Max Movie: ಕಿಚ್ಚ ಸುದೀಪ್‌ರ ಮ್ಯಾಕ್ಸ್ ಸಿನಿಮಾ ಬಗ್ಗೆ ಎಸ್‌ಎಸ್ ರಾಜಮೌಳಿ ಹೇಳಿದ್ದೇನು?
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ಕೂಡ ಸಿನಿಮಾವನ್ನು ಬಿಡುಗಡೆ ಮಾಡಿದ್ದೂ ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಟಿಗೊಬ್ಬ 2 ಸಿನಿಮಾ ಬಳಿಕ ಎಲ್ಲರಿಗೂ ಇಷ್ಟವಾದ ಸಿನಿಮಾ ಮ್ಯಾಕ್ಸ್ ಎಂದು ಸುದೀಪ್ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ತೆಲುಗು, ತಮಿಳು ಸಿನಿಮಾ ಅಭಿಮಾನಿಗಳೂ ಕೂಡ ಮ್ಯಾಕ್ಸ್ ನೋಡಿ ಮ್ಯಾಕ್ಸಿಮಮ್ ಮನರಂಜನೆ ಸಿಕ್ಕಿದೆ ಸ್ವಾಮಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ವರ್ಷ ಕನ್ನಡದ ದೊಡ್ಡ ಹಿಟ್ ಸಿನಿಮಾ ಆಗುವ ಎಲ್ಲಾ ಮುನ್ಸೂಚನೆಯನ್ನು ಮ್ಯಾಕ್ಸ್ ಕೊಟ್ಟಿದೆ. ಒಂದೇ ವಾರದ ಅಂತರದಲ್ಲಿ ಬಿಡುಗಡೆಯಾದ ಯುಐ ಮತ್ತು ಮತ್ತು ಮ್ಯಾಕ್ಸ್ ಗೆದ್ದಿರುವುದು ಕನ್ನಡ ಸಿನಿ ಪ್ರೇಕ್ಷಕರ ಖುಷಿಯನ್ನು ಹೆಚ್ಚಿಸಿದೆ.

ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಕೂಡ ಇದೀಗ ಸುದೀಪ್‌ರ ಮ್ಯಾಕ್ಸ್ ಸಿನಿಮಾ ಬಗ್ಗೆ ಮಾತನಾಡಿದ್ದು ಸುದೀಪ್ ಅಭಿಮಾನಿಗಳ ಸಂತಸ ಹೆಚ್ಚಿಸಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ರಾಜಮೌಳಿ, ಮ್ಯಾಕ್ಸ್ ಸಿನಿಮಾದ ಭರ್ಜರಿ ಯಶಸ್ಸಿಗೆ ಕಿಚ್ಚ ಸುದೀಪ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮ್ಯಾಕ್ಸ್ ಸಿನಿಮಾದ ಭರ್ಜರಿ ಯಶಸ್ಸಿಗಾಗಿ ಕಿಚ್ಚ ಸುದೀಪ್ ಮತ್ತು ಸಿನಿಮಾ ತಂಡಕ್ಕೆ ಅಭಿನಂದನೆಗಳು. ನಿಮ್ಮ ಜನಪ್ರಿಯತೆಗೆ ಮಾಸ್ ಯಾವಾಗಲೂ ಹೊಂದಿಕೆಯಾಗುತ್ತದೆ. ಸಿನಿಮಾ ನೋಡಲು ನನಗೆ ಇನ್ನೂ ಸಮಯ ಸಿಕ್ಕಿಲ್ಲ, ಆದರೆ ಅತಿ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ಧನ್ಯವಾದ ತಿಳಿಸಿದ ಸುದೀಪ್
ಎಸ್‌ಎಸ್ ರಾಜಮೌಳಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಈ ಮಾತುಗಳು ಮ್ಯಾಕ್ಸ್ ತಂಡದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿವೆ. ಸಿನಿಮಾ ಬಗ್ಗೆ ನಿಮ್ಮ ಪ್ರತಿಕ್ರಿಯೆಗಾಗಿ ಎದುರುನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ದಾಖಲೆ ಬರೆಯುತ್ತಿರುವ ಮ್ಯಾಕ್ಸ್
ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬದ ದಿನ ಬಿಡುಗಡೆಯಾದ ಮ್ಯಾಕ್ಸ್ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಎರಡೇ ದಿನಗಳಲ್ಲಿ ಮತ್ತಷ್ಟು ಶೋಗಳನ್ನು ಹೆಚ್ಚಿಸಿಕೊಂಡಿದೆ. ಶನಿವಾರ ಮತ್ತು ಭಾನುವಾರ ಕೂಡ ಭರ್ಜರಿ ಕಲೆಕ್ಷನ್ ಮಾಡಿದ್ದು ಈ ವರ್ಷ ಬಿಡುಗಡೆಯಾದ ಕನ್ನಡ ಸಿನಿಮಾಗಳಲ್ಲೇ ಮ್ಯಾಕ್ಸ್ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿವೆ.
ಸಿನಿಮಾದ ಕಲೆಕ್ಷನ್ ಎಷ್ಟು ಎನ್ನುವುದನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲವಾದರೂ ಈಗಾಗಲೇ ಸಿನಿಮಾ 40 ರಿಂದ 50 ಕೋಟಿ ಕಲೆಕ್ಷನ್ ಮಾಡಿರದಬಹುದು ಎಂದು ಅಂದಾಜಿಸಲಾಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಕುಟುಂಬ ಸಮೇತ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿರುವುದು ಕನ್ನಡ ಸಿನಿಮಾರಂಗಕ್ಕೆ ಹೊಸ ವಿಶ್ವಾಸ ಬಂದಂತಾಗಿದೆ. ಮೊದಲ ಆರು ತಿಂಗಳು ದೊಡ್ಡ ಗೆಲುವನ್ನು ಕಾಣದ ಸ್ಯಾಂಡಲ್‌ವುಡ್, ಕಳೆದ ಮೂರು ತಿಂಗಳಿನಿಂದ ಬಘೀರ, ಭೈರತಿ ರಣಗಲ್, ಯುಐ, ಮ್ಯಾಕ್ಸ್ ಸಿನಿಮಾಗಳ ದೊಡ್ಡಮಟ್ಟದ ಯಶಸ್ಸಿಗೆ ಸಾಕ್ಷಿಯಾಗಿದೆ.












Click it and Unblock the Notifications