ಬಿಗ್‌ ಬಾಸ್‌ ಮನೆಗೆ ಈ ಸ್ಟಾರ್‌ ನಟಿ ಬರೋದು ಫಿಕ್ಸ್‌? ಈ ಬಾರಿ ವಿನ್ನರ್‌ ಇವರೇ ಅಂತಿದ್ದಾರೆ ಫ್ಯಾನ್ಸ್‌ !

ಇಂದು (ಸೆಪ್ಟೆಂಬರ್ 2) ಕಿಚ್ಚ ಸುದೀಪ್‌ ಹುಟ್ಟುಹಬ್ಬ. ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಸಿನಿರಂಗದವ್ರು ತಮ್ಮದೇ ರೀತಿಯಲ್ಲಿಯೇ ಶುಭಾಶಯ ತಿಳಿಸಿದ್ದಾರೆ. ಇತ್ತ ನಟ ಕಿಚ್ಚ ಸುದೀಪ್ ಬರ್ತ್‌ಡೇಯನ್ನ ಫ್ಯಾನ್ಸ್ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದೇ ಸಂಭ್ರಮವನ್ನ ಹೆಚ್ಚಿಸಲು ಕಲರ್ಸ್ ಕನ್ನಡ ವಾಹಿನಿ ಮುಂದಾಗಿದೆ. ಬಿಗ್ ಬಾಸ್ ಕನ್ನಡ 12 ಆರಂಭಿಕ ದಿನಾಂಕವನ್ನ ಈಗಾಗಲೇ ಖುದ್ದು ಕಿಚ್ಚ ಸುದೀಪ್ ಅವರೇ ರಿವೀಲ್ ಮಾಡಿದ್ದಾರೆ. ಸೆಪ್ಟೆಂಬರ್ 28 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಲಿದೆ. ಇನ್ನೂ ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಸೀಸನ್‌ ಯಾವೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಇನ್ನೇನೂ ಕೆಲವೇ ಕೆಲವು ದಿನಗಳಲ್ಲಿ ಶುರುವಾಗಲಿದೆ. ಬಿಗ್‌ ಬಾಸ್‌ ಶುರುವಾಗುವ ದಿನ ಹತ್ತಿರವಾಗ್ತಿದ್ದಂತೆ ಕಂಟೆಸ್ಟಂಟ್‌ ಹೆಸರು ಸಹ ವೈರಲ್‌ ಆಗುತ್ತಿದೆ. ಸಂಭಾಗ್ಯ ಕಂಟೆಸ್ಟಂಟ್‌ ಗಳ ಪಟ್ಟಿ ವೈರಲ್‌ ಆಗುತ್ತಿದ್ದು, ಸೋಶಿಯಲ್‌ ಮೀಡಿಯಾ ಸ್ಟಾರ್ಸ್‌, ಸಿರಿಯಲ್‌ ಸ್ಟಾರ್‌ ಹಾಗೂ ಕನ್ನಡ ಚಿತ್ರರಂಗದ ಸ್ಟಾರ್‌ ನಟಿ ಬರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಹಿಂದೆ ಕನ್ನಡದ ಖ್ಯಾತ ನಟಿ ಶೃತಿ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್ 3 ರಲ್ಲಿ ಬಂದಿದ್ದರು. ಅವರೇ ವಿನ್ನರ್‌ ಕೂಡ ಆದರು. ಅದೇ ರೀತಿ ಈ ಬಾರೀ ಕನ್ನಡದ ಮತ್ತೊಬ್ಬ ಖ್ಯಾತ ನಟಿ ಬರಲಿದ್ದಾರೆ ಎನ್ನಲಾಗುತ್ತಿದೆ.

sudharani may come to the bigg boss kannada season 12

ಬಿಗ್ ಬಾಸ್ ಕನ್ನಡ ಸೀಸನ್ 3 ರಲ್ಲಿ ನಟಿ ಶ್ರುತಿ ಅವರು ವಿನ್ನರ್‌ ಆಗಿದ್ದರು. ನಟಿ ಶ್ರುತಿ ಬಳಿಕ ಇದುವರೆಗೆ ಯಾವ ಮಹಿಳಾ ಸ್ಪರ್ಧಿಯೂ ಬಿಗ್‌ ಬಾಸ್‌ ಗೆದ್ದಿಲ್ಲ. ಬರೋಬ್ಬರಿ 11 ಸೀಸನ್‌ ನಲ್ಲಿ ಒಮ್ಮೆ ಮಾತ್ರ ಮಹಿಳಾ ಸ್ಪರ್ಧಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಈ ಬಾರಿ ಬಿಗ್‌ ಬಾಸ್‌ ತಂಡ ಭರ್ಜರಿ ಪ್ಲಾನ್‌ ಒಂದನ್ನು ಮಾಡಿದ್ದು, ಕನ್ನಡದ ಹಿರಿಯ ನಟಿಯೊಬ್ಬರನ್ನು ದೊಡ್ಮೆನೆಗೆ ಕರೆತರಲಿದೆ ಎನ್ನಲಾಗುತ್ತಿದೆ. ನಟಿ ಶ್ರುತಿ ಅವರಂತೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟಿ ಸುಧಾರಾಣಿ ಅವರು ಈ ಬಾರೀ ಬಿಗ್‌ ಬಾಸ್‌ ಕನ್ನಡ ಸೀಸನ್‌ಗೆ ಬರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಈಗಾಗಲೇ ಬಿಗ್‌ ಬಾಸ್‌ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಸಂಭಾವ್ಯ ಪಟ್ಟಿಯೂ ಸಹ ವೈರಲ್‌ ಆಗುತ್ತಿದೆ. ಈ ನಡುವೆ ನಟಿ ಸುಧಾರಾಣಿ ಬಿಗ್‌ ಬಾಸ್‌ ಮನೆಗೆ ಬರುವ ಸಾಧ್ಯತೆಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಸುಧಾರಾಣಿ ಏನಾದರೂ ಬಿಗ್‌ ಬಾಸ್‌ಗೆ ಕನ್ನಡಕ್ಕೆ ಬಂದರೆ ಅವರೇ ಗೆಲ್ಲುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಈಗಾಗಲೇ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಅಂತ್ಯವಾಗುತ್ತಿದೆ. ಕನ್ನಡದ ನಟಿ ಸುಧಾರಾಣಿ ಇದರಲ್ಲಿ ಲೀಡ್‌ ರೋಲ್‌ ಮಾಡುತ್ತಿದ್ದರು. ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿ ಅಂತ್ಯವಾಗಿದ್ದು, ಇದೀಗ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ಎನ್ನಲಾಗಿದೆ. ಈ ಬಾರೀ ದೊಡ್ಮನೆಗೆ ನಟಿ ಸುಧಾರಾಣಿ ಬಿಗ್‌ ಬಾಸ್‌ ಗೆ ಬರುವ ವದಂತಿ ಹರಿದಾಡುತ್ತಿದ್ದು, ಇದೇ ಸಮಯದಲ್ಲಿ ಸೀರಿಯಲ್‌ ಸಹ ಮುಕ್ತಾಯಗೊಂಡಿದ್ದು ಈ ವದಂತಿಗೆ ಪುಷ್ಟಿ ಸಿಕ್ಕಂತಗಿದೆ.

ಇದೀಗ ದೊಡ್ಮನೆಗೆ ಯಾರೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಬಗ್ಗೆ ಮತ್ತೊಂದು ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ಟ್ಯಾಂಡಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯ, ಕಿರುತೆರೆ ನಟ ಅಶೋಕ ಶರ್ಮಾ, ನಟಿ ಕಾವ್ಯ ಶೈವ, ಗಂಗಾವತಿ ಪ್ರಣೇಶ್, ಹಿರಿಯ ನಟಿ ಸುಧಾರಾಣಿ ಮುಂತಾದವರು ಬಿಗ್ ಬಾಸ್' ಮನೆಗೆ ಕಾಲಿಡುತ್ತಾರೆ ಅಂತ ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+