Sowcar Janaki: ದಕ್ಷಿಣ ಭಾರತದ ಹಿರಿಯ ನಟಿ ಸೌಕಾರ್ ಜಾನಕಿ ಇನ್ನಿಲ್ಲ; 94ನೇ ವಯಸ್ಸಿನಲ್ಲಿ ನಿಧನ

ಚೆನ್ನೈ: ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಹಿರಿಯ ಕಲಾವಿದರಲ್ಲಿ ಒಬ್ಬರಾದ ನಟಿ ಸೌಕಾರ್ ಜಾನಕಿ ಅವರು ಇಂದು ಶುಕ್ರವಾರ (ಆಗಸ್ಟ್ 21) ನಿಧನರಾದರು. ಇವರಿಗೆ 94 ವಯಸ್ಸ ವಯಸ್ಸಾಗಿದ್ದು, ವಯೋ ಸಹಜ ಕಾಯಿಲೇಯಿಂದ ಬಳಲುತ್ತಿದ್ದರು ಎಂದು ವರದಿ ಆಗಿದೆ.

ನಡಿಗರ್ ಸಂಗಮ್ ಅಧ್ಯಕ್ಷ ನಾಸರ್ ಅವರು ನೀಡಿರುವ ಮಾಹಿತಿ ಪ್ರಕಾರ, ಸೌಕಾರ್ ಜಾನಕಿ ಶುಕ್ರವಾರ ಮಧ್ಯಾಹ್ನ 1.59 ಕ್ಕೆ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಇಂದು ಸಂಜೆ ಚೆನ್ನೈನ ತೆನಾಂಪೇಟೆಯ ಸೆಂಟಾಫ್ ರಸ್ತೆಯಲ್ಲಿನ ಆವರಣದಲ್ಲಿ ಸಂಜೆ 5 ಗಂಟೆ ಇರಿಸಲಾಗುವುದು. ಕಲಾವಿದರು, ಚಿತ್ರರಂಗದ ಸದಸದ್ಯರು, ಬಂದು ಮಿತ್ರರು, ಆಪ್ತರು, ಅಭಿಮಾನಿಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ..

Sowcar Janaki

ಚಿತ್ರರಂಗದಲ್ಲಿ ದಶಕಗಳ ಕಾಲ ಸೇವೆ

ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸೇವೆ ನೀಡಿದ ಹಿರಿಯ ಕಲಾವಿದೆ ಸೌಕಾರ್ ಜಾನಕಿ ಅವರು ಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಸಿನಿಮಾ ವೃತ್ತಿ ಜೀವನವು ಸುದೀರ್ಘವಾಗಿತ್ತು. ಅನೇಕ ಖ್ಯಾತನಾಮರೊಂದಿಗೆ ನಟಿಸಿದ್ದಾರೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಬಣ್ಣ ಹಚ್ಚಿದ ಇವರ ಬಹುಮುಖ ಅಭಿನಯಕ್ಕಾಗಿ ಮನಸೋತವರೇ ಇಲ್ಲ. ತಮ್ಮ ನಟನೇ ಮೂಲಕವೇ ಇಡೀ ದಕ್ಷಿಣ ಭಾರತದ ಇಂಡಸ್ಟ್ರಿಗಳಲ್ಲಿ ಮನೆ ಮಾತಾಗಿದ್ದರು.

ಅಣ್ಣಾವ್ರ ಶಬ್ದವೇಧಿ ಸೇರಿ ಹಲವು ಸಿನಿಮಾಗಳಲ್ಲಿ ನಟನೆ

1955ರಲ್ಲಿ ತೆಲುಗು ಚಿತ್ರ ಸೌಕಾರ್‌ನಲ್ಲಿ ಅವರ ಅದ್ಭುತ ಪಾತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಇದಾಗಿ ಬಳಿಕವೇ ಅವರಿಗೆ ಅವರನ್ನು 'ಸೌಕಾರ್ ಜಾನಕಿ' ಅಂತಲೇ ಕರೆಯಲಾಗುತ್ತಿತ್ತು. ಸ್ಟಾರ್‍‌ಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದ ಶಬ್ದವೇದಿ ಸಿನಿಮಾದಲ್ಲಿ ಅಣ್ಣಾವ್ರ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಇದರೊಂದಿಗೆ ಸದಾರಮೆ, ರತ್ನಗಿರಿ ರಹಸ್ಯ, ತಾಯಿಗೆ ತಕ್ಕ ಸಿನಿಮಾಗಳಲ್ಲೂ ನಟಿಸಿದ್ದಾರೆ.

15ರಲ್ಲೇ ಮದುವೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನಟಿ

ಚಿತ್ರರಂಗಕ್ಕೆ ಬರುವ ಮುನ್ನ ಸೌಕಾರ್ ಜಾನಕಿ ಅವರ ಜೀವನ ಸಾಕಷ್ಟು ಕಷ್ಟಗಳಿಂದ ಕೂಡಿತ್ತು. ಇವರಿಗೆ ಹದಿನೈದನೇ ವಯಸ್ಸಿಗೆ ಮದುವೆ ಮಾಡಲಾಯಿತು. ನಂತರ ವಿಜಯವಾಡದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಕಡುಬಡತನದಿಂದ ತತ್ತರಿಸಿದ್ದ ಬಡ ಕುಟುಂಬವನ್ನು ದಡ ಸೇರಿಸಲು ಆಯ್ಕೆ ಮಾಡಿಕೊಂಡಿದ್ದು ಸಿನಿಮಾ ರಂಗ.

ಮದ್ರಾಸ್‌ಗೆ ಆಗಷ್ಟೇ ಬಂದಿದ್ದ ಅವರಿಗೆ ಅಲ್ಲೂ ಒಂದಷ್ಟು ಸವಾಲು ಕಷ್ಟಗಳು ಎದುರಾದವು. ನಿರಂತರ ಪ್ರಯತ್ನಗಳ ಫಲವಾಗಿ ಜೆಮಿನಿ ಸಂಸ್ಥೆಯ 'ಸೌಕಾರ್' ಚಿತ್ರದಲ್ಲಿ ಅವರಿಗೆ ನಟಿಸುವ ಅವಕಾಶ ದೊರೆಯಿತು. ಆ ಚಿತ್ರಕ್ಕೆ ಸಿಕ್ಕ 2,500 ರೂ. ಹಣ ಅವರು ಕುಟುಂಬಕ್ಕೆ ಅಂದು ಬಹುದೊಡ್ಡ ಆಸರೆಯಾಗಿತ್ತು.

ಆರ್ಥಿಕ ಅನಿವಾರ್ಯತೆ ಅವರು ಚಿತ್ರರಂಗಕ್ಕೆ ಬಂದರೂ ಸಹಿತ ಕಲೆ, ನಟನೆಯನ್ನೇ ತಮ್ಮ ಉಸಿರಾಗಿಸಿಕೊಂಡರು. ವರ್ಷಗಳು ಕಳೆದಂತೆ ದಕ್ಷಿಣ ಭಾರತದ ಲಕ್ಷಾಂತರ ಪ್ರೇಕ್ಷಕರ ಮನ ಗೆದ್ದ ಅವರ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಮಹತ್ವದ ಘಟನೆಗಳಿಗೂ ಅವರು ಸಾಕ್ಷಿಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+