Darshan Thoogudeepa: ಆರೋಗ್ಯದ ಕಾರಣ; ಜೈಲಿನಿಂದ ನಟ ದರ್ಶನ್‌ ಬಿಡುಗಡೆ ?

ಬೆಂಗಳೂರು, ಅಕ್ಟೋಬರ್‌ 29: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆಂಡ್‌ ಗ್ಯಾಂಗ್‌ ಜೈಲು ಸೇರಿ ಬರೋಬ್ಬರು ನಾಲ್ಕು ತಿಂಗಳು ಕಳೆದಿದ್ದು, ಜೈಲಿನಲ್ಲಿ ದರ್ಶನ್‌ ವಿಲವಿಲ ಎನ್ನುವಂತಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾದಂತಹ ವಿಶ್ವಜೀತ್ ಶೆಟ್ಟಿ ಅವರ ಪೀಠದಲ್ಲಿ ನಡೆಯಿತು.

ತೀವ್ರ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ಬಳ್ಳಾರಿ ಆಸ್ಪತ್ರೆಗೆ ದರ್ಶನ್ ಅವರಿಗೆ ಎಂ ಆರ್ ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿಸಲಾಗುದ್ದು, ನಟ ದರ್ಶನ್ ಅವರ ಬೆನ್ನಿನ ಹಿಂಭಾಗದಲ್ಲಿ L5 ಹಾಗೂ S1ನಲ್ಲಿ ನೋವು ಕಂಡುಬಂದಿದೆ. ವೈದರ ವರದಿಯನ್ನು ಕೋರ್ಟ್‌ ಮುಂದೆ ಇಡಲಾಗಿದೆ. ತಡ ಮಾಡದೇ ನಟ ದರ್ಶನ್‌ ಅವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಈ ನಿಟ್ಟಿನಲ್ಲಿ ದರ್ಶನ್‌ ಪರ ವಕೀಲರಾದ ಸಿ ವಿ ನಾಗೇಶ್ ಅವರು ವಿಚಾರಣೆಯ ವೇಳೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಪ್ರಕರಣವನ್ನು ಉಲ್ಲೇಖಿಸಿ ವಾದ ಮಂಡಿಸಿದರು.‌

Sandalwood Actor Darshan released from jail

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಸಿ ಜಾಮೀನು ಉಲ್ಲೇಖಿ ಎಂದು ಸಿ ಸಿ ನಾಗೇಶ್ ವಾದ ಮಂಡಿಸಿದ್ದು, ಡಿಕೆ ಶಿವಕುಮಾರ್ ಅವರಿಗಿದ್ದ ಸಮಸ್ಯೆ ಗಿಂತ ಹೆಚ್ಚಿನ ಅನಾರೋಗ್ಯ ಸಮಸ್ಯೆ ನಟ ದರ್ಶನ್ ಅವರಿಗೆ ಇದೆ.

2022 ರಿಂದ 2023 ರಲ್ಲಿಯೂ ಈ ಬಗ್ಗೆ ಚಿಕಿತ್ಸೆ ಪಡೆಯಲಾಗಿದೆ. ಬೆನ್ನು ಹುರಿಯ ಸಮಸ್ಯೆಯಿಂದ ಈಗಾಗಲೇ ಕಾಲು ಮರಗಟ್ಟುವಿಕೆ ಆಗುತ್ತಿದೆ. ಹೀಗೆ ಮುಂದುವರೆದರೆ ಇನ್ನಷ್ಟು ಸಮಸ್ಯೆ ಆಗಬಹುದು ಎಂದು ದರ್ಶನ್‌ ಪರ ವಕೀಲರಾದ ಸಿ ವಿ ನಾಗೇಶ್ ಅವರು ವಾದ ಮಂಡಿಸಿದ್ದಾರೆ.

ಡಿಸ್ಕ್ ನಲ್ಲಿನ ಸಮಸ್ಯೆಯಿಂದ ನರದಿಂದ ರಕ್ತ ಪರಿಚಲನೆ ಆಗುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಪಾರಂಪರಿಕ ಚಿಕಿತ್ಸೆಯಿಂದ ಇದು ಪರಿಹಾರ ಆಗುವುದಿಲ್ಲ. ಶಸ್ತ್ರಚಿಕಿತ್ಸೆಯಿಂದ ಮಾತ್ರವೇ ಈ ಸಮಸ್ಯೆ ಗುಣಪಡಿಸಬಹುದಾಗಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಹೀಗಾಗಿ ಆರೋಗ್ಯದ ಕಾರಣ ಇಂದು(ಮಂಗಳವಾರ) ನಟ ದರ್ಶನ್‌ ಅವರಿಗೆ ಜಮೀನು ಸಿಗಲಿದ್ದು, ನಾಲ್ಕು ತಿಂಗಳ ಬಳಿಕ ನಟ ದರ್ಶನ್‌ ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+