Pushpa 2 Film Review: ಪುಷ್ಪ-2 ರಿಲೀಸ್‌ಗೂ ಮುನ್ನ ಪ್ಲಾಪ್: ಥಿಯೇಟರ್ ಖಾಲಿ ಖಾಲಿ- ಕಾರಣ ಇದೇ ಅಂತೆ....
ಭಾರೀ ನಿರೀಕ್ಷೆಯ ಸಿನಿಮಾ 'ಪುಷ್ಪ-2 ದಿ ರೂಲ್' ಡಿಸೆಂಬರ್ 5ರಂದು ಅದ್ದೂರಿಯಾಗಿ ತೆರೆಗಪ್ಪಳಿಸಲು ಸಿದ್ಧವಾಗಿದೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು ಹಾಡುಗಳು ನಿರೀಕ್ಷೆಗೆ ತಕ್ಕಂತೆ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಸಿನಿಮಾ ಕೂಡ ಪ್ಲಾಪ್ ಆಗಲಿದೆ ಎಂದು ಹೇಳಲಾಗುತ್ತಿದೆ. ಹೀಗೆ ಪುಷ್ಪ-2 ಸಿನಿಮಾಕ್ಕೆ ತೆರೆಗೂ ಮುನ್ನ ಅಪಸ್ವರ ಕೇಳಿ ಬಂದಿದೆ.
ಪುಷ್ಪ 2 ದಿ ರೂಲ್ ಸಿನಿಮಾದಲ್ಲಿ ಅಲ್ಲು ಅರ್ಜುನ್, ಫಹಾದ್ ಫಾಸಿಲ್, ಕನ್ನಡದ ನಟ ಡಾಲಿ ಧನಂಜಯ್, ನಟಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ನಟ ನಟಿಯರು ಸಿನಿಮಾದಲ್ಲಿ ನಟಿಸುತ್ತಿರುವುದು ಒಂದೆಡೆ ಖುಷಿ ಆದರೆ ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗಿರುವುದು ಕರ್ನಾಟಕದಲ್ಲಿ ಭಾರೀ ಬೇಸರಕ್ಕೆ ಕಾರಣವಾಗಿದೆ. ಫಸ್ಟ್ ಡೇ ಫಸ್ಟ್ ಶೋಗೆ ಸಿನಿಮಾ ಟಿಕೆಟ್ ಬೆಲೆ ಒಂದುವರೆಯಿಂದ ಎರಡು ಸಾವಿರ ಇದೆ. ಇದು ಕನ್ನಡಿಗರಿಗೆ ಸಿನಿಮಾ ಬಗ್ಗೆ ಅಸಡ್ಡೆ ಮೂಡಿಸಿದೆ. ಇಷ್ಟು ಹಣ ಕೊಟ್ಟು ಸಿನಿಮಾ ನೋಡುವ ಬದಲು ಕೆಲ ದಿನಗಳ ನಂತರ ಒಟಿಟಿಯಲ್ಲಿ ಸಿನಿಮಾ ನೋಡಬಹುದು ಎಂದು ಜನ ಸುಮ್ಮನಾಗಿದ್ದಾರೆ. ಇದು ಥಿಯೇಟರ್ ಬುಕ್ ಆಗದೇ ಖಾಲಿ ಖಾಲಿಯಾಗಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.

ಸದ್ದು ಮಾಡಿದ ಸಿನಿಮಾ ಹಾಡುಗಳು
ಮತ್ತೊಂದು ವಿಚಾರ ಅಂದರೆ ಈ ಹಿಂದಿನ ಪುಷ್ಪಾ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿದ್ವು. ಸಿನಿಮಾ ಮುಕ್ಕಾಲು ಭಾಗಿ ಹಾಡಿನಿಂದದಲೇ ಹಿಟ್ ಆಗಿ ಹೋಗಿತ್ತು. ಹಾಡುಗಳಿಗಾಗಿನೇ ಎಷ್ಟೋ ಜನ ಸಿನಿಮಾ ನೋಡಿರುವುದು ಇದೆ. ಊ ಅಂಟವಾ.., ಸ್ವಾಮಿ.. ಸ್ವಾಮಿ..., ಶ್ರೀವಲ್ಲಿ ಸೇರಿದಂತೆ ಸಿನಿಮಾದ ಎಲ್ಲಾ ಹಾಡುಗಳು ಭಾರೀ ಜನಮೆಚ್ಚುಗೆಯನ್ನು ಪಡೆದುಕೊಂಡಿದ್ದವು. ಆದರೆ 'ಪುಷ್ಪ-2 ದಿ ರೂಲ್' ಸಿನಿಮಾ ಹಾಡುಗಳು 'ಪುಷ್ಪ-1' ಹಾಡುಗಳನ್ನು ಮೀರಿಸುವಂತೆ ಇಲ್ಲ. ಈ ಹಾಡುಗಳನ್ನು ಕೇಳುವುದಿರಲಿ, ರೀಲ್ಸ್ ಮಾಡುವವರ ಸಂಖ್ಯೆ ಕೂಡ ಕಡಿಮೆ ಇದೆ. ಹೀಗಾಗಿ ಸಿನಿಮಾ ತೆರೆಗೂ ಮುನ್ನ ಸಿನಿಮಾ ಹಾಡುಗಳು ಸಿನಿಮಾ ಬಗ್ಗೆ ಭವಿಷ್ಯವನ್ನು ನುಡಿದಿವೆ.
ಪುಷ್ಪ 2 ಸಿನಿಮಾ ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಬಂದಿಲ್ಲ. ದೊಡ್ಡ ಸ್ಟಾರ್ ಜೊತೆಗೆ ಐಟಂ ಸಾಂಗ್ ಮ್ಯಾಚ್ ಆಗಿಲ್ಲ. ಐಟಂ ಸಾಂಗ್‌ಗೆ ಸಮಂತಾ ಅವರಂತೆ ಶ್ರೀಲೀಲಾ ಮ್ಯಾಚ್ ಆಗಿಲ್ಲ. ಐಟಂ ಸಾಂಗ್ ಬೇಕಾದ ವೈಬ್ರೇಷನ್ ಇಲ್ವೇ ಇಲ್ಲ ಅಂತಿದ್ದಾರೆ ಜನ. ಅಷ್ಟೇ ಅಲ್ಲ ಸಿನಿಮಾದಲ್ಲಿ ಡ್ಯಾನ್ಸ್ ಕೂಡ ಹೇಳಿಕೊಳ್ಳುವ ಮಟ್ಟಕ್ಕಿಲ್ಲ. ಹೀಗಾಗಿ ಪುಷ್ಪ 2 ಸಾಂಗ್ಸ್ ಬಗ್ಗೆ ಉತ್ತಮ ಅಭಿಪ್ರಾಯ ಇಲ್ಲ. ಟ್ರೈಲರ್ ಸುದ್ದಿ ಮಾಡಿದಂತೆ ಹಾಡುಗಳು ಸದ್ದು ಮಾಡಿಲ್ಲ ಅನ್ನೋ ಅಭಿಪ್ರಾಯ ಕೇಳಿ ಬಂದಿವೆ.
ನಿರೀಕ್ಷೆಯಂತೆ ಗಳಿಕೆ ಅಸಾಧ್ಯ...
ಸಿನಿಮಾ ರಿಲೀಸ್‌ಗೂ ಮುನ್ನ ಮಾತ್ರ 1500 ಖರ್ಚು ಮಾಡಿದೆ. ಸಿನಿಮಾ ನಿರ್ಮಾಣಕ್ಕೆ ಕೋಟಿ ಕೋಟಿ ಹಣ ಖರ್ಚಾಗಿದೆ. ರಿಲೀಸ್ ಆದ ಬಳಿಕ ಸಾಕಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋ ನಂಬಿಕೆ ಇತ್ತು. ಆದರೆ ಸಿನಿಮಾ ಟ್ರೈಲರ್ ಅಲ್ಲೇ ಸಾಕಷ್ಟು ಗಳಿಕೆ ಮಾಡಿದೆ. ಹೀಗಿರುವಾಗ ಸಿನಿಮಾ ಕೆಲ ದಿನಗಳ ಮಟ್ಟಿಗೆ ಓಡಿದರೆ ಸಾಕು ಎನ್ನುವ ಮಟ್ಟಿಗೆ ಚಿತ್ರ ತಂಡ ಇದೆ. ಹೀಗಾಗಿ ಸಿನಿಮಾ ಫಸ್ಟ್ ಶೋನಲ್ಲೇ ದುಡ್ಡು ಮಾಡುವ ದಾವಂತರದಲ್ಲಿ ಇದ್ದಂತೆ ಕಾಣಿಸುತ್ತಿದೆ. ಫಸ್ಟ್ ಶೋನಲ್ಲಿ ಸಿನಿಮಾ ಗಳಿಕೆ ಚೆನ್ನಾಗಿ ಆದರೆ ಮುಂದಿನ ದಿನ ಸಿನಿಮಾ ಓಡಿದರೂ ಓಡದೇ ಇದ್ದರೂ ಕೂಡ ಸಮಸ್ಯೆ ಇಲ್ಲ ಅನ್ನೋ ಲೆಕ್ಕಾಚಾರದಲ್ಲಿ ಚಿತ್ರ ತಂಡ ಇದ್ದಂತೆ ಕಾಣಿಸುತ್ತಿದೆ.
ಕನ್ನಡ ಬಂದರೂ ಬಾರದಂತೆ ನಾಟಕವಾಡುವ ನಟಿ
ರಶ್ಮಿಕಾ ಮಂದಣ್ಣ ಕನ್ನಡದ ನಟಿ. ಕನ್ನಡಿಗರೇ ಆಕೆಯನ್ನು ಬೆಳೆಸಿದ್ದು. ಆದರೆ ರಶ್ಮಿಕಾ ಮಾತ್ರ ಕನ್ನಡ ಬಂದರೂ ಬಾರದಂತೆ ನಟಿಸುತ್ತಾರೆ. ಇದು ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿದೆ. ಅದೇನೇ ಆಗಲಿ ಸಿನಿಮಾ ಚೆನ್ನಾಗಿ ಇದ್ದರೆ ಜನ ನೋಡೇ ನೋಡುತ್ತಾರೆ. ಆದರೆ ಸಿನಿಮಾದಲ್ಲಿನ ಹಾಡುಗಳು ನೋಡಲು ಕೂಡ ಉತ್ತಮ ವೈಬ್ ಕ್ರಿಯೇಟ್ ಮಾಡಿಲ್ಲ ಅನ್ನೋ ಮಾತುಗಳು ಹೆಚ್ಚಾಗಿ ಕೇಳಿ ಬಂದಿವೆ. ಹೀಗಾಗಿ ಕರ್ನಾಟಕದಲ್ಲಿ ಪುಷ್ಪ 2 ಕೆಜಿಎಫ್ ಸಿನಿಮಾವನ್ನು ಬೀಟ್ ಮಾಡುವಷ್ಟು ವಾತಾವರಣ ಕಂಡು ಬರುತ್ತಿಲ್ಲ.
ಕರ್ನಾಟಕದ ಹಲವೆಡೆ ಥಿಯೇಟರ್‌ಗಳ ಖಾಲಿ ಖಾಲಿ
ಸಿನಿಮಾ ನಾಳೆ ತರೆ ಕಾಣಲಿದೆ. ಈಗಾಗಲೇ ಮಲ್ಟಿಪ್ಲಸ್ ಸಿನಿಮಾ ಥಿಯೇಟರ್‌ಗಳಲ್ಲಿ ಬುಕ್ಕಿಂಗ್ ಆರಂಭವಾಗಿದೆ. ಆದರೆ ರಾಜ್ಯದ ಅದೆಷ್ಟೋ ಪ್ರತಿಷ್ಠಿತ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಥಿಯೇಟರ್‌ಗಳು ಫುಲ್ ಆಗಿಲ್ಲ. 50% ಬುಕ್ಕಿಂಗ್ ಆದರೆ ಹೆಚ್ಚು. ಹೀಗಾಗಿ ಕರ್ನಾಟಕದಲ್ಲಿ ಸಿನಿಮಾ ಹೆಚ್ಚೇನು ಸದ್ದು ಮಾಡುವ ಲಕ್ಷಣಗಳು ಕಾಣಿಸುತ್ತಿಲ್ಲ ಅನ್ನೋದು ಮಾತ್ರ ಸುಳ್ಳಲ್ಲ.
ಇಂದು ತೆರೆ ಕಂಡ ಪುಷ್ಪ-2
ಇಂದು ಪುಷ್ಪ-2 ಸಿನಿಮಾ ತೆರೆ ಕಂಡಿದೆ. ಸಿನಿಮಾ ನೋಡಿದ ಜನ ಸಿನಿಮಾ ಚೆನ್ನಾಗಿದೆ ಎನ್ನುವ ಮಾತುಗಳನ್ನ ಆಡಿದ್ದಾರೆ. ಸಿನಿಮಾ ಹಾಡುಗಳು ಟಿವಿ ಪರದೆ ಮೇಲೆ ನೋಡಲು ಚೆನ್ನಾಗಿ ಕಾಣಲ್ಲ. ಆದರೆ ಥಿಯೇಟರ್‌ಗಳಲ್ಲಿ ಅದ್ಭುತವಾಗಿ ಹಾಡುಗಳು ಮೂಡಿ ಬಂದಿವೆ ಎಂದು ಸಿನಿಮಾ ನೋಡಿದ ಜನ ಹೇಳಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳಂತೂ ಸಿನಿಮಾ ನೋಡಿ ಸಖತ್ ಖುಷಿಯಾಗಿದ್ದಾರೆ. ಇದೊಂದು ಅದ್ಭುತ ಸಿನಿಮಾ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ಪಾತ್ರ ತುಂಬಾ ಚೆನ್ನಾಗಿದೆ. ಅವರ ಪಾತ್ರಕ್ಕೆ 100ಕ್ಕೆ 100 ಅಂಕಗಳನ್ನು ಕೊಟ್ಟಿದ್ದಾರೆ ಅಭಿಮಾನಿಗಳು. ಹೈದರಾಬಾದ್ ನ ನಾನಾ ನಗರಗಳಲ್ಲಿ ಡಿಸೆಂಬರ್ 4ರ ಮಧ್ಯರಾತ್ರಿಯೇ ಮಿಡ್ ನೈಟ್ ಶೋಗಳನ್ನು ಆಯೋಜಿಸಲಾಗಿತ್ತು. ಇಂದು ಅಂದರೆ ಡಿಸೆಂಬರ್ 5ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಿದೆ.
ಪುಷ್ಪ-2 ಸಿನಿಮಾ ಹೇಗಿದೆ?
ಪುಷ್ಪ-2 ಸಿನಿಮಾದಲ್ಲಿ ಅರ್ಧಂಬರ್ಧ ಸೀನ್‌ಗಳು ತುಂಬಾ ಇವೆ. ಸಿನಿಮಾ ಜಪಾನ್‌ನಿಂದ ಶುರುವಾಗುತ್ತದೆ. ನಂತರ ಫ್ಲಶ್‌ಬ್ಯಾಕ್‌ಗೆ ಹೋಗುವ ಸಿನಿಮಾದ ಕತೆಯಲ್ಲಿ ಕೊನೆಯವರೆಗೂ ಪುಷ್ಪ ಜಪಾನ್‌ನಲ್ಲಿ ಏನಾದ ಅನ್ನೋದನ್ನೇ ತೋರಿಸುವುದಿಲ್ಲ. ಕೆಲವೊಂದು ಸೀನ್‌ಗಳು ಬ್ಲಾಕ್‌ಬಾಸ್ಟರ್ ಸಿನಿಮಾಗಳನ್ನು ನೆನಪು ಮಾಡುತ್ತವೆ. ಆದರೆ ಕೆಲವೊಂದಕ್ಕೆ ಸಿನಿಮಾದಲ್ಲಿ ಸ್ಪಷ್ಟತೆ ಇಲ್ಲವೇ ಇಲ್ಲ. ಹಾಡುಗಳು ಅಷ್ಟೇ ಸ್ವಲ್ಪ ಕಿಕ್ ಇರಬೇಕಿತ್ತು. ಆ ಕಿಕ್ ಕಾಣಿಸುವುದಿಲ್ಲ. ಕೆಲವೊಂದು ಸೀನ್‌ಗಳನ್ನು ಸಿನಿಮಾದಲ್ಲಿ ಅತ್ಯಾದ್ಬುತವಾಗಿ ತೋರಿಸಲಾಗಿದೆ. ಅಲ್ಲದೆ ಪ್ರೇಮ ಪ್ರಸಂಗಗಳು ಒಂದಿಷ್ಟು ಇವೆ.
ಇನ್ನೂ ಅಲ್ಲು ಅರ್ಜನ್ ಪಾತ್ರವನ್ನ ಅಲ್ಲಗಳಿಯುವಂತೆ ಇಲ್ಲವೇ ಇಲ್ಲ. ಪುಷ್ಪ ಪಾರ್ಟ್ ಒಂದರಂತೆ ಅಲ್ಲು ಗತ್ತು ಶೈಲಿ ಕಾಪಾಡಿದ್ದಾರೆ. ಫೈಟ್ ಸೀನ್‌ಗಳನ್ನು ತಿಂದು ತೇಗಿರುವ ಅಲ್ಲು ಡ್ಯಾನ್ಸ್ ವಿಚಾರದಲ್ಲೂ ಮೋಸ ಮಾಡಿಲ್ಲ. ದರ್ಪದ ಡೈಲಾಗ್‌ಗಳನ್ನೂ ಅಲ್ಲು ಅರ್ಜುನ್ ಖಡಕ್ ಆಗೇ ಹೇಳಿದ್ದಾರೆ. ಇನ್ನೂ ರಶ್ಮಿಕಾ ಕೂಡ ಅಷ್ಟೇ ಸಿನಿಮಾದಲ್ಲಿ ಬೆರಗಾಗುವಂತಹ ಡೈಲಾಗ್ ಹೊಡೆದಿದ್ದಾರೆ. ಒಟ್ಟಿನಲ್ಲಿ ಸಿನಿಮಾಗೆ ನಟನೆ ವಿಚಾರದಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಸಿನಿಮಾ ಕತೆ ಸಂಪೂರ್ಣವಾಗಿಲ್ಲ, ಸಂಪೂರ್ಣವಾಗಿಲ್ಲದ ಸೀನ್‌ಗಳನ್ನ ಪುಷ್ಪ-3 ಸಿನಿಮಾದಲ್ಲಿ ತೋರಿಸಬಹುದು ಎನ್ನಲಾಗುತ್ತಿದೆ.












Click it and Unblock the Notifications