Rashmika Mandanna: ಬ್ರೇಕಪ್‌ ಆದಾಗ ಹುಡುಗಿಯರಿಗೆ ಹೆಚ್ಚು ನೋವಾಗುತ್ತೆ, ಹುಡುಗರಂತೆ ಗಡ್ಡ ಬೆಳೆಸೋಕಾಗಲ್ಲ: ರಶ್ಮಿಕಾ

ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ನಟನೆಯ "ಕಿರಿಕ್‌ ಪಾರ್ಟಿ" ಸಿನಿಮಾದಿಂದ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಮೊದಲ ಸಿನಿಮಾದಲ್ಲೇ ರಶ್ಮಿಕಾ ಹಾಗೂ ರಕ್ಷಿತ್‌ ನಡುವೆ ಪ್ರೀತಿ ಚಿಗುರಿ ಅದ್ಧೂರಿಯಾಗಿ ನಿಶ್ಚಿತಾರ್ಥವೂ ಆಗಿತ್ತು. ಇನ್ನೇನು ಮದುವೆ ದಿನಾಂಕ ಘೋಷಣೆ ಮಾಡ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ಬ್ರೇಕಪ್‌ ಮಾಡಿಕೊಳ್ಳುವ ಮೂಲಕ ಶಾಕ್‌ ನೀಡಿದ್ದರು. ಬಳಿಕ ರಶ್ಮಿಕಾ ಬಹುಭಾಷೆಗಳಲ್ಲಿ ನಟಿಸುತ್ತಾ ಟಾಪ್‌ ನಟಿಯಾದರು. ರಕ್ಷಿತ್‌ ಶೆಟ್ಟಿ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾದರು. ಆದರೆ ತಮ್ಮ ಬ್ರೇಕಪ್‌ ವಿಚಾರದ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಹಲವು ವರ್ಷಗಳ ಬಳಿಕ ರಶ್ಮಿಕಾ ಮಂದಣ್ಣ ಬ್ರೇಕಪ್‌ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ಹೇಳಿದ್ದಾರೆ.

ಕಿರಿಕ್‌ ಬೆಡಗಿ ಎಂದೇ ಕರೆಸಿಕೊಂಡಿದ್ದ ರಶ್ಮಿಕಾ ಮಂದಣ್ಣ ನ್ಯಾಷನಲ್‌ ಕ್ರಶ್‌ ಕೂಡ ಆದರು. ಇದೇ ಹೊತ್ತಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸ್ಟಾರ್‌ ಜೋಡಿ ಬಂತಲ್ಲ ಎಂದು ಖುಷಿಪಟ್ಟವರಿಗೆ ಬ್ರೇಕಪ್‌ ವಿಚಾರ ಸಿಡಿಲು ಬಡಿದಂತಾಗಿತ್ತು. ಎಲ್ಲವೂ ಚೆನ್ನಾಗಿದ್ದು, ದಿಢೀರ್‌ ಬ್ರೇಕಪ್‌ ಏಕೆ? ಎಂದು ಎಲ್ಲರೂ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಇದೇ ವಿಚಾರವಾಗಿ ಟ್ರೋಲ್‌ ಕೂಡ ಹೆಚ್ಚಾಗಿತ್ತು. ಆದರೆ ಅಧಿಕೃತವಾಗಿ ಬ್ರೇಕಪ್‌ಗೆ ಕಾರಣವನ್ನು ಇಬ್ಬರೂ ನೀಡಿರಲಿಲ್ಲ.

Rashmika Mandanna Opens Up About Breakup With Rakshit Shetty After Many Years

ಕೆಲ ದಿನಗಳ ನಂತರ ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. "ದಯವಿಟ್ಟು ರಶ್ಮಿಕಾ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನ ನಿಲ್ಲಿಸಿ. ನಿಮಗಿಂತ ಹೆಚ್ಚಾಗಿ ನಾನು ಅವರನ್ನ ಬಲ್ಲೆ, ಕಳೆದ ಎರಡು ವರ್ಷಗಳಿಂದ ಅವರು ನನಗೆ ಗೊತ್ತು. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡುವೆ" ಎಂದಷ್ಟೇ ಹೇಳಿದ್ದರು. ಬಳಿಕ ಹಲವು ವರ್ಷಗಳಾದರೂ ರಕ್ಷಿತ್‌ ಆಗಲಿ, ರಶ್ಮಿಕಾ ಆಗಲಿ ಈ ವಿಚಾರದ ಬಗ್ಗೆ ತುಟಿ ಬಿಚ್ಚಲೇ ಇಲ್ಲ. ಹಲವು ವರ್ಷಗಳ ಬಳಿಕ ರಶ್ಮಿಕಾ ಬ್ರೇಕಪ್‌ಗೆ ಮೌನ ಮುರಿದಿದ್ದಾರೆ.

ಕನ್ನಡಿಗ ದೀಕ್ಷಿತ್ ಶೆಟ್ಟಿ ನಟನೆಯ, ರಾಹುಲ್ ರವೀಂದ್ರನ್ ನಿರ್ದೇಶನದ "ದಿ ಗರ್ಲ್‌ಫ್ರೆಂಡ್" ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸಂದರ್ಶನವೊಂದರಲ್ಲಿ ರಶ್ಮಿಕಾ ಬ್ರೇಕಪ್‌ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂಬಂಧಗಳಲ್ಲಿನ ಬ್ರೇಕ್‌ಅಪ್‌ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಅವರು "ಬ್ರೇಕಪ್‌ ಆದಾಗ ಹುಡುಗರಿಗಿಂತ ಹುಡುಗಿಯರು ಹೆಚ್ಚು ನೋವನ್ನು ಅನುಭವಿಸುತ್ತಾರೆ" ಎಂದಿದ್ದಾರೆ.

"ಹುಡುಗರಂತೆ ಗಡ್ಡ ಬೆಳೆಸೋಕಾಗಲ್ಲ"

"ಬ್ರೇಕಪ್ ಆದಾಗ ಹುಡುಗರೇ ಹೆಚ್ಚು ನರಳುತ್ತಾರೆ ಎಂಬ ಮಾತನ್ನ ನಾನಂತೂ ಒಪ್ಪಲ್ಲ. ಆ ನೋವು ಹುಡುಗಿಯರಿಗೆ ಅದಕ್ಕಿಂತ ಇನ್ನೂ ಹೆಚ್ಚಾಗಿಯೇ ಇರುತ್ತದೆ. ಹುಡುಗರಂತೆ ನಮ್ಮ ನೋವನ್ನು ಹೊರಹಾಕಲು ಗಡ್ಡ ಬಿಟ್ಟು ಓಡಾಡಲು ಆಗಲ್ಲ, ನೋವು ಮರೆಯೋಕೆ ಮದ್ಯಪಾನ ಅಥವಾ ಬೇರೆ ಚಟಗಳಿಗೆ ಒಳಗಾಗಲು ಸಾಧ್ಯವಿಲ್ಲ. ಹುಡುಗಿಯರು ತಮ್ಮ ನೋವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಪ್ರಪಂಚದ ಮುಂದೆ ಏನೂ ಆಗಿಲ್ಲ ಎನ್ನುವಂತೆ ಇರುತ್ತಾರೆ. ಯಾರು ಏನೇ ಹೇಳಲಿ ಬ್ರೇಕಪ್‌ ಆದಾಗ ಹುಡುಗಿಯರೇ ಹೆಚ್ಚು ನೋವಿನಲ್ಲಿರುತ್ತಾರೆ" ಎಂದು ರಶ್ಮಿಕಾ ಅಭಿಪ್ರಾಯ ತಿಳಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+