Tharun Sudhir: ತರುಣ್-ಸೋನಲ್ ಮದುವೆ ಬಗ್ಗೆ ಕೊಟ್ರು ಗುಡ್ ನ್ಯೂಸ್; ಎಲ್ಲಿ ಪ್ರೀತಿ ಶುರುವಾಗಿತ್ತೋ ಅಲ್ಲಿಯೇ ಪ್ರೀ-ವೆಡ್ಡಿಂಗ್
ಬೆಂಗಳೂರು, ಜುಲೈ 22: ತರುಣ್ ಸುಧೀರ್ ಅವರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ. ನಟಿ ಸೋನಲ್ ಮೊಂತೆರೋ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ಸ್ಯಾಂಡಲ್ವುಡ್ನ ಭರವಸೆಯ ನಟಿ ಎನಿಸಿಕೊಂಡಿದ್ದಾರೆ. ಸದ್ಯ ತರುಣ್ ಸುಧೀರ್ ಹಾಗೂ ಸೋನಲ್ ಅವರು ಮದುವೆ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ.
ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ದಾಂಪತ್ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವಿಶೇಷ ಫೋಟೋಶೂಟ್ ಮೂಲಕ ಮದುವೆ ಬಗ್ಗೆ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.

ತರುಣ್ ಸುಧೀರ್ ಅವರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ. ನಟಿ ಸೋನಲ್ ಮೊಂತೆರೋ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಸಿನಿಮಾದಲ್ಲಿ ಸೋನಲ್ ನಟಿಸಿದ್ದರು.
ಇನ್ನು, ಸಿನಿಮಾ ಮಾಡುವಾಗಲೇ ಇಬ್ಬರ ಮಧ್ಯೆ ಪ್ರೀತಿಯಾಗಿದ್ದು, ಇದೀಗ ತರುಣ್ ಹಾಗೂ ಸೋನಲ್ ಥಿಯೇಟರ್ನಲ್ಲೇ ಪ್ರೀ-ವೆಡ್ಡಿಂಗ್ ವಿಡಿಯೋ ಮಾಡಿಸಿದ್ದಾರೆ. ಪ್ರೀತಿ ಶುರುವಾದ ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿರುವುದು ವಿಶೇಷವಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಆಗಸ್ಟ್ 10-11ರಂದು ಇವರ ವಿವಾಹ ನೆರವೇರಲಿದೆ.
ಕಪ್ಪು ಬಣ್ಣ ಮತ್ತು ಲೈಟ್ ಬಣ್ಣದ ಉಡುಗೆಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿ ಮದುವೆ ಬಗ್ಗೆ ಇಬ್ಬರೂ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ ಹಲವು ವದಂತಿಗಳಿಗೆ ತರುಣ್ ಸುಧೀರ್ ಹಾಗೂ ನಟಿ ಸೋನಲ್ ತೆರೆ ಎಳೆದಿದ್ದಾರೆ.ಇದೇ ಆಗಸ್ಟ್ 10ರಂದು ಸೋನಲ್ ಮತ್ತು ತರುಣ್ ಸುಧೀರ್ ಆರತಕ್ಷತೆ, ಆ.11ರಂದು ಮದುವೆ ನಿಶ್ಚಯವಾಗಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಈ ಜೋಡಿಯ ಮದುವೆ ಸಂಭ್ರಮ ಜರುಗಲಿದೆ.












Click it and Unblock the Notifications