ಬಂತು.. ಬಂತು.. ಬಂದೇ ಬಿಡ್ತು.. ‘ಡಂಕಿ ಡ್ರಾಪ್-3’ ಹೆಂಗಿದೆ ಗೊತ್ತಾ?

ಬಾಲಿವುಡ್ ನಟ ಶಾರುಖ್ ಖಾನ್ ಸಿನಿಮಾಗೆ ಕ್ಷಣಗಣನೆ ಆರಂಭವಾಗಿರುವ ಸಮಯದಲ್ಲೇ, ದಿನಕ್ಕೊಂದು ಸರ್ಪ್ರೈಸ್ ಸಿಗುತ್ತಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಶಾರುಖ್ ಸಿನಿಮಾನ ಸೆಲೆಬ್ರೇಟ್ ಮಾಡೋದಕ್ಕೆ ಅಭಿಮಾನಿಗಳು ಸಜ್ಜಾಗಿರುವ ಸಮಯದಲ್ಲಿ, 'ಡಂಕಿ ಡ್ರಾಪ್-3' ಬಂದೇ ಬಿಟ್ಟಿದೆ. ಹಾಗಾದರೆ ಏನಿದು 'ಡಂಕಿ ಡ್ರಾಪ್-3'?

ಯೆಸ್, ಶಾರುಖ್ ಖಾನ್ ಹಾಗೂ ರಾಜ್‌ ಕುಮಾರ್ ಹಿರಾನಿ ಈ ಕ್ರೇಜಿ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಂಕಿ' ಇನ್ನೇನು ಇದೇ ತಿಂಗಳ ಅಂತ್ಯಕ್ಕೆ ರಿಲೀಸ್ ಆಗಲಿದೆ. ಹೀಗೆ, ಶಾರುಖ್ ಖಾನ್ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಹೊಸ ಹೊಸ ದಾಖಲೆ ಸೃಷ್ಟಿಸೋಕೆ ಸಜ್ಜಾಗಿದ್ದಾರೆ. ಹೀಗಿದ್ದಾಗ ಪ್ರಚಾರ ಅಬ್ಬರ ಕೂಡ ಜೋರಾಗಿದೆ. ಡಂಕಿ ಡ್ರಾಪ್-1 ವಿಡಿಯೋ ಅನಾವರಣ ಮಾಡುವ ಮೂಲಕ ಪ್ರಮೋಷನ್ ಶುರು ಮಾಡಿದ್ದ ಚಿತ್ರತಂಡ ಡಂಕಿ ಡ್ರಾಪ್-3ಗೆ ಎಂಟ್ರಿ ಕೊಟ್ಟಿದೆ!

Shah Rukh Fans Wait Is Almost Over And Another Song From Dunki Movie Has Been Released

ಶಾರುಖ್ ಸಿನಿಮಾದ ಸಾಂಗ್ ಹೇಗಿದೆ?

ಅಷ್ಟಕ್ಕೂ 'ಡಂಕಿ ಡ್ರಾಪ್-3' ಟೈಟಲ್ ಅಡಿ 'ಡಂಕಿ' 2ನೇ ಹಾಡನ್ನ ರಿಲೀಸ್ ಮಾಡಲಾಗಿದೆ. ಡಂಕಿ ಸಿನಿಮಾದ ಲುಟ್ ಪುಟ್ ಗಯಾ ಹಾಡು ಮೋಡಿ ಮಾಡುತ್ತಿದೆ. ಶಾರುಖ್ ಹಾಗೂ ತಾಪ್ಸಿ ನಡುವಿನ ಪ್ರೇಮಗೀತೆ ಹಿಟ್ ಲೀಸ್ಟ್ ಸೇರಿದೆ. ಇದೀಗ ಡಂಕಿ ಸಿನಿಮಾದ ಎಮೋಷನಲ್ ನಂಬರ್ ಬಿಡುಗಡೆಯಾಗಿದೆ. 'ನಿಕ್ಲೆ ದ ಕಭಿ ಹಮ್ ಘರ್ ಸೆ' ಎಂಬ ಸಾಹಿತ್ಯದ ಸಾಂಗ್ ರಿಲೀಸ್ ಆಗಿದೆ. ಜಾವೇದ್ ಅಖ್ತಾರ್ ಸಾಹಿತ್ಯ ಬರೆದಿದ್ದು, ಸೋನು ನಿಗಂ ಕಂಠ ಕುಣಿಸಿದ್ದು, ಪ್ರೀತಂ ಸಂಗೀತ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ..

ಶಾರುಖ್ + ಹಿರಾನಿ= ಬ್ಲಾಕ್ ಬಸ್ಟರ್!

'ಡಂಕಿ' ಇಡೀ ಜಗತ್ತೇ ಕಾಯುತ್ತಿರುವ ಸಿನಿಮಾ ಆಗಿದ್ದು ನಾಲ್ಕು ಜನ ಸ್ನೇಹಿತರು ದೇಶವನ್ನ ಬಿಟ್ಟು ಮತ್ತೊಂದು ದೇಶಕ್ಕೆ ಹೋಗುವುದೆ ಚಿತ್ರ ಕಥೆ. ಆ ಕಥೆ ಎಮೋಷನಲ್ ಪಯಣವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. '3 ಇಡಿಯಟ್ಸ್' 'ಲಗೆ ರಹೋ ಮುನ್ನಾಭಾಯಿ' 'ಪಿಕೆ' 'ಸಂಜು' 'ಮುನ್ನಾಭಾಯಿ ಎಂಬಿಬಿಎಸ್' ರೀತಿಯ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ರಾಜ್ಕುಮಾರ್ ಹಿರಾನಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ಸೇರಿ 'ಡಂಕಿ' ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾದಲ್ಲಿ ಶಾರುಖ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು ವಿಕ್ಕಿ ಕೌಶಲ್ ಸೇರಿ ಇನ್ನೂ ಪ್ರಮುಖ ಸ್ಟಾರ್‌ಗಳು ನಟಿಸಿದ್ದಾರೆ. ಭಾರತದಿಂದ ಅಕ್ರಮವಾಗಿ ಕೆಲವು ಯುವಕರು ವಿದೇಶಕ್ಕೆ ತೆರಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. 'ಡಂಕಿ' ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ & ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಮತ್ತೆ ಜಿಯೋ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 21ಕ್ಕೆ 'ಡಂಕಿ' ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+