Shiva Rajkumar: ನನ್ನ ಆರೋಗ್ಯದ ಬಗ್ಗೆ ಸುದೀಪ್, ಯಶ್, ರಕ್ಷಿತ್‌ಗೆ ಗೊತ್ತು: ಯಾರಿಂದನೂ ಮುಚ್ಚಿಡಬಾರದು ಎಂದ ಶಿವಣ್ಣ!

ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್‌ಕುಮಾರ್ 'ಭೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿಸಿದ್ದು, ಅವರು ಬೇರೆ ಎಲ್ಲ ಸಿನಿಮಾಗಳ ಡೇಟ್ಸ್‌ ಅನ್ನು ಸದ್ಯ ಕ್ಯಾನ್ಸಲ್ ಮಾಡಿಸಿದ್ದಾರೆ. ಕಾರಣ, ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯಲಿದ್ದು, ನಟ ಶಿವಣ್ಣ ಬೇಗ ಹುಶಾರಾಗಿ ಬರಲಿ ಎಂಬುದು ಕರುನಾಡು ಜನತೆ ಹಾರೈಸುತ್ತಿದ್ದಾರೆ.

ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್‌ಕುಮಾರ್ ಗಂಭೀರ ಖಾಯಿಲೆಗೆ ತುತ್ತಾಗಿದ್ದಾರೆ. ಚಿಕಿತ್ಸೆಗಾಗಿ ಸದ್ಯದಲ್ಲೇ ಶಿವಣ್ಣ ಅಮೆರಿಕಾಗೆ ತೆರಳಲಿದ್ದು, ನಾಲ್ಕು ಸೆಷನ್ ಟ್ರೀಟ್‌ಮೆಂಟ್ ಬಳಿಕ 2025ರ ಜನವರಿಯಲ್ಲಿ ನಟ ಶಿವರಾಜ್‌ಕುಮಾರ್ ಅವರಿಗೆ ಅಮೆರಿಕಾದಲ್ಲಿ ಸರ್ಜರಿ ಆಗಲಿದೆ . ಹೀಗಾಗಿ ಶಿವಣ್ಣ ಅವರು ಸದ್ಯ ಎಲ್ಲ ಸಿನಿಮಾಗಳ ಶೂಟಿಂಗ್ ಪೋಸ್ಟ್‌ಪೋನ್ ಮಾಡಿದ್ದಾರೆ ಎಂದು ಹೇಳಲಾಗಿದೆ. ನಟ ಶಿವಣ್ಣ ಬೇಗ ಹುಶಾರಾಗಿ ಬರಲಿ ಎಂಬುದು ಕರುನಾಡು ಸೇರಿದಂತೆ ಅವರ ಎಲ್ಲ ಅಭಿಮಾನಿಗಳ ಹಾರೈಕೆಯಾಗಿದೆ. ಇದೀಗ ಈ ಸುದ್ದಿ ಎಲ್ಲಾ ಕಡೆ ಹರಡಿದ್ದು, ಕರುನಾಡ ಚಕ್ರವರ್ತಿ ಶಿವಣ್ಣ ಶೀಘ್ರ ಗುಣಮುಖರಾಗಿ ಬರಲಿ ಎಂದು ಅಸಂಖ್ಯಾತ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Sudeep Yash Also Knows About His Health Issues Says Shiva Rajkumar

ಕನ್ನಡದ ನಟ ಶಿವರಾಜ್‌ಕುಮಾರ್‌ ಅವರು ತೆಲುಗು ನಟ ರಾಮ್‌ಚರಣ್ ಜೊತೆಗೂಡಿ 'RC-16' ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಸದ್ಯ ಅನಾರೋಗ್ಯದ ಕಾರಣಕ್ಕೆ ಇದನ್ನು ಮುಂದೂಡಲಾಗಿದೆ. ಟ್ರೀಟ್‌ಮೆಂಟ್ ಬಳಿಕ ಶೂಟಿಂಗ್ ಟೀಮ್ ಸೇರಿಕೊಳ್ಳಲಿದ್ದಾರಂತೆ ಎನ್ನಲಾಗಿದೆ.

ಇನ್ನೂ ಆರೋಗ್ಯದ ಕುರಿತು ನಟ ಶಿವಣ್ಣ ಅವರು ಮಾತನಾಡಿ, ನಾನು ನನ್ನ ಅನಾರೋಗ್ಯವನ್ನು ನನ್ನ ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ. ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನು ಕೂಡ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ. ಹೌದು, ನನಗೆ ಹುಶಾರಿಲ್ಲ, ಆದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಅಮೆರಿಕಾದಲ್ಲಿ ಟ್ರೀಟ್‌ಮೆಂಟ್‌ ಹಾಗೂ ಸರ್ಜರಿ ನಡೆಯಲಿದೆ ಎಂದಿದ್ದಾರೆ.

ಸಹಜವಾಗಿಯೇ ನಟ ಶಿವಣ್ಣರ ಅಭಿಮಾನಿಗಳು ಆತಂಕಕ್ಕೆ ಈಡಾಗುತ್ತಾರೆ. ಆದರೆ ಆ ಬಗ್ಗೆ ಸ್ವತಃ ಶಿವಣ್ಣ 'ನನ್ನ ಅನಾರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಲೂ ನಾನು ಶೂಟಿಂಗ್ ಹಾಗೂ ರಿಯಾಲಿಟಿ ಶೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಕಿತ್ಸೆಗೆ ಹೋಗಿಬಂದ ಬಳಿಕ ಮತ್ತೆ ನನ್ನ ಕೆಲಸವನ್ನು ಎಂದಿನಂತೆ ಮುಂದುವರಿಸಲಿದ್ದೇನೆ' ಎಂದಿದ್ದಾರೆ.

'ಅಭಿಮಾನಿಗಳಿಂದ ಯಾವುದನ್ನೂ ಮುಚ್ಚಿಡಬೇಕಾದ ಅಗತ್ಯ ನನಗಿಲ್ಲ ಎಂದಿರುವ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು, ಹೊರಗಡೆ ಜಗತ್ತಿಗೆ ಎಷ್ಟು ಮಾಹಿತಿ ನೀಡಬೇಕೋ ಅಷ್ಟನ್ನು ನೀಡಿದ್ದಾರೆ. ನಟ ಶಿವರಾಜ್‌ಕುಮಾರ್ ಅವರೇ ಸ್ವತಃ ಹೇಳಿದಂತೆ 'ನನ್ನ ಅನಾರೋಗ್ಯ ಹಾಗು ಕಂಡೀಷನ್ ಬಗ್ಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ಸುದೀಪ್, ಯಶ್, ರಕ್ಷಿತ್ ಸೇರಿದಂತೆ ಅನೇಕರಿಗೆ ತಿಳಿದಿದೆ. ಈ ಬಗ್ಗೆ ನನ್ನ ಎಲ್ಲಾ ಆಪ್ತರು ಬಹಳಷ್ಟು ಧೈರ್ಯ ಹೇಳಿದ್ದಾರೆ ಎಂದು ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌ ಅವರು ಹೇಳಿದರು.

ನನಗೆ ಆ ಖಾಯಿಲೆ ಬಂದುಬಿಟ್ಟಿದೆ. ಆ ಬಗ್ಗೆ ಪ್ರಾರಂಭದಲ್ಲಿ ನಾನು ಭಯಪಟ್ಟರೂ ಈಗ ಧೈರ್ಯ ತಂದುಕೊಂಡಿದ್ದೇನೆ. ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ, ಮುಂದೆಯೂ ತೆಗೆದುಕೊಳ್ಳಲಿದ್ದೇನೆ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+