ಶಿವಣ್ಣ ಅಭಿನಯದ ‘ಘೋಸ್ಟ್’ ಅಬ್ಬರ: 10 ಸಾವಿರ ಚದರ ಅಡಿಯ ಪೋಸ್ಟರ್ ರಿಲೀಸ್!
ಹ್ಯಾಟ್ರಿಕ್ ಹೀರೋ ದೊಡ್ಮನೆಯ ದೊಡ್ಮಗ ನಟ ಶಿವರಾಜ್‌ಕುಮಾರ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕನ್ನಡಿಗರ ಎದುರು ಇಡುತ್ತಿದ್ದಾರೆ. ಇದೇ ರೀತಿ ಮೊನ್ನೆ ಮೊನ್ನೆ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರು ನಟ ಶಿವರಾಜ್‌ಕುಮಾರ್. 'ಘೋಸ್ಟ್' ಈಗಾಗಲೇ ರಾಜ್ಯದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ರಿಲೀಸ್ ಆಗಿ ಅಬ್ಬರಿಸಿದೆ. ಹೀಗಿದ್ದಾಗಲೇ ಘೋಸ್ಟ್ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ.
ಒಟಿಟಿ ಅಂಗಳದಲ್ಲಿ 'ಜೀ5' ಒಳ್ಳೆ ಕಂಟೆಂಟ್ ಸಿನಿಮಾ ನೀಡ್ತಿದೆ. ಹೀಗೆಯೆ ಜೀ5 ಒಟಿಟಿಯಲ್ಲಿ ಹಿರಿಯ ನಟ ಶಿವರಾಜ್ ಕುಮಾರ್ ಅಭಿನಯಿಸಿರುವ ಘೋಸ್ಟ್ ಸಿನಿಮಾ ಧಮಾಕ ಎಬ್ಬಿಸುತ್ತಿದೆ. ಫುಲ್ ಎಂಟರ್‌ಟೈನ್‌ಮೆಂಟ್ ಜೊತೆ ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದ ಈ ಸಿನಿಮಾ ಇದೀಗ ಓಟಿಟಿ ಅಖಾಡಲ್ಲೂ ಅಬ್ಬರಿಸುತ್ತಿದೆ.

ನವೆಂಬರ್ 17ರಂದು ಜೀ5ನಲ್ಲಿ ರಿಲೀಸ್ ಆಗಿರುವ ಈ ಸಿನಿಮಾ ಜನರಿಗೆ ಮತ್ತಷ್ಟು ಇಷ್ಟವಾಗುತ್ತಿದೆ. ಶಿವಣ್ಣ ಅವರ ಚಿತ್ರವನ್ನ ಚಿತ್ರಮಂದಿರಗಳಲ್ಲಿ ನೋಡಲು ಆಗದೆ ಇದ್ದವರು ಸ್ಮಾಲ್ ಸ್ಕ್ರೀನ್‌ನಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಿದ್ದಾಗಲೇ ಅಭಿಮಾನಿಗಳಿಗೆ ಇನ್ನೊಂದು ಸರ್ಪ್ರೈಸ್ ಸಿಕ್ಕಿದೆ.
ಶಿವಣ್ಣನ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್!
ಅಷ್ಟಕ್ಕೂ ಘೋಸ್ಟ್ ಜೀ5ನಲ್ಲಿ ರಿಲೀಸ್ ಆಗಿರುವುದಕ್ಕೆ ಅದ್ದೂರಿಯಾಗಿ ಪ್ರಚಾರ ನಡೆಸಲಾಗಿದೆ. ಚಿತ್ರದ ಪ್ರಮೋಷನ್‌ಗೆ ಬರೋಬ್ಬರಿ ಹತ್ತು ಸಾವಿರ ಚದರ ಅಡಿ ಎತ್ತರದ 'ಘೋಸ್ಟ್' ಪೋಸ್ಟರ್ ಅನ್ನ ಜೀ5 ರಿಲೀಸ್ ಮಾಡಿಸಿದೆ. ಜಯನಗರದ, ಎಂಇಎಸ್ ಗ್ರೌಂಡ್ ನಲ್ಲಿ ಘೋಸ್ಟ್ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಆಗಿದೆ.
ಥಿಯೇಟರ್‌ನಲ್ಲಿ ರಿಲೀಸ್ ಆಗುವ ಸಿನಿಮಾಗಾಗಿ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದ್ರೆ ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ, ವಿಭಿನ್ನ ಪ್ರಚಾರ ಮಾಡಿದೆ 'ಜೀ ಕನ್ನಡ'. ಈ ಮೂಲಕ ಅಭಿಮಾನಿ ಬಳಗಕ್ಕೆ, ಮತ್ತೊಂದು ಸರ್ಪ್ರೈಸ್ ಸಿಕ್ಕಂತಾಗಿದೆ.

ತಾರೆಯರ ದಂಡೇ ನಟನೆ ಮಾಡಿತ್ತು
'ಘೋಸ್ಟ್' ಸಿನಿಮಾ ತನ್ನ ಮೊದಲ ಪೋಸ್ಟರ್ ಮೂಲಕವೇ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ, ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಹಾಗೇ ಸಿನಿಮಾದಲ್ಲಿ ಶಿವಣ್ಣ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಮಿಂಚಿದ್ದರು. ನಿರ್ದೇಶಕ ಶ್ರೀನಿ, ಶಿವರಾಜ್‌ಕುಮಾರ್ ಅವರನ್ನು ವಿಭಿನ್ನವಾಗಿ ತೆರೆ ಮೇಲೆ ತೋರಿಸಿ, ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದ್ದರು. ಅಲ್ಲದೆ ಫ್ಯಾನ್ಸ್ ಕೂಡ ಇದನ್ನು ಎಂಜಾಯ್ ಮಾಡಿದ್ದರು. ಇದೀಗ ಮೊಬೈಲ್ ಸ್ಕ್ರೀನ್ ಮೇಲೂ 'ಘೋಸ್ಟ್' ಅಬ್ಬರ ಶುರು ಆಗಿದೆ.
'ಸಂದೇಶ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿ 'ಘೋಸ್ಟ್' ನಿರ್ಮಾಣವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಅಬ್ಬರ ತೋರಿತ್ತು ಸಿನಿಮಾ. ಇನ್ನು ಈ ಸಿನ್ಮಾಗೆ ಅರ್ಜುನ್ ಜನ್ಯಾ ಸಂಗೀತ ಇದೆ. ನಟ ಶಿವಣ್ಣ ಅವರ ಜೊತೆಗೆ ಮಲಯಾಳಂ ನಟ ಜಯರಾಮ್ & ಬಾಲಿವುಡ್ ನಟ ಅನುಪಮ್ ಖೇರ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಮತ್ತು ಇತರರು ಸಾಥ್ ನೀಡಿದ್ದರು. ಹೀಗಾಗಿ ಸಿನಿಮಾ ಭಾರತದ ಮೂಲೆ ಮೂಲೆಯಲ್ಲು ಸದ್ದು ಮಾಡಿತ್ತು. ಈಗ ಓಟಿಟಿ ಅಂಗಳದಲ್ಲೂ ದಾಖಲೆ ಬರೆಯಲು ಸಜ್ಜಾಗಿದೆ.












Click it and Unblock the Notifications