Pavithra Gowda: ನಟ ದರ್ಶನ್ ಅಡ್ಡಾದಲ್ಲಿ ಪವಿತ್ರಾ ಗೌಡ ಪ್ರತ್ಯಕ್ಷ, ವಿಡಿಯೋ ವೈರಲ್
ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ನಟಿ ಪವಿತ್ರಾ ಗೌಡ ಒಂದೇ ಕೇಸ್‌ನಲ್ಲಿ ಜೈಲು ಸೇರಿದ್ದರು. ಪವಿತ್ರಾ ಗೌಡ ದರ್ಶನ್ ಅವರ ಅತ್ಯಾಪ್ತೆಯೂ ಹೌದು. ಇದೇ ಕಾರಣಕ್ಕೆ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ ಇಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಜೈಲಿನಿಂದ ಹೊರಬಂದ ನಂತರ ಇಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ ಎನ್ನುವಂತಿತ್ತು. ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಅಕ್ಕಪಕ್ಕ, ಎದುರು ಬದುರಾಗಿದ್ದು ಬಿಟ್ಟರೆ ಬೇರೆಲ್ಲೂ ಮುಖಾಮುಖಿ ಭೇಟಿಯಿಲ್ಲ. ಆದರೆ, ಇದೀಗ ಖುದ್ದು ಪವಿತ್ರಾ ಗೌಡ ಅವರೇ ದರ್ಶನ್ ಅವರ ಫೇವರೇಟ್ ಅಡ್ಡಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ದರ್ಶನ್ ಆಪ್ತೆಯೂ ಆಗಿರುವ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ದರ್ಶನ್, ಪವಿತ್ರಾ ಹಾಗೂ ಇನ್ನಿತರರು ಸೇರಿ ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಿರುವ ಆರೋಪವಿದೆ. ಇದೇ ಕೇಸ್‌ನಲ್ಲಿ ಇಬ್ಬರೂ ಕೂಡ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಬಳಿಕ ದರ್ಶನ್ ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಹಲವು ತಿಂಗಳ ಕಾಲ ಇಬ್ಬರೂ ಸೆರೆವಾಸದಲ್ಲೇ ಇದ್ದರು. ಬಳಿಕ ಜಾಮೀನು ಸಿಕ್ಕಿದ್ದರಿಂದ ಕೆಲ ತಿಂಗಳ ಹಿಂದೆ ಜೈಲಿಂದ ರಿಲೀಸ್ ಆಗಿದ್ರು. ಅಚ್ಚರಿ ಎಂದರೆ ಜಾಮೀನು ಸಿಕ್ಕ ನಂತರ ಇವರಿಬ್ಬರ ನಡುವೆ ಮಾತುಕತೆಯೂ ಇರಲಿಲ್ಲ.
ಮೊದಲಿನಿಂದಲೂ ಪರಿಚಯ ಇದ್ದ ಇವರು ಒಂದೇ ಕೇಸ್‌ನಲ್ಲಿ ಜೈಲು ಸೇರಿದ ನಂತರ ಅಂತರ ಕಾಯ್ದುಕೊಂಡಿದ್ದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಕೋರ್ಟ್ ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಮಾತ್ರವೇ ಇಬ್ಬರು ಮುಖಾಮುಖಿಯಾಗುತ್ತಿದ್ದರು. ಆದರೆ ಯಾವುದೇ ಮಾತುಕತೆ ಇರುತ್ತಿರಲಿಲ್ಲ. ಹೀಗಾಗಿ ದರ್ಶನ್ ಪವಿತ್ರಾ ಗೌಡ ಅವರ ಮೇಲೆ ಮುನಿಸಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದೀಗ ದರ್ಶನ್ ಅವರ ಅಡ್ಡಾ ಎಂದೇ ಕರೆಯಲ್ಪಡುವ ಜಾಗದಲ್ಲಿ ಪವಿತ್ರಾ ಗೌಡ ಕಾಣಿಸಿಕೊಂಡಿದ್ದಾರೆ. ಅದೂ ಬೆಂಗಳೂರಿನಲ್ಲಿರುವ ಜಾಗದಲ್ಲೇ.

ಡಿಬಾಸ್ ಸಫಾರಿಗೆ ಪವಿತ್ರಾ ಗೌಡ ಭೇಟಿ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ "ಸ್ಟೋನಿ ಬ್ರೂಕ್" ರೆಸ್ಟೋರೆಂಟ್ ನಟ ದರ್ಶನ್ ಅವರ ಅಡ್ಡಾ ಎಂದೇ ಕರೆಯಲಾಗುತ್ತದೆ. ಏಕೆಂದರೆ ದರ್ಶನ್ ಅವರು ಈ ರೆಸ್ಟೋರೆಂಟ್‌ಗೆ ಹೆಚ್ಚಾಗಿ ಭೇಟಿ ನೀಡಿ, ಪಾರ್ಟಿಗಳನ್ನು ಮಾಡುತ್ತಿದ್ದರು. ಮತ್ತೊಂದು ವಿಶೇಷ ಅಂದ್ರೆ ಇದೇ ರೆಸ್ಟೋರೆಂಟ್‌ನಲ್ಲಿ ದರ್ಶನ್ ಅವರ ನೆನಪಿನಲ್ಲಿ "ಡಿಬಾಸ್ ಸಫಾರಿ" ಎನ್ನುವ ವಿಶೇಷ ಮಿನಿ ಮ್ಯೂಸಿಯಂ ಕೂಡ ಇದೆ. ಇದರಲ್ಲಿ ಪ್ರಾಣಿಪ್ರಿಯರೂ ಆದ ದರ್ಶನ್ ಅವರು ಸೆರೆಹಿಡಿದಿದ್ದ ಅಪರೂಪದ ವನ್ಯಜೀವಿ ಫೋಟೋಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನು ದರ್ಶನ್ ಅವರೇ ಉದ್ಘಾಟಿಸಿದ್ದರು.
ಈ ಡಿಬಾಸ್ ಸಫಾರಿಗೆ ಪವಿತ್ರಾ ಗೌಡ ಭೇಟಿ ನೀಡಿರುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಕ್ಲಿಕ್ಕಿಸಿರುವ ಫೋಟೋಗಳನ್ನು ನೋಡಿ ಪವಿತ್ರಾ ಗೌಡ ಫುಲ್ ಖುಷ್ ಆಗಿದ್ದಾರೆ. ಡಿಬಾಸ್ ಸಫಾರಿ ಎಂಬ ಬೋರ್ಡ್ ಮುಂದೆ ನಿಂತು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಅವರು ಅಕ್ಕಾ ನೀವು ಯಾವಾಗಲೂ ಖುಷಿಯಾಗಿರಬೇಕು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಅನ್ನು ಪವಿತ್ರಾ ಗೌಡ ಕೂಡ ರೀಪೋಸ್ಟ್ ಮಾಡಿಕೊಂಡು ಥ್ಯಾಂಕ್ಯು ಪ್ರದೀಪ್ ಎಂದು ಬರೆದಿಕೊಂಡಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications