Pavithra Gowda's Net Worth: ಪವಿತ್ರಾ ಗೌಡ ಇಷ್ಟು ವರ್ಷಗಳಲ್ಲಿ ಸಂಪಾದಿಸಿದ್ದೇಷ್ಟು? ಅವರ ಕಾರುಗಳು, ಆಸ್ತಿ ವಿವರ ಇಲ್ಲಿದೆ
ಬೆಂಗಳೂರು, ಜೂನ್. 22: ಜೂನ್ 8 ರಂದು ಬರ್ಬರವಾಗಿ ಹತ್ಯೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ. ನಟಿಯಾಗಿ ಸಿನಿಮಾರಂಗದಲ್ಲಿ ಕೆಲ ವರ್ಷಗಳಿದ್ದ ಅವರು ಕಾಣೆಯಾಗಿದ್ದರು. ಮತ್ತೆ ಸುದ್ದಿಯಾಗಿದ್ದು ಮಾತ್ರ ದರ್ಶನ್ ಜೊತೆಗಿನ ಸಂಬಂಧದ ಕಾರಣಕ್ಕೆ.
ಕಳೆದ ವರ್ಷದವರೆಗೂ ತುಂಬಾ ಅಪರಿಚಿತರಾಗಿದ್ದ ಪವಿತ್ರಾ ಗೌಡ, ಈ ವರ್ಷದ ಆರಂಭದಲ್ಲಿ ದರ್ಶನ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಹಠಾತ್ ಆಗಿ ಗಮನ ಸೆಳೆದರು. ಜನವರಿ 24, 2024 ರಂದು ಹಂಚಿಕೊಳ್ಳಲಾಗದ ರೀಲ್ಸ್‌ನಲ್ಲಿ ತನಗೂ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೂ ಹತ್ತು ವರ್ಷಗಳ ಸಂಬಂಧ ಎಂಬುದನ್ನು ಬಹಿರಂಗಪಡಿಸಿದ್ದರು. ಇದು ಸಕತ್ ವೈರಲ್ ಆಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪವಿತ್ರ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪವಿತ್ರಾ ಗೌಡ ಯಾರು ಮತ್ತು ಅವರ ನಿವ್ವಳ ಮೌಲ್ಯ ಏನು?
ರೇಣುಕಾ ಸ್ವಾಮಿಯವರ ದುರಂತ ಹತ್ಯೆ ಬಳಿಕ ನಟಿ ಪವಿತ್ರಾ ಗೌಡ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ತೀವ್ರ ಸಾರ್ವಜನಿಕ ಚರ್ಚೆ ಉಂಟಾಗಿದೆ. ವರದಿಗಳ ಪ್ರಕಾರ, ಬೆಂಗಳೂರಿನ ತಲಘಟ್ಟಪುರದವರಾದ ಪವಿತ್ರಾ ಗೌಡ ಚಿತ್ರರಂಗಕ್ಕೆ ಕಾಲಿಡುವ ಮೊದಲು ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದ ಆಕೆಯ ತಾಯಿ ಅವಳನ್ನು ಬೆಳೆಸಿದರು.
ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುಪಿ ಮೂಲದ ವ್ಯಕ್ತಿ ಸಂಜಯ್ ಸಿಂಗ್ ಅವರನ್ನು ಪ್ರೀತಿಸುತ್ತಿದ್ದರು. ಪ್ರೀತಿಸಿ ಮದುವೆಯಾದ ಎರಡು ವರ್ಷಗಳ ನಂತರ ಅವರು ಹೆಣ್ಣು ಮಗುವಿನ ತಾಯಿಯಾದರು. ಪವಿತ್ರಾ ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ಅವರು ಸಂಜಯ್ ಸಿಂಗ್‌ಗೆ ವಿಚ್ಛೆದನ ನೀಡಿದ್ದರು. ಮಾಡೆಲಿಂಗ್ ಮತ್ತು ನಟನೆಯಲ್ಲಿ ಮುಂದುವರಿಯುವ ಆಕಾಂಕ್ಷೆ ಹೊಂದಿದ್ದರು.
2013 ರಲ್ಲಿ 'ಅಗಮ್ಯ' ಸಿನಿಮಾಗೆ ನಾಯಕಿಯಾಗುವ ಮೂಲಕ ಪವಿತ್ರಾ ಗೌಡ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿತು. ಇದಾದ ನಂತರ ಅನುಪ್ ಸಾ ರಾ ಗೋವಿಂದು ಜೊತೆಗೆ 'ಸಾಗುವ ದಾರಿಯಲ್ಲಿ' ಸಿನಿಮಾ ಮಾಡಿದರು. '54321' ಮೂಲಕ ತಮಿಳು ಚಲನಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದರು. ಇನ್ನು, 'ಬಥಾಸ್' ಮತ್ತು 'ಛತ್ರಿಗಳು ಸರ್ ಛತ್ರಿಗಳು' ಸಿನಿಮಾಗಳನ್ನು ಮಡಿದ್ದಾರೆ.
ಪವಿತ್ರಾ ಗೌಡ ಆಸ್ತಿಯೆಷ್ಟು?
ಸಿನಿಮಾರಂಗದಲ್ಲಿ ಮೊದ ಮೊದಲು ಕಾಲಿಟ್ಟವರಿಗೆ, ಉದಯೋನ್ಮುಖ ಪ್ರತಿಭೆಗಳು, ಪ್ರತಿಷ್ಠಿತ ಬ್ಯಾನರ್‌ನಲ್ಲಿ ಅಥವಾ ಸ್ಟಾರ್ ಹೀರೋ ಎದುರು ಕೆಲಸ ಮಾಡದವರಿಗೆ ಅಂತಹ ದೊಡ್ಡ ಮಟ್ಟದಲ್ಲಿ ಹಣ ನೀಡಲಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ, ನಿರ್ಮಾಪಕರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಕಾಲಿಡದ ನಟರು ಮತ್ತು ನಟಿಯರಿಗೆ ಅವಕಾಶ ನೀಡಿ ಸುಮ್ಮನಾಗುತ್ತಾರೆ. ಕೆಲವೊಮ್ಮೆ ಸುಮಾರು 50 ಸಾವಿರದಿಂದ 1 ಲಕ್ಷದವರೆಗೆ ಪಡೆಯಬಹುದು.
ಅಂದಹಾಗೆ ದರ್ಶನ್ ತಮ್ಮ ಚೊಚ್ಚಲ ಸಿನಿಮಾ 'ಮೆಜೆಸ್ಟಿಕ್'ಗೆ ಸಂಭಾವನೆ ಪಡೆದಿಲ್ಲ ಮತ್ತು ಸುಮಾರು 10 ಸಿನಿಮಾಗಳಿಗೆ ನಾಯಕನಾಗಿ ನಟಿಸಿದ್ದರೂ ಲಕ್ಷಕ್ಕಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ಹಾಗಾಗಿ ಪವಿತ್ರಾ ಗೌಡ ತನ್ನ ನಟನಾ ವೃತ್ತಿಯಿಂದ ದೊಡ್ಡ ಮೊತ್ತವನ್ನು ಗಳಿಸಲಿಲ್ಲ. ಆಕೆ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡದಿದ್ದರೂ ಆಕೆಯ ನಿವ್ವಳ ಮೌಲ್ಯ ಇನ್ನೂ 10 ಕೋಟಿ ರೂ.ಗಿಂತ ಹೆಚ್ಚಿದೆ ಎಂದು ಸುವರ್ಣ ನ್ಯೂಸ್‌ನಲ್ಲಿ ವರದಿಯಾಗಿದೆ. ಈಗ ಆರ್‌ಆರ್‌ನಗರದ 3 ಮಹಡಿಯ ಡ್ಯುಪ್ಲೆಕ್ಸ್ ಮನೆಯ ಮಾಲೀಕೆ ಪವಿತ್ರಾ ಗೌಡ.
ಆರ್.ಆರ್.ನಗರದ ಈ ಆಸ್ತಿ ಸುಮಾರು 5-6 ಕೋಟಿ ರೂಪಾಯಿಯಿದೆ. ಇದರ ಜೊತೆಗೆ ಅವರಿಗೆ ತೋಟದ ಮನೆಯು ಇದೆ. ರೇಂಜ್ ರೋವರ್ ಮತ್ತು ವೋಕ್ಸ್‌ವ್ಯಾಗನ್ ಎಂಬ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ರೆಡ್ ಕಾರ್ಪೆಟ್ ಎಂಬ ಹೆಸರಿನ ಬೊಟಿಕ್ ನಡೆಸುತ್ತಾರೆ. ಇದರ ಜೊತೆಗೆ ಹಲವು ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ವರದಿ ಹೇಳುತ್ತದೆ.












Click it and Unblock the Notifications