Rashmika Mandanna: ಅದ್ಧೂರಿ ವಿವಾಹ ಬಳಿಕ 14 ರಾಜ್ಯಗಳಲ್ಲಿ ಸಿಹಿ ಹಂಚಿದ 'ವಿರೂಶ್' ನವದಂಪತಿ
Virosh Wedding Sweets: ಸ್ಯಾಂಡಲ್‌ವುಡ್‌ನಿಂದ ಬೆಳ್ಳಿ ತೆರೆಗೆ ಕಾಲಿಟ್ಟು ಬಹುಭಾಷಾ ನಟಿಯಾಗಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪ್ರಿಯಕರ ತೆಲುಗು ನಟ ವಿಜಯ್ ದೇವರಕೊಂಡ (Vijay Deverakonda) ಅವರ ಜತೆ ಸಪ್ತಪದಿ ತುಳಿದಿದ್ದಾರೆ. ಈ ಇಬ್ಬರು ಸೆಲೆಬ್ರೆಟಿಗಳು ಹೊಸ ವೈವಾಹಿಕ ಜೀವನ ಆರಂಭಿಸಿದ್ದಾರೆ. ರೀಲ್ ಜೋಡಿ ರಿಯಲ್ ಲೈಪ್‌ನಲ್ಲಿ ಜೋಡಿಯಾಗಿದ್ದಾರೆ. ಅದ್ಧೂರಿಯಾಗಿ ಮದುವೆ ನಡೆದ ಬೆನ್ನಲ್ಲೆ ಅವರು ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಅಭಿಮಾನಿಗಳಿಗೆ ಸಿಹಿ ಹಂಚಲು ಮುಂದಾಗಿದ್ದಾರೆ. ದೇವಸ್ಥಾನ ಭೇಟಿ ಬೆನ್ನಲ್ಲೆ ಅವರು ಖುದ್ದು ಅಭಿಮಾನಿಗಳಿಗೆ ಸಿಹಿಯ ಪೊಟ್ಟಣ ಹಂಚಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
'ನಮ್ಮ ಸಿನಿಮಾ ಪಯಣದಿಂದ ಹಿಡಿದು ಮದುವೆವರೆಗೂ ಬೆಂಬಲಿಸಿದ ಅಪಾರ ಪ್ರೀತಿ ತೋರ್ಪಡಿಸಿದ ನೀವು ಯಾವಾಗಲೂ ನಮ್ಮ ಪ್ರಯಾಣ ಮತ್ತು ನಮ್ಮ ಪ್ರೀತಿಯ ಭಾಗವಾಗಿದ್ದೀರಿ. ನಿಮ್ಮೆಲ್ಲರೊಂದಿಗೆ ನಮ್ಮ ಮದುವೆ ಸಂಭ್ರಮ ಆಚರಿಸುವುದು ನಮಗೂ ಹರ್ಷದಾಯಕವಾಗಿದೆ. ಸಿಹಿ ಹಂಚುವ ಮೂಲಕ ನಿಮ್ಮೊಂದಿಗೆ ನಮ್ಮ ಬದುಕಿನ ಕೆಲವು ಸಿಹಿ ಕ್ಷಣ ಕಳೆಯಲಿದ್ದಾರೆ. ಮಾರ್ಚ್ 1 ರಂದು ನಮ್ಮ ಜೀವನದ ಈ ದೊಡ್ಡ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ದೇಶಾದ್ಯಂತ ಪ್ರೀತಿ ಮತ್ತು ಸಿಹಿ ತಿಂಡಿಗಳಿಂದ ತುಂಬಿದ ಟ್ರಕ್‌ಗಳನ್ನು ಕಳುಹಿಸುತ್ತಿದ್ದೇವೆ' ಎಂದು ನಟಿ ರಶ್ಮಿಕಾ ಮಂದಣ್ಣ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ಜೊತೆಗೆ ಕೋಟ್ಯಾಂತರ ಅಭಿಮಾನಿಗಳ ಆಶೀರ್ವಾದ ಮಾಡುವಂತೆ ಸಹ ಕೇಳಿದ್ದಾರೆ.

ಇಂದು ನಟಿ ರಶ್ಮಿಕಾ ಹಾಗೂ ವಿಜಯ್ ದಂಪತಿಯು ಹೈದರಾಬಾದ್‌ನಲ್ಲಿ ಅಭಿಮಾನಿಗಳಿಗೆ ಸಿಹಿ ಹಂಚಿದರು. ಜೊತೆಗೆ ತೆಲಂಗಾಣ ರಾಜ್ಯದ ಹೈದರಾಬಾದ್, ಮೆಹಬೂಬ್‌ನಗರ, ಕಾರಿಂನಗರ, ದೆಹಲಿಯ ದೆಹಲಿ ಎನ್‌ಸಿಆರ್, ಛತ್ತಿಸ್‌ಘಢದ ನೋಯ್ಡಾ, ಘಾಜಿಯಾಬಾದ್, ಗುಜರಾತ್‌ನ ಅಹಮದಾಬಾದ್, ಮಧ್ಯಪ್ರದೇಶದ ಭೋಪಾಲ್, ರಾಜಸ್ಥಾನದ ಜೈಪುರ್, ಆಂಧ್ರಪ್ರದೇಶ ರಾಜ್ಯದ ವೈಜಾಗ್, ವಿಜಯವಾಡ, ಪುಟ್ಟಪರ್ತಿ, ಕೇರಳ, ಕೊಚ್ಚಿ, ಕರ್ನಾಟಕದ ಮೈಸೂರು, ಕೂರ್ಗ್ ಮತ್ತು ಬೆಂಗಳೂರು, ಬಿಹಾರ್ ಹಾಗೂ ತಮಿಳುನಾಡು ರಾಜ್ಯ ಕೋಯಂಬತ್ತೂರು, ಚೆನ್ನೈ, ಪಾಂಡಿಚೇರಿ ನಗರಗಳಲ್ಲಿ ಅಭಿಮಾನಿಗಳಿಗೆ ಸಿಹಿ ಹಂಚಲಾಗಿದೆ. ಈ ಸಂಬಂಧ ಅವರು ಸಿಹಿ ಇರುವ ಟ್ರಕ್ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಸಾಂಪ್ರದಾಯಿಕ ವಿವಾಹವಾಗಿ ಫ್ಯಾನ್ಸ್ ಮನಗೆದ್ದ 'ವಿರೂಶ್' ಜೋಡಿ
ಸೆಲೆಬ್ರೆಟಿಗಳು ಎಂದರೆ ಅವರ ಮದುವೆ ಆಧುನಿಕ ರೀತಿಯಾಗಿ ನಡೆಯುತ್ತದೆ ಎನ್ನಲಾಗಿತ್ತು. ಆದರೆ ಉಡುಗೆ ತೊಡುಗೆಯಿಂದ ಹಿಡಿದು ವಿವಾಹದ ನಂತರ ದೇಶದ ಹತ್ತಾರು ದೇವಸ್ಥಾನಗಳಿಗೆ ಭೇಟಿ ನೀಡುವವರೆಗೂ ನಟಿ ರಶ್ಮಿಕಾ ಮತ್ತು ನಟ ವಿಜಯ್ ಹಿಂದೂ ಸಾಂಪ್ರದಾಯ ಪಾಲಿಸಿದ್ದಾರೆ. ಹಳೇಯ ಪದ್ಧತಿ, ನಿಯಮಗಳಡಿ, ವಧು ವರರು ವಿಶಿಷ್ಟ ಬಗೆಯ ಉಡುಗೆಯಲ್ಲಿ ವಿವಾಹವಾಗಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ತೀರಾ ಖಾಸಗಿ ಆಗಿ ವಿವಾಹ ಸಮಾರಂಭ ನಡೆದಿದ್ದು, ಆಗಮಿಸಿದ ಯಾರೊಬ್ಬ ಆಪ್ತರು, ಅತಿಥಿಗಳಿಗೂ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅರತಕ್ಷತೆ ಇದ್ದು, ಅಲ್ಲಿ ಅನೇಕ ಅಪಾರ ಸಿನಿಮಾ ತಾರೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
— Rashmika Mandanna (@iamRashmika) February 28, 2026












Click it and Unblock the Notifications