Mahesh Babu Hairstyle: ಮಹೇಶ್ ಬಾಬು ಫ್ಯಾನ್ಸ್‌ಗೆ ಬಿಗ್ ಶಾಕ್: ಕೃತಕ ಕೂದಲು ಬಳಸ್ತಾರಂತೆ ನೆಚ್ಚಿನ ನಟ
ಮಹೇಶ್ ಬಾಬು ವಯಸ್ಸೇ ಆಗದ ಸೂಪರ್ ಸ್ಟಾರ್. ಯುವತಿಯರ ನೆಚ್ಚಿನ ಪ್ರಿನ್ಸ್ ಮಹೇಶ್ ಬಾಬು ವಯಸ್ಸು ಕೇಳಿದರೆ ಯಾರೂ ಕೂಡ ನಂಬೋದಿಲ್ಲ. ಹಾಗೆ ಅವರ ಇನ್ನೊಂದು ಸತ್ಯವನ್ನು ಕೇಳಿದರಂತೂ ಅವರ ಅಭಿಮಾನಿಗಳು ಅದನ್ನು ನಂಬಲು ಸಾಧ್ಯವಿಲ್ಲ. ಹೌದು... ಸಾಮಾನ್ಯವಾಗಿ ಸಿನಿಮಾ ನಟ ನಟಿಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಹೀಗೆ ಮಹೇಶ್ ಬಾಬು ಕೂಡ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಮಹೇಶ್ ಬಾಬು ಅವರ ವಯಸ್ಸೀಗ 49 ವರ್ಷ.
ಅಂದಹಾಗೆ ಮಹೇಶ್ ಬಾಬು ಅವರು ಕೃತಕ ಕೂದಲು ಬಳಕೆ ಮಾಡುತ್ತಾರಂತೆ. ನಿಮಗಿದು ಕೇಳಲು ಶಾಕ್ ಎನಿಸಬಹುದು ಆದರೂ ಇದು ನಿಜ. ಮಹೇಶ್ ಬಾಬು ಅವರ ತಂದೆಗೆ ಕೂದಲು ಇರಲಿಲ್ಲವಂತೆ. ಅವರ ಸಹೋದರನಿಗೂ ಕೂಡ ಕೂದಲು ಇರಲ್ಲಿಲ್ಲವಂತೆ. ಹೀಗಾಗಿ ಮಹೇಶ್ ಬಾಬು ಅವರಿಗೂ ಕೂದಲು ಇಲ್ಲ ಎಂದು ಹೇಳಲಾಗುತ್ತದೆ.

ಹಾಗಾದರೆ ಮಹೇಶ್ ಬಾಬು ಅವರು ವಿಗ್ ಬಳಸುತ್ತಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಇದಕ್ಕೆ ಉತ್ತರ ಅವರ ಮೇಕಪ್ ಆರ್ಟಿಸ್ಟ್ ನೀಡಿದ್ದಾರೆ. ಮೇಕಪ್ ಆರ್ಟಿಸ್ಟ್ ಪ್ರಕಾರ, ಕ್ಯೂ 6 ತಂತ್ರಜ್ಞಾನ ಬಳಕೆ ಮಾಡಿ ಮಹೇಶ್ ಬಾಬು ಅವರು ಕೂದಲ ಕಾಣುವಂತೆ ಮಾಡಿದ್ದಾರೆ. ಈ ತಂತ್ರಜ್ಞಾನದಿಂದ ಕೂದಲ ಪ್ಯಾಚ್‌ಗಳನ್ನು ತಲೆಯ ಮೇಲೆ ಫಿಕ್ಸ್ ಮಾಡಲಾಗುತ್ತದೆ. ಇದು ಕೃತಕ ಕೂದಲ ಬದಲಾಗಿ ನಿಜವಾದ ಕೂದಲಿನಂತೆ ಕಾಣಿಸುತ್ತದೆ.
ಮತ್ತೊಂದು ವಿಚಾರ ಅಂದರೆ ಮಹೇಶ್ ಬಾಬು ತಮ್ಮ ತಂದೆ ಮರಣ ಹೊಂದಿದಾಗಲೂ ಕೂದಲನ್ನು ತೆಗೆಸಿಕೊಂಡಿರಲಿಲ್ಲ. ಯಾಕೆಂದರೆ ಅವರು ಸಿನಿಮಾ ಒಪ್ಪಿಕೊಂಡಿದ್ದರು. ಮತ್ತೊಂದು ಕಾರಣ ಅವರ ಕೂದಲು ನೈಜವಾಗಿರಲಿಲ್ಲ. ಹೀಗಾಗಿ ಅವರು ತಲೆ ಕೂದಲು ತೆಗೆಸಿಕೊಂಡಿರಲಿಲ್ಲ.

2006ರಲ್ಲಿ ತೆರೆ ಕಂಡ 'ಪೋಕರಿ' ಸಿನಿಮಾದ ಬಳಿಕ ಮಹೇಶ್ ಬಾಬು ಬೇರೆ ಬೇರೆ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ಮಹೇಶ್ ಬಾಬು ಉದ್ದನೆಯ ಹೇರ್‌ಸ್ಟೈಲ್ ಕೂಡ ಸಾಕಷ್ಟು ವೈರಲ್ ಆಗಿತ್ತು. ಅನಂತ್ ಅಂಬಾನಿ ಮದುವೆಯಲ್ಲಿ ಮಹೇಶ್ ಬಾಬು ಉದ್ದನೆಯ ಕೂದಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಟಾಲಿವುಡ್‌ನ ನಾಯಕ ನಟ ಮಹೇಶ್ ಬಾಬುಗೆ ವಯಸ್ಸೇ ಕಾಣಿಸುವುದಿಲ್ಲ. ಹೇರ್‌ಸ್ಟೈಲ್ ವಿಚಾರದಲ್ಲೂ ಮಹೇಶ್ ಬಾಬು ಹೆಚ್ಚು ಗಮನ ಸೆಳೆಯುತ್ತಾರೆ. ಸಿನಿಮಾ ಜೀವನದಲ್ಲಿ ಒಂದಲ್ಲ ಒಂದು ರೀತಿ ಗಮನ ಸೆಳೆಯೋ ಮಹೇಶ್ ಬಾಬುಗೆ ಲೇಡಿ ಫ್ಯಾನ್ಸ್ ಅಧಿಕ ಇದ್ದಾರೆ.
ಟಾಲಿವುಡ್‌ನಲ್ಲಿ ಯಾರಾದರೂ ನಿಮ್ಮ ನೆಚ್ಚಿನ ನಾಯಕ ನಟ ಯಾರು ಅಂತ ಕೇಳಿದರೆ ಥಟ್ ಅಂತ ಮಹೇಶ್ ಬಾಬು ಹೆಸರು ಹೇಳಿ ಬಿಡುತ್ತಾರೆ. ಹೀಗಾಗಿ ಮಹೇಶ್ ಬಾಬು ತಮ್ಮ ಸೌಂದರ್ಯ ಹಾಗೂ ಅವರ ಹೇರ್‌ಸ್ಟೈಲ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಸದ್ಯ ರಾಜಮೌಳಿ ಜೊತೆಗೆ ಮಹೇಶ್ ಬಾಬು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೇರ್‌ಸ್ಟೈಲ್ ಬದಲಾಗಿದೆ. ಲಾಂಗ್ ಹೇರ್ ಅಲ್ಲಿಯೇ ಮಹೇಶ್ ಬಾಬು ಹೆಚ್ಚು ಗಮನ ಸೆಳೆದಿದ್ದಾರೆ.
ಮಹೇಶ್ ಬಾಬು ಆಸ್ತಿ ಬರೋಬ್ಬರಿ 330 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರತಿ ಸಿನಿಮಾಕ್ಕೂ 50ರಿಂದ 80 ಕೋಟಿ ಚಾರ್ಜ್ ಮಾಡುತ್ತಾರೆ. ಹೀಗೆ ಹೆಚ್ಚು ಸಂಭಾವನೆ ಪಡೆಯುವ ಮಹೇಶ್ ಸೌಂದರ್ಯ ವೃದ್ಧಿಗೆ ಹೆಚ್ಚು ಖರ್ಚು ಮಾಡುತ್ತಾರೆ. ಒಟ್ಟಿನಲ್ಲಿ ಮಹೇಶ್ ಬಾಬು ಕೃತಕ ಕೂದಲು ಬಳಕೆ ಮಾಡ್ತಾರೆ ಎನ್ನುವ ಸುದ್ದಿ ಮಾತ್ರ ಅವರ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದೆ.












Click it and Unblock the Notifications