ರಮ್ಯಾ ಜೊತೆ ಫೋಟೋಶೂಟ್ ಮಾಡಿಸಿದ ವಿನಯ್ ರಾಜ್‌ಕುಮಾರ್: ಏನಿದು ಹೊಸ ಅಪ್ಡೇಟ್
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಮ್ಯಾ. ಬಹುಕಾಲದವರೆಗೆ ಕನ್ನಡದ ಸ್ಟಾರ್ ನಟರ ಜೊತೆಗೆಲ್ಲಾ ನಟಿಸಿದ್ದ ಚೆಲುವೆ ನಟಿ ರಮ್ಯಾ ಸದ್ಯ ಸೈಲೆಂಟ್ ಆಗಿದ್ದಾರೆ. ಸಿನಿಮಾ ಜೊತೆಗೆ ಪಾಲಿಟಿಕ್ಸ್ ಕಡೆ ಹೋಗಿ ಸಿನಿಮಾಗಳಿಂದ ದೂರಾಗಿದ್ದರು. ಇದೀಗ ಮತ್ತೆ ರಮ್ಯಾ ಬಳಿಕ ಮತ್ತೆ ವಾಪಸ್ ಬರುವ ಸುಳಿವು ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ನಟಿ ರಮ್ಯಾ ಅವರು 'ಅಭಿ' ಸಿನಿಮಾ ಮೂಲಕ ಅಣ್ಣಾವ್ರ ಬ್ಯಾನರ್‌ನಲ್ಲೇ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಹಾಗಾಗಿ ದೊಡ್ಮನೆ ಎಲ್ಲಾ ಸದಸ್ಯರ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಈ ಹಿಂದೆಯೂ ನಟ ಪುನೀತ್ ರಾಜ್ ಕುಮಾರ್ ಜೊತೆಗೆ ಉತ್ತಮ ಸ್ನೇಹವನ್ನ ನಟಿ ರಮ್ಯಾ ಅವರು ಇಟ್ಟುಕೊಂಡಿದ್ದರು. ಕೆಲ ದಿನಗಳ ಹಿಂದೆ 'ಅಪ್ಪು' ರೀ-ರಿಲೀಸ್ ಸಮಯದಲ್ಲಿ ವಿನಯ್ ಹಾಗೂ ರಮ್ಯಾ ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದರು. ಇದೀಗ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಜೊತೆ ಮೋಹಕ ತಾರೆ ರಮ್ಯಾ ಕ್ಯಾಮರಾ ಮುಂದೆ ನಿಂತಿರುವುದನ್ನ ಕಂಡ ಅಭಿಮಾನಿಗಳು ಹೊಸ ಅಪ್ ಡೇಟ್ ಏನು ಎಂಬ ಪ್ರಶ್ನೆಯನ್ನ ಇಟ್ಟಿದ್ದಾರೆ.

ನಟಿ ರಮ್ಯಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಕೂಡ ಹಿಂದೆ ವಿನಯ್ ಮಿಂಚಿದ್ದರು, ವಿನಯ್ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ಅವಕಾಶ ಸಿಕ್ಕರೆ ವಿನಯ್ ಜೊತೆ ನಟಿಸ್ತೀನಿ ಎಂದು ಕೂಡ ಮೋಹಕ ತಾರೆ ಹೇಳಿದ್ದರು. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಒಡನಾಟವಿದೆ. ವಿನಯ್ ರಾಜಕುಮಾರ್ ಮತ್ತು ರಮ್ಯಾ ಅವರ ಇತ್ತೀಚಿನ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನ ಕಂಡ ಫ್ಯಾನ್ಸ್ ಹೊಸ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.
ನಟಿ ರಮ್ಯಾ ಅವರು ಹಿರಿತೆರೆ ತೊರೆದು ಅದೆಷ್ಟೋ ಸಮಯ ಕಳೆದಿದೆ. ರಮ್ಯಾ ಅವರ ದೊಡ್ಡ ಪರದೆಗೆ ಮರಳುವಿಕೆಯ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಫೋಟೋಶೂಟ್ ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ. ಹೀಗಿರುವಾಗಲೇ ವಿನಯ್ ರಾಜ್ಕುಮಾರ್ ಹಾಗೂ ರಮ್ಯಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಹಾಗಾದರೆ ಇವರು ಹೊಸ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರಾ? ಖಂಡಿತವಾಗಿಯೂ ಇಲ್ಲ. ಇವರು ಮ್ಯಾಗಜಿನ್ ಒಂದರ ಫೋಟೋಶೂಟ್ಗಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಸದ್ಯ ರಮ್ಯಾ ಹಾಗೂ ವಿನಯ್ ಒಟ್ಟಿಗೆ ಕ್ಯಾಮರಾ ಎದುರಿಸಿದ್ದಾರೆ. ಇದು ಯಾವುದೇ ಚಿತ್ರಕ್ಕಾಗಿ ಅಲ್ಲ. ಬದಲಿಗೆ ಸ್ವಾಸ ಮ್ಯಾಗಜೀನ್ ಫೋಟೊಶೂಟ್‌ಗಾಗಿ ಇಬ್ಬರೂ ಸ್ಟೈಲಿಶ್ ಅವತಾರದಲ್ಲಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ. ಇಬ್ಬರೂ ಒಟ್ಟಿಗೆ ಕ್ಯಾಮರಾ ಮುಂದೆ ನಿಂತಿಲ್ಲ. ಒಟ್ಟಿಗೆ ನಡೆದಿರುವ ಫೋಟೊಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರಮ್ಯಾ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ ಆಗಿದ್ದಾರೆ. ಇತ್ತೀಚೆಗೆ ಅವರಿಗೆ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಮ್ಯಾ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ರಾಜ್ಕುಮಾರ್ ಕುಟುಂಬದ ಬ್ಯಾನರ್ ಮೂಲಕ. ಇನ್ನು, ಪುನೀತ್ ಜೊತೆ ಅವರು ಕೆಲವು ಸಿನಿಮಾ ಮಾಡಿದ್ದಾರೆ. ಹೀಗಾಗಿ, ಸೆಟ್ನಲ್ಲಿ ಇರುವಾಗ ವಿನಯ್ ಹಾಗೂ ರಮ್ಯಾ ಅನೇಕ ಬಾರಿ ಭೇಟಿ ಮಾಡಿದ್ದು ಇದೆ. ಇವರು ತೆರೆಮೇಲೆ ಒಟ್ಟಾಗಿ ಕಾಣಿಸಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.












Click it and Unblock the Notifications