Majaa Talkis Kannada: ಸೃಜನ್ ಲೋಕೇಶ್ ಗುಡ್ ನ್ಯೂಸ್: ಮಜಾ ಟಾಕೀಸ್ ಮತ್ತೆ ಶುರು, ನೀವ್ ರೆಡಿನಾ!

ಬೆಂಗಳೂರು, ಡಿಸೆಂಬರ್ 12: ಸತತ 9 ವರ್ಷಗಳ ಕಾಲ ಪ್ರೇಕ್ಷಕರನ್ನು ನಗಿಸಿದ್ದ ಕನ್ನಡದ ಮಸ್ತ್ ರಿಯಾಲಿಟಿ ಶೋ ಸೃಜನ್ ಲೋಕೇಶ್ ಅವರ 'ಮಜಾ ಟಾಕೀಸ್ 2025' (Majaa Talkis 2025 Kannada) ಮತ್ತೆ ಹೊಸ ಆವೃತ್ತಿ ಆರಂಭವಾಗಲಿದೆ. ಈ ಮೂಲಕ ನಟ, ಟಾಕಿಂಗ್ ಸ್ಟಾರ್ ಸೃಜನ್ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬುಧವಾರ ಶೋ ಆರಂಭದ ಬಿಗ್ ಅಪ್ಡೇಟ್ ಅವರು ನೀಡಿದ್ದಾರೆ.

ಹೌದು, ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಟ ಸೃಜನ್ ಅವರು 2025ರಲ್ಲಿ ಮಜಾ ಟಾಕೀಸ್ ಆರಂಭಿಸಿದ್ದರು. ಅದಕ್ಕೀಗ 10 ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಮತ್ತೆ ಕಾಮಿಡಿ ಶೋ ಆರಂಭಿಸುವುದಾಗಿ ಖುದ್ದು ನಟ ಸೃಜನ್ ಲೋಕೇಶ್ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.

Srujan Lokesh Shares Majaa Talkies 2025 Promo Video Comedy Show Start Soon

ಕಲರ್ಸ್ ಕನ್ನಡ ಅಫೀಸಿಯಲ್ ಇನ್ಸ್‌ಟಾಗ್ರಾಮ್‌ನಲ್ಲಿ 'ಮಜಾ ಟಾಕೀಸ್' ಪ್ರೊಮೋ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ನಾವು ಈ ಶೋಗಾಗಿ ಕಾಯುತ್ತಿದ್ದೆವು, ಬೇಗ ಡೇಟ್ ಅನೌನ್ಸ್ ಮಾಡಿ ಎಂದೆಲ್ಲ ಪ್ರೀತಿಯಿಂದ ಒತ್ತಾಯಿಸುತ್ತಿದ್ದಾರೆ.

ಯಾರೆಲ್ಲ ಕಲಾವಿದರು ಇರಲಿದ್ದಾರೆ?

2015ರಲ್ಲಿ ಶೋ ಶುರುವಾದಾಗಿನಿಂದ ಇಲ್ಲಿಯವರೆಗೆ ನಟ ಸೃಜನ್ ಲೋಕೇಶ್ ಅವರೊಂದಿಗೆ ನಟಿ ಶ್ವೇತಾ ಚೆಂಗಪ್ಪ, ಅಪರ್ಣಾ, ಪೂಜಾ ಲೋಕೇಶ್, ಮಂಡ್ಯ ರಮೇಶ್, ವಿ.ಮನೋಹರ್, ಮಿಮಿಕ್ರಿ ದಯಾನಂದ್, ಕುರಿ ಪ್ರತಾಪ್ ಹೀಗೆ ಅನೇಕ ಸ್ಯಾಂಡಲ್‌ವುಡ್ ಕಲಾವಿದರ ದಂಡ ಇದೆ. ಈ ಭಾರಿಯು ಇದೇ ತಂಡ ಮುಂದುವರಿಯಲಿದೆ.

ಈ ಎಲ್ಲ ಕಲಾವಿದರು ಶೋ ಮೂಲಕ ನಾಡಿನ ಜನರನ್ನು ನಕ್ಕು ನಗಿಸಿದ್ದಾರೆ. ಹೊಸ ವರ್ಷಕ್ಕೆ ಕಲರ್ಸ್ ಕನ್ನಡ ವಾಹನಿ ಮೂಲಕ ಮತ್ತೆ ನಿಮ್ಮೆಲ್ಲರನ್ನು ನಗಿಸಲು ಬರುತ್ತಿದ್ದಾರೆ.

ಮಜಾ ಟಾಕೀಸ್ ಪ್ರೊಮೋ ಅಪ್ಡೇಟ್ ಏನು?

ಬಿಡುಗಡೆಯಾದ ಪ್ರೊಮೋದಲ್ಲಿ ಸೃಜನ್ ಲೋಕೇಶ್ ಅವರು ಆರತಿ ತಟ್ಟೆಗೆ ಕೈಮುಗಿಯುವ ಮೂಲಕ ವಿಡಿಯೋ ಶುರುವಾಗುತ್ತದೆ. 'ವಿಶೇಷ ಇದೆ ಅದ್ಭುತವಾದ ವಿಶೇಷ ಇದೆ. ನೇರವಾಗಿ ವಿಷಯಕ್ಕೆ ಬರುತ್ತಿನಿ' ಎನ್ನುವ ಮೂಲಕ ಶೋ ಆರಂಭವನ್ನು ಖಚಿತಪಡಿಸಿದ್ದಾರೆ. ಯಾವಾಗ ಎಂಬ ದಿನಾಂಕ ಶೀಘ್ರವೇ ಗೊತ್ತಾಗಲಿದೆ.

2018ರಲ್ಲಿ ಮಜಾ ಟಾಕೀಸ್ ಸೂಪರ್ ಸೀಸನ್ ಆರಂಭವಾಗಿತ್ತು. ನಂತರ 2020ರಲ್ಲಿ ಮಜಾ ಟಾಕೀಸ್ ಹೆಸರಲ್ಲಿ ಶೋ ಆರಂಭವಾಗಿತ್ತು. ನಂತರ ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಸೃಜನ್ ಕಾಣಿಸಿಕೊಂಡರು. ಮಜಾ ಟಾಕೀಸ್‌ನಿಂದ ಕೊಂಚ ವಿರಾಮ ಪಡೆದಿದ್ದ ಸೃಜನ್ ಲೋಕೇಶ್ ಅವರೀಗ ಪೂರ್ಣವಾಗಿ ತಮ್ಮನ್ನು 'ಮಜಾ ಟಾಕೀಸ್ 2025' ಶೋ ನಲ್ಲಿ ತೊಡಗಿಸಿಕೊಳ್ಳುವುದು ಖಚಿತವಾಗಿದೆ.

ನಟಿ ಅಪರ್ಣಾ ಇಲ್ಲದ ಶೋ..

ಈ ಬಾರಿ ನಟಿ, ಅಚ್ಚಕನ್ನಡದ ನಿರೂಪಕಿ ಅಪರ್ಣಾ ಅವರು ಇರುವುದಿಲ್ಲ ಎಂಬುದೇ ಅಭಿಮಾನಿಗಳಿಗೆ ದುಃಖದ ವಿಷಯವಾಗಿದೆ. ಅನಾರೋಗ್ಯದಿಂದ ನಿಧನರಾದ ನಟಿ ಅಪರ್ಣಾ ಅವರು ಇದೇ ಮಜಾ ಟಾಕೀಸ್ ಕಾಮಿಡಿ ಶೋನಲ್ಲಿ ಜಾಗ ಪಡೆದಿದ್ದರು. ಅಭಿಮಾನಿಗಳನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದರು. ಜನರ ಮನಸ್ಸಿನಲ್ಲಿ ಧ್ವನಿಯಾಗಿ ಉಳಿದಿರುವ ಅಪರ್ಣಾ ಅವರು ಇಲ್ಲ ಎಂಬುದೇ ನಿಜಕ್ಕೂ ಬೇಸರ ತರಿಸಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+