‘ಚೆಲುವಿನ ಚಿತ್ತಾರ’ ಚೆಲುವೆ ಬಣ್ಣದ ಲೋಕಕ್ಕೆ ಭರ್ಜರಿ ರೀ ಎಂಟ್ರಿ?

ಅಮೂಲ್ಯ ಕನ್ನಡ ಸಿನಿಮಾ ಪ್ರೇಕ್ಷಕರ ಪಾಲಿಗೆ ನೆಚ್ಚಿನ ನಟಿ. 2001ರಲ್ಲಿ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಅಮೂಲ್ಯ, ಬರೋಬ್ಬರಿ 20 ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿದ್ದರು. ಆದರೆ ಮದುವೆ ಆದ ನಂತರ ಅಮೂಲ್ಯ ಅವರು ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡರು. ಇದೀಗ ನಟಿ ಅಮೂಲ್ಯ ಅಭಿಮಾನಿಗಳಿಗೆ, ಅಮೂಲ್ಯವಾದ ಸುದ್ದಿ ಸಿಕ್ಕಿದೆ! ಹಾಗಾದರೆ ಆ ಸುದ್ದಿ ಏನು ಗೊತ್ತೆ?

ನಟಿ ಅಮೂಲ್ಯ ಅವರ ನಟನೆಗೆ ಒಂದು ತಲೆಮಾರು ಫಿದಾ ಆಗಿತ್ತು. ಅದರಲ್ಲೂ ಈ ನಟಿ 2007ರ ಬಳಿಕ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಆಗಿಬಿಟ್ರು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಜೋಡಿ ನಟನೆಗೆ ಫ್ಯಾನ್ಸ್ ಫಿದಾ ಆಗಿಬಿಟ್ಟರು. 2002ರಲ್ಲಿ ಪರ್ವ ಚಿತ್ರದ ಮೂಲಕ ಬಾಲನಟಿ ಆಗಿ ಎಂಟ್ರಿ ಕೊಟ್ಟಿದ್ದರು ಅಮೂಲ್ಯ, ಬಳಿಕ ಚಂದು, ಲಾಲಿ ಹಾಡು, ಮಹಾರಾಜ, ಮಂಡ್ಯ, ಸುಂಟರಗಾಳಿ, ಸಜನಿ, ನಮ್ಮ ಬಸವ, ತನನಂ ತನನಂ ಹಾಗೂ ಕಲ್ಲರಳಿ ಹೂವಾಗಿ ಸಿನಿಮಾಗಳಲ್ಲಿ ಬಾಲನಟಿ ಆಗಿ ಅಮೂಲ್ಯ ಮಿಂಚಿದ್ದರು. ಹೀಗಿದ್ದಾಗ, ನಟಿ ಅಮೂಲ್ಯ 2007ರಲ್ಲಿ ಹೊಸ ಲೋಕಕ್ಕೆ ಕಾಲಿಟ್ಟರು. ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಅವರ ಲಕ್ ಬದಲಾಗಿ ಹೋಗಿತ್ತು.

Sandalwood Actress Amulya Preparing To Comeback Cinema Industry

ಅಮೂಲ್ಯ ಅಭಿಮಾನಿಗಳಿಗೆ ಸರ್ಪ್ರೈಸ್!

ಹೌದು, ಚೆಲುವಿನ ಚಿತ್ತಾರ ಮೂಲಕ ಕೋಟ್ಯಂತರ ಅಭಿಮಾನಿಗಳ ಗಳಿಸಿದ ನಟಿ ಅಮೂಲ್ಯ ಇದೀಗ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ ಬರಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ನಟಿ ಅಮೂಲ್ಯ, ಈಗಾಗಲೇ ಎರಡು ಸ್ಕ್ರಿಪ್ಟ್ ಕೇಳಿದ್ದೇನೆ. ಸ್ಕ್ರಿಪ್ಟ್ ಇಷ್ಟವಾದ ತಕ್ಷಣ ತಿಳಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಇಷ್ಟು ದಿನ ಅಮೂಲ್ಯ ಸಿನಿಮಾ ಅಪ್‌ಡೇಟ್‌ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸರ್ಪ್ರೈಸ್ ಸಿಗುವುದು ಪಕ್ಕಾ ಆಗುತ್ತಿದೆ.

ಅಂದಹಾಗೆ ಸಿನಿಮಾ ರಂಗಕ್ಕೆ ಅಮೂಲ್ಯ ಮರು ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ, ಹಲವು ದಿನಗಳಿಂದ ಹರಿದಾಡುತ್ತಾ ಇತ್ತು. ಆದರೆ ಅದಕ್ಕೆ ಅಧಿಕೃತ ಹೇಳಿಕೆ ಇರಲಿಲ್ಲ. ಇದೀಗ ಸ್ವತಃ ಅಮೂಲ್ಯ ಅವರೇ ಸಿನಿಮಾ ರಂಗಕ್ಕೆ ಮತ್ತೆ ಬರುವ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳಿಗೆ ಈ ಮೂಲಕ ಖುಷಿ ಸುದ್ದಿ ಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ಅಮೂಲ್ಯ ಅವರ ಅಭಿಮಾನಿಗಳು ಈ ಸುದ್ದಿಯ ಮೂಲಕ ಮತ್ತಷ್ಟು ಖುಷ್ ಆಗಿದ್ದಾರೆ.

Sandalwood Actress Amulya Preparing To Comeback Cinema Industry

ಸಿನಿಮಾ ಬಗ್ಗೆ ಅಮೂಲ್ಯ ಹೇಳಿದ್ದೇನು?

ಇನ್ನು ಸಿನಿಮಾ ಲೋಕದ ಬಗ್ಗೆ ತಮಗೆ ಇರುವ ಪ್ರೀತಿಯ ಬಗ್ಗೆ ಕೂಡ ನಟಿ ಅಮೂಲ್ಯ ಈ ವೇಳೆ ಮನಸ್ಸು ತುಂಬಿ ಮಾತನಾಡಿದ್ದಾರೆ. ನಾನು ಬಾಲ್ಯದಿಂದ ಸಿನಿಮಾ ರಂಗದ ಜೊತೆಗೇ ಬೆಳೆದವಳು. ನನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ & ಬ್ಯುಸಿನೆಸ್ ಅರ್ಥವಾಗಲ್ಲ. ಹಾಗಾಗಿ, ಸಿನಿಮಾ ಕ್ಷೇತ್ರಕ್ಕೆ ವಾಪಸ್ ಬರಲು ಸಿದ್ಧತೆ ನಡೆಸಿದ್ದೇನೆ. ಕಂಡಿತಾ, ಮತ್ತೆ ಸಿನಿಮಾ ರಂಗಕ್ಕೆ ಬರ್ತೀನಿ ಮತ್ತು ಸಿನಿಮಾಗಳನ್ನು ಕೂಡ ಮಾಡುತ್ತೇನೆ. ಅತೀ ಶೀಘ್ರದಲ್ಲೇ ಎಲ್ಲ ತಿಳಿಸುತ್ತೇನೆ ಅಂತಾ ಅಮೂಲ್ಯ ಅವರು ತಿಳಿಸಿದ್ದಾರೆ.

ಬ್ಯುಸಿ ನಟಿಯಾಗಿದ್ದ ಅಮೂಲ್ಯ

ಒಂದು ಕಾಲದಲ್ಲಿ ನಟಿ ಅಮೂಲ್ಯ ಅವರು ಫುಲ್ ಬ್ಯುಸಿ ಆಗಿದ್ದ ಹೀರೋಯಿನ್ ಆಗಿದ್ರು. ಮದುವೆ ನಂತರ ಅವರು ಬ್ರೇಕ್ ಪಡೆದಿದ್ದರು. ಆದರೆ ಇದೀಗ ಮತ್ತೊಮ್ಮೆ ಸಿನಿಮಾ ರಂಗ ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಅವರು ಭರ್ಜರಿಯಾಗಿ, ತಮ್ಮ ಕರಿಯರ್ ರೀ ಸ್ಟಾರ್ಟ್ ಮಾಡೋದಕ್ಕೆ ಸಜ್ಜಾಗಿದ್ದಾರೆ. ಆದರೆ ಇದಕ್ಕೆಲ್ಲಾ ಉತ್ತರ ಪಡೆಯಲು ಇನ್ನೂ ಕೆಲವು ದಿನಗಳ ಕಾಲ ಕಾಯಬೇಕಿದೆ. ಅಲ್ಲದೆ ಅಮೂಲ್ಯ ಅಭಿಮಾನಿಗಳಿಗು ಗುಡ್ ನ್ಯೂಸ್ ಸಿಗೋದು ಕೂಡ ಪಕ್ಕಾ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+