ಎದೆಯ ಮೇಲೆ ಡಿ-ಬಾಸ್ ದರ್ಶನ್ ಟ್ಯಾಟೂ, ಅಭಿಮಾನದ ಅತಿರೇಕ ಮೆರೆದ ಮಹಿಳೆ?

ನಟ ದರ್ಶನ್ ಅಭಿಮಾನಿಗಳ ಪಾಲಿಗೆ 'ಡಿ-ಬಾಸ್' ಆಗಿದ್ದಾರೆ, ಸಾಕಷ್ಟು ಸವಾಲುಗಳನ್ನು ಎದುರಿಸಿ ಇಂದು ಈ ಹಂತಕ್ಕೆ ಬಂದಿದ್ದಾರೆ. ಆದರೂ ಆಗಾಗ ತಮ್ಮ ಕಾಂಟ್ರವರ್ಸಿ ಮಧ್ಯೆ ದೊಡ್ಡ ಸುದ್ದಿಯಾಗುತ್ತಾರೆ. ಇಷ್ಟೆಲ್ಲಾ ಇದ್ದರೂ ಅಭಿಮಾನಿಗಳು ಮಾತ್ರ ನಟ ದರ್ಶನ್‌ರ, ಮೇಲೆ ಇಟ್ಟಿರುವ ಅಭಿಮಾನ ಒಂದು ಚೂರು ಕೂಡ ಮರೆತಿಲ್ಲ. ಹೀಗಾಗಿ ದರ್ಶನ್ ಅವರ ಬಗ್ಗೆ ಅಭಿಮಾನದ ಪರಾಕಾಷ್ಠೆ ಮೆರೆಯುತ್ತಿದ್ದಾರೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನೇ ಮಾಡಿದ್ದರು ಈಗ ವಿವಾದದ ಸುಳಿಗೆ ಸಿಲುಕುತ್ತಾ ಇದ್ದಾರೆ. ನಿರ್ಮಾಪಕ ಉಮಾಪತಿ ಬಗ್ಗೆ ಬಾಯಿಗೆ ಬಂದಂತೆ ದರ್ಶನ್ ಅವರು ಮಾತನಾಡಿದ್ದಾರೆ ಅಂತಾ ಆರೋಪ ಕೇಳಿಬರುತ್ತಿದೆ. ನಟ ದರ್ಶನ್‌ ವಿರುದ್ಧ ಪೊಲೀಸ್ ಠಾಣೆಗೆ ಸಾಲು ಸಾಲು ಕಂಪ್ಲೇಂಟ್ ರಿಜಿಸ್ಟರ್ ಆಗುತ್ತಿದ್ದು, ಈಗ ಹೊಸ ತಲೆನೋವು ಶುರುವಾಗಿದೆ. ಇಷ್ಟೆಲ್ಲದರ ನಡುವೆ ಇದೀಗ ದರ್ಶನ್ ಅವರ ಮಹಿಳಾ ಅಭಿಮಾನಿ ತಮ್ಮ ಎದೆಯ ಮೇಲೆ ದರ್ಶನ್ ಅವರ ಟ್ಯಾಟೂನ ಹಾಕಿಸಿಕೊಂಡಿದ್ದಾರೆ. ಆ ವಿಡಿಯೋ ಕಣ್ತುಂಬಿಕೊಳ್ಳಲು ಮುಂದೆ ಓದಿ.

Sandalwood Star Darshan Fan Tattoo Video Is Getting Viral

ಅಬ್ಬಬ್ಬಾ.. ಏನಿದು ಟ್ಯಾಟೂ?

2023 ದರ್ಶನ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದೆ. ಯಾಕೆ ಅಂದರೆ ಈ ವರ್ಷ ಎರಡೆರಡು ಸಿನಿಮಾ ರಿಲೀಸ್ ಆಗಿದ್ದವು. ಕೆಲವು ತಿಂಗಳ ಹಿಂದಷ್ಟೇ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿ ದಾಖಲೆ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿಯನ್ನ ಕೊಟ್ಟು ಮತ್ತೊಂದು ದಾಖಲೆ ಬರೆದಿದ್ದಾರೆ. ಹೀಗಾಗಿ, ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದೆ. ಈ ಹೊತ್ತಲ್ಲೇ ಮಹಿಳಾ ಅಭಿಮಾನಿಯ ಟ್ಯಾಟೂ ವಿಡಿಯೋ ವೈರಲ್ ಆಗುತ್ತಿದೆ, ಮಹಿಳಾ ಅಭಿಮಾನಿಯು ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.

ನಟ ದರ್ಶನ್‌ಗೆ ಅಭಿಮಾನಿಗಳ ಬೆಂಬಲ

ಕನ್ನಡಿಗರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಖಾಡದಲ್ಲಿ ಮಾತ್ರ ಶತ್ರುಗಳನ್ನು ಪುಡಿ ಮಾಡಿಲ್ಲ, ನಿಜ ಬದುಕಿನಲ್ಲಿ ಕೂಡ ಸಾಕಷ್ಟು ಶತ್ರುಗಳನ್ನ ಎದುರಿಸಿದ್ದಾರೆ. ಹೀಗೆ ಎಲ್ಲಾ ರೀತಿ ಸವಾಲುಗಳನ್ನು ಎದುರಿಸಿ ಗೆದ್ದು ನಿಂತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ದೊಡ್ಡ ಹೆಸರು ಮಾಡಿದ್ದಾರೆ. ಕರ್ನಾಟಕ ಮೂಲೆ ಮೂಲೆಯಲ್ಲು ಡಿ-ಬಾಸ್ ದರ್ಶನ್ ಅವರಿಗೆ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಹೀಗೆ ನಟ ದರ್ಶನ್ ಅವರಿಗೆ ದೊಡ್ಡ ಫ್ಯಾನ್ ಫಾಲೋವರ್ಸ್ ಇದ್ದು, ಈಗ ಟ್ಯಾಟೂ ಹಾಕಿಸಿಕೊಂಡಿರುವ ಮಹಿಳೆ ಕೂಡ ದರ್ಶನ್ ಅವರ ಅಭಿಮಾನಿ.

Sandalwood Star Darshan Fan Tattoo Video Is Getting Viral

ಕನ್ನಡಿಗರ ಕಾಟೇರ ಅಬ್ಬರ ಜೋರು

ಕಾಟೇರ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ದಾಖಲೆ ಮೀರಿ ಮುನ್ನುಗ್ಗಿದೆ. ಕನ್ನಡಿಗರ ಚಿತ್ರ ಕಾಟೇರ ಒಂದು ಗತ್ತು ಕೊಟ್ಟಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದ್ರೂ ಕಾಟೇರ ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹಣ ಮಾಡಿದ್ದು. ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಈ ಸಿನಿಮಾ, 200 ಕೋಟಿ ರೂಪಾಯಿ ಕ್ಲಬ್ ಸೇರಿ ಸಾಧನೆ ಮಾಡಿದೆ ಎಂಬ ಮಾತು ಅಲ್ಲಲ್ಲಿ ಹರಿದಾಡುತ್ತಿದೆ. ಆದರೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಕಾಟೇರ ಅಷ್ಟು ದುಡ್ಡು ಮಾಡಿಲ್ಲ ಅಂತಾನೂ ಚರ್ಚೆ ನಡೆಯುತ್ತಿದೆ. ಅದೆಲ್ಲಾ ಏನೇ ಇದ್ದರೂ ಕಾಟೇರ ಮಾತ್ರ ಸೂಪರ್ ಹಿಟ್ ಸಿನಿಮಾ ಅಂತಾ ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+