Darshan Thoogudeepa: ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ದಾಸ: ಭರ್ಜರಿ ಸ್ಟೆಪ್ಸ್ ಹಾಕಿದ ರಜತ್!
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಎಂಟ್ರಿ ಕೊಟ್ಟಿದ್ದಾರೆ. ಇದರಿಂದಾಗಿ ಸಖತ್ ಖುಷಿಯಾದ ರಜತ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ದರ್ಶನ್ ಕಂಡರೆ ಇಷ್ಟ ಇಲ್ಲ ಅನ್ನೋರಿಗಿಂತ ಅವರನ್ನು ಕಂಡರೆ ಇಷ್ಟ ಪಡುವವರೇ ಹೆಚ್ಚು. ಅವರ ಅಭಿನಯ, ಹಾಡು, ಡೈಲಾಗ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟ ದರ್ಶನ್ ತೂಗುದೀಪ ಅಸಂಖ್ಯಾತ ಫ್ಯಾನ್ಸ್ ಹೊಂದಿದ್ದಾರೆ. ಅಷ್ಟಕ್ಕೂ ರಜತ್ ಖುಷಿಯಾಗಿ ಕುಣಿದಾಡಿದ್ದು ಯಾಕೆ ಗೊತ್ತಾ? ಅದನ್ನು ಹೇಳ್ತೀವಿ ಕೇಳಿ..
ಬಿಗ್‌ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರುವ ರಜತ್, ನಟ ದರ್ಶನ್ ತೂಗುದೀಪ ಅವರ ಅಪ್ಪಟ ಅಭಿಮಾನಿ. ಇದನ್ನು ಆರಂಭದಲ್ಲೇ ರಜತ್ ಹೇಳಿಕೊಂಡಿದ್ದರು. ಇನ್ನೂ ರಜತ್ ದೊಡ್ಮನೆಗೆ ಹೋದಾಗಿನಿಂದಲೂ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರ ಖಡಕ್ ನೇರ ಮಾತು ಬಿಗ್‌ಬಾಸ್ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ರಜತ್ ನೇರ ಮಾತಿನಿಂದಲೇ ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಂದ ಕಳಪೆ ಪಡೆದು ಜೈಲು ಸೇರಿದರೂ ಅವರ ಜಾಣ್ಮೆಯಿಂದ ಮನೆ ಮಂದಿಗೆಲ್ಲಾ ಬೆಳಗ್ಗೆ ತಿಂಡಿಯನ್ನು ಸಂಜೆ ಮಾಡುವಂತೆ ಮಾಡಿದ್ದರು. ಅವರು ಮಾತಿನಿಂದ ಮಾತ್ರವಲ್ಲ ಆಟದಲ್ಲೂ ಕೂಡ ನೆಕ್ ಟು ನೆಕ್ ಫೈಟ್ ನೀಡುತ್ತಿದ್ದಾರೆ. ಇದು ಬಿಗ್‌ಬಾಸ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ಹೀಗಾಗಿ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಟಾಪ್ 5 ಬರೋದ್ರಲ್ಲಿ ಅನುಮಾನವೇ ಇಲ್ಲ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ಬಿಗ್‌ಬಾಸ್ ನೋಡುವ ಪ್ರೇಕ್ಷಕರು ಮಾತ್ರವಲ್ಲದೆ ಮನೆಯ ಬಹುತೇಕ ಸ್ಪರ್ಧಿಗಳೂ ಕೂಡ ಇದೇ ಭವಿಷ್ಯವನ್ನು ನುಡಿದಿದ್ದಾರೆ. ಹೀಗೆ ಸಿಕ್ಕಾಪಟ್ಟೆ ಫೇಮಸ್ ಆಗಿರುವ ರಜತ್ ಅವರು ಕಳೆದ ದಿನ ಬಿಗ್‌ಬಾಸ್ ಮನೆಯಲ್ಲಿ ಖುಷಿಯಿಂದ ನೃತ್ಯ ಮಾಡಿದ್ದಾರೆ. ಅದಕ್ಕೆ ಕಾರಣ ನಟ ದರ್ಶನ್.
ಹೌದು.... ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ರಜತ್ ಅವರಿಗೆ ಪಂಚ ಪ್ರಾಣ. ಅವರ ಡೈಲಾಗ್, ಸಿನಿಮಾ ಹಾಗೂ ಹಾಡು ಅಂದರೆ ರಜತ್ ಸಿಕ್ಕಾಪಟ್ಟೆ ಖುಷಿ ಪಡುತ್ತಾರೆ. ಇದರಿಂದಾಗಿನೇ ದರ್ಶನ್ ಹಾಡು ಬಿಗ್‌ಬಾಸ್ ಮನೆಯಲ್ಲಿ ಕೆಳಿಸಿದ ತಕ್ಷಣ ರಜತ್ ಸಿಕ್ಕಾಪಟ್ಟೆ ಸಂತೋಪ ಪಟ್ಟು ಕುಣಿದಾಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಮೊದಲ ಬಾರಿಗೆ (ನವೆಂಬರ್ 25) ದರ್ಶನ್ ಹಾಡು ಕೇಳಿಸಿದೆ. ಆದರೆ ಇದು ಮುಂಜಾನೆ ಕೇಳಿ ಬರುವ ಸಾಂಗ್ ಅಲ್ಲ. ಬದಲಿಗೆ ಟಾಸ್ಕ್ ವೇಳೆ ಕೇಳಿಸಿದ ಹಾಡು. ಹೌದು... ಮಂಜು ಅವರು ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ವೊಂದರಲ್ಲಿ ರಾಜನಾಗಿದ್ದಾರೆ. ಮಂಜು ಹೇಳಿದಂತೆ ಮನೆಯ ಎಲ್ಲಾ ಸದಸ್ಯರು ಕೇಳಬೇಕು. ಅವರ ಹೇಳಿದ ಕೆಲಸಗಳನ್ನು ಮಾಡಬೇಕು.
ಹೀಗೆ ಮಂಜು ತಮ್ಮ ಸೇನಾಧಪತಿಯಾದ ರಜತ್‌ಗೆ ಒಂದು ಹಾಡು ಹೇಳಲು ಹೇಳುತ್ತಾರೆ. ಆಗ ರಜತ್ ದರ್ಶನ್ ಅಭಿನಯದ ಕರಿಯಾ ಸಿನಿಮಾದ 'ಕೆಂಚಾಲೋ ಮಂಚಾಲೋ ಹೆಂಗವಳಾ ನಿನ್ ಡವ್‌ಗಳು' ಹಾಡನ್ನು ಹೇಳಿತ್ತಾರೆ. ಆಗ ಮಂಜು ಈ ಹಾಡುತ್ತಾ ಡ್ಯಾನ್ಸ್ ಮಾಡಲು ರಜತ್‌ಗೆ ಹೇಳುತ್ತಾರೆ. ಆಗ ರಜತ್ 'ಕೆಂಚಾಲೋ ಮಂಚಾಲೋ ಹೆಂಗವಳಾ ನಿನ್ ಡವ್‌ಗಳು' ಸಾಂಗ್ ಹಾಡುತ್ತಾ ಸ್ಟೆಪ್ಸ್ ಹಾಕುತ್ತಾರೆ. ಇವರು ಹಾಕುವ ಸ್ಟೆಪ್ಸ್‌ಗೆ ಮನೆ ಮಂದಿಯಲ್ಲೇ ನಗಾಡಿದ್ದಾರೆ.
ರಜತ್ ಅವರಿಂದಾಗಿ ಬಿಗ್‌ಬಾಸ್ ಸೀಸನ್ 11ರಲ್ಲಿ ಮೊದಲ ಬಾರಿಗೆ ದರ್ಶನ್ ಅವರ ಹಾಡು ಕೇಳಿಸಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಹೆಚ್ಚು ಸಂತೋಷಪಟ್ಟಿದ್ದಾರೆ. ಒಟ್ಟಿನಲ್ಲಿ ಸ್ಪರ್ಧಿ ರಜತ್‌ನಿಂದಾಗಿ ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಕೇಳಿ ಬಂದಿದ್ದು, ಹೊರಗಡೆ ಇರುವ ದರ್ಶನ್ ತೂಗುದೀಪ ಅವರ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಇದರಿಂದಾಗಿ ದರ್ಶನ್ ಅಭಿಮಾನಿಗಳು ರಜತ್ ಅವರಿಗೆ ಓಟ ಹಾಕಲು ಶುರು ಮಾಡಿದ್ದಾರೆ.
ಯಶ್ ಹಾಡಿಗೆ ರಜತ್ ಸ್ಟೆಪ್ಸ್
60ನೇ ದಿನದತ್ತ ಬಿಗ್‌ಬಾಸ್ ಮುನ್ನುಗ್ಗುತ್ತಿದೆ. ಶೋಭಾ ಶೆಟ್ಟಿ ಮತ್ತು ರಜತ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಮೇಲೆ ಆಟ ಇನ್ನೂ ಇಂಟ್ರಸ್ಟ್ರಿಂಗ್ ಆಗಿದೆ. ಬಿಗ್‌ಬಾಸ್ ಮನೆಯಲ್ಲಿ ರಜತ್ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದು ಬಿಗ್‌ಬಾಸ್ ನೋಡುಗರಿಗೆ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ.
ರಜತ್ ದರ್ಶನ್ ಹಾಡಿಗೆ ಮಾತ್ರವಲ್ಲದೆ ಯಶ್ ಅವರ ಹಾಡಿಗೂ ನೃತ್ಯ ಮಾಡಿರುವುದು ಪ್ರೇಕ್ಷಕರನ್ನು ರಂಜಿಸಿದೆ. ಬಿಗ್‌ಬಾಸ್ ಮನೆಯಲ್ಲಿ ರಜತ್ ಹವಾ ಸಾಕಷ್ಟು ಹೆಚ್ಚಾಗಿದ್ದು ಯಶ್ ಅವರ ಹಾಡಿಗೆ ರಜತ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇದು ನೋಡುಗರಿಗೆ ಖುಷಿ ತಂದಿದೆ.












Click it and Unblock the Notifications