ಗಳು ಮಾರಾಟವಾಗಿವೆ. ಈ ಮೂಲಕ ಟಾಕ್ಸಿಕ್ ಮತ್ತೊಂದು ಹೊಸ ದಾಖಲೆ ಬರೆದಿದೆ. ಶೀಘ್ರವೇ ಇದೆಲ್ಲದರ ಅಂದಾಜು ಮಾಹಿತಿ ಬಹಿರಂಗೊಳ್ಳುವ ನಿರೀಕ್ಷೆ ಇದೆ.

ಮುಂಬೈ ಸೇರಿ ಮಹಾನಗರಗಳಲ್ಲಿ 'ರಾಯ'ನ ಫ್ಲೆಕ್ಸ್, ಕಟೌಟ್!

'ಟಾಕ್ಸಿಕ್' ಟ್ರೈಲರ್ ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. 'ರಾಯ, ಟಿಕೆಟ್' ಆಗಿ ಬಣ್ಣ ಹಚ್ಚಿರುವ ನಟ ಯಶ್ ಅವರನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ. ಅಲ್ಲದೇ ಸಿನಿಮಾ ರಿಲೀಸ್‌ಗೆ ದಿನಗಣನೇ ಶುರುವಾದ ಬೆನ್ನಲ್ಲೆ 'ಟಾಕ್ಸಿಕ್' ಫ್ಲೆಕ್ಸ್, ಬ್ಯಾನರ್‍‌ಗಳು, ಕಟೌಟ್‌ಗಳು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ರಾರಾಜಿಸುತ್ತಿವೆ. ವಿದೇಶಗಳಲ್ಲಿ ಬ್ಯಾನರ್ ಹಾಕಿದ್ದರ ಮಾಹಿತಿ ಲಭ್ಯವಾಗಿದೆ. 'ಟಾಕ್ಸಿಕ್' ಅನ್ನು ದೊಡ್ಡ ಪರದೆಗೆ ಇಡೀ ಭಾರತವೇ ಬರ ಮಾಡಿಕೊಳ್ಳುತ್ತಿದೆ.

'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮನೆ ಮಾತಾದರು. ಇಂದಿಗೂ ಅವರ ಓಟ ನಿಂತಿಲ್ಲ. ಸದ್ಯದ ಅವರ ಕ್ರೇಜ್ ನೋಡಿದರೆ 'ಟಾಕ್ಸಿಕ್' ಮೂಲಕ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಮಿಂಚುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

'ಟಾಕ್ಸಿಕ್' ಮೇಲೆ ಕನ್ನಡಿಗರ ಕಣ್ಣು

'ಕೆವಿಎನ್ ಪ್ರೊಡಕ್ಷನ್ ಮತ್ತು ಮಾನ್‌ಸ್ಟಾರ್ ಮೈಂಡ್ ಕ್ರಿಯೇಷನ್' ಮೂಲಕ ನಿರ್ಮಾಣವಾದ 'ಟಾಕ್ಸಿಕ್‌'ಗೆ ಗೀತು ಮೋಹನ್ ದಾಸ್ ಅವರ ನಿರ್ದೇಶನವಿದೆ. ರವಿ ಬಸ್ರೂರು ಅವರ ಸಂಗೀತವಿದ್ದು, ಕನ್ನಡದ ನಿರ್ದೇಶಕ ಯೋಗರಾಜ್ ಭಟ್ ಅವರು 'ತಬಾಹಿ' ಸೇರಿ ಪ್ರಮುಖ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಯಶ್ ಜೊತೆಗೆ ಖ್ಯಾತ ನಟಿಮಣಿಯರಾದ ಕಿಯಾರಾ ಅಡ್ವಾನಿ, ತಾರಾ ಸುತಾರಿಯಾ, ರುಕ್ಮಣಿ ವಸಂತ, ಹುಮಾ ಖುರೇಷಿ ಮತ್ತು ನಯನತಾರಾ ಅವರು ನಟಿಸಿದ್ದಾರೆ. ದೊಡ್ಡ ತಾರಾಬಳಗ ಇರುವ ಈ ಸಿನಿಮಾಗಾಗಿ ದೇಶವೇ ಕಾಯುತ್ತಿದೆ. ಟಾಕ್ಸಿಕ್ ಸಿನಿಮಾ ಏನೆಲ್ಲ ರೆಕಾರ್ಡ್ ಮಾಡಲಿದೆ ಎಂದ ಕನ್ನಡಿಗರು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+