Darshan Thoogudeepa: ದರ್ಶನ್ & ಗ್ಯಾಂಗ್‌ನಲ್ಲಿ ವಾರ್ ಶುರು, ಹೊಸ ಗ್ಯಾಂಗ್‌ಗೆ ಪವಿತ್ರಾ ಗೌಡ ಲೀಡರ್?

ದರ್ಶನ್ ತೂಗುದೀಪ್ & ಗ್ಯಾಂಗ್ ಈಗ ಚೂರು ಚೂರಾಗಿ ಹೋಗಿದ್ದು, ದರ್ಶನ್ ತೂಗುದೀಪ್ ತಾವೇ ಮಾಡಿಕೊಂಡ ತಪ್ಪಿಗೆ ಈಗ ಪರಿತಪಿಸುವ ಪರಿಸ್ಥಿತಿ ಬಂದಿದೆ. ಹೀಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ ತೂಗುದೀಪ್ ಈಗಲೂ ಬದಲಾಗಿಲ್ಲ ಎಂಬ ಆರೋಪದ ನಡುವೆ, ಮತ್ತೊಂದು ಕಿಚ್ಚು ಹೊತ್ತಿಕೊಂಡಿದೆ! ಹಾಗಾದ್ರೆ ಏನದು ಬೆಂಕಿ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

ದರ್ಶನ್ ತೂಗುದೀಪ್ ಜೊತೆಗೆ ಇದ್ದವರೇ ಈಗ ಶತ್ರುಗಳಾಗಿ ಬದಲಾಗುತ್ತಿದ್ದಾರೆ. ದರ್ಶನ್ & ಗ್ಯಾಂಗ್ ವಿರುದ್ಧ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಆರೋಪ ಅಂಟಿಕೊಂಡಿದೆ. ಈ ಕಾರಣಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ದರ್ಶನ್ ತೂಗುದೀಪ್ ಆಂಡ್ ಗ್ಯಾಂಗ್‌ನಲ್ಲಿ ಈಗ ಬಿರುಕು ಕಾಣಿಸಿಕೊಂಡಿದೆ. ಅದರಲ್ಲೂ, ದರ್ಶನ್ ಇದೀಗ ತಮ್ಮ ಜೊತೆಗಾರರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂಬ ಆರೋಪಗಳ ನಡುವೆ, ದರ್ಶನ್ & ಗ್ಯಾಂಗ್‌ಗೆ ಪವಿತ್ರಾ ಗೌಡ ಹೊಸ ಗ್ಯಾಂಗ್ ಲೀಡರ್ ಆಗಿ ಆಯ್ಕೆ ಆಗಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿಬಂದಿದೆ!

Pavithra Gowda And Darshan Thoogudeepa Is On Trend Again

ಪವಿತ್ರಾ ಗೌಡ ಹೊಸ ಗ್ಯಾಂಗ್ ಲೀಡರ್?

ದರ್ಶನ್ ತೂಗುದೀಪ್ ಇದೀಗ ತಮ್ಮ ಗ್ಯಾಂಗ್‌ನ ಸದಸ್ಯರ ವಿರುದ್ಧವೇ ರೊಚ್ಚಿಗೆದ್ದು, ಕೊಲೆ ಆರೋಪದಲ್ಲಿ ತನ್ನ ಹೆಸರು ಬರಲು ನೀವೆ ಕಾರಣ ಎಂದು ಹಲ್ಲೆ ಕೂಡ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ಕಾರಣಕ್ಕೆ ದರ್ಶನ್ ವಿರುದ್ಧ ಆರೋಪಿಗಳಾದ ಪ್ರದೋಷ್ & ಪವಿತ್ರಾ ಗೌಡ ರೊಚ್ಚಿಗೆದ್ದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಈಗ ಜೈಲಿನ ಒಳಗೆ ದರ್ಶನ್ ವಿರುದ್ಧ ಪ್ರತ್ಯೇಕ ಗುಂಪು ಒಂದನ್ನ ರಚಿಸಿಕೊಂಡು, ರಿವೇಂಜ್ ಅಂದ್ರೆ ಸೇಡು ಕೂಡ ತೀರಿಸಿಕೊಳ್ಳಲು ಕಾಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ದರ್ಶನ್ ಈಗಾಗಲೇ ಪವಿತ್ರಾ ಗೌಡ ಜೊತೆಗೆ ಮಾತು ಬಿಟ್ಟಿದ್ದಾರೆ. ಇದು ಕೂಡ ಪವಿತ್ರಾ ಗೌಡ ಪಿತ್ತ ನೆತ್ತಿಗೇರುವಂತೆ ಮಾಡಿದೆಯಂತೆ.

ಹೆಂಡತಿ & ಮಗನ ಮಾತಿಗೆ ದರ್ಶನ್ ಜೈ!

ದರ್ಶನ್ ತೂಗುದೀಪ್ ಈ ಪರಿಸ್ಥಿತಿಗೆ ಬರಲು ಕಾರಣ ಆಗಿದ್ದೇ ಪವಿತ್ರಾ ಗೌಡ ಎಂಬ ಆರೋಪ ಇದೆ. ಅಲ್ಲದೆ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ನಡುವೆ ಬೇರೆಯದ್ದೇ ರೀತಿಯಾದ ಸಂಬಂಧ ಇದೆ ಎಂಬ ಆರೋಪ ಕೂಡ ಇದೆ. ಇಂತಹ ಸ್ಥಿತಿಯಲ್ಲಿ ಇದೀಗ ದರ್ಶನ್ ಧರ್ಮಪತ್ನಿ & ಮಗ ಸೇರಿಕೊಂಡು ದರ್ಶನ್‌ಗೆ ಬುದ್ಧಿ ಹೇಳಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೀಗೆ ದರ್ಶನ್‌ಗೆ ಬುದ್ಧಿ ಹೇಳಿದ್ದಾರೆ ವಿಜಯಲಕ್ಷ್ಮೀ ದರ್ಶನ್ ಹಾಗೂ ವಿನೀಶ್ ತೂಗುದೀಪ್.

ಹೆಂಡತಿ & ಮಗನ ಬುದ್ಧಿ ಮಾತನ್ನ ಕೇಳುತ್ತಿರುವ ಕೊಲೆ ಆರೋಪಿ ದರ್ಶನ್ ತೂಗುದೀಪ್ ಈಗ, ಪವಿತ್ರಾ ಗೌಡ ಸಹವಾಸವನ್ನೇ ಬಿಡಲು ಮುಂದಾಗಿದ್ದಾರೆಂಬ ಮಾತುಗಳು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡುತ್ತಿವೆ. ಹಾಗೇ ಪರಪ್ಪನ ಅಗ್ರಹಾರದಲ್ಲಿ ಕೂಡ ಈ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ನಿಜವಾಗೂ ಪವಿತ್ರಾ ಗೌಡ & ಗ್ಯಾಂಗ್, ದರ್ಶನ್ ವಿರುದ್ಧ ಈಗ ರೊಚ್ಚಿಗೆದ್ದಿದೆಯಾ? ಕಾದು ನೋಡಬೇಕಿದೆ.

ದರ್ಶನ್ & ಜೊತೆಗಾರರಿಗೆ ಬಿರಿಯಾನಿ?

ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆ ಬಗ್ಗೆ ಬಿಡಿಸಿ ಹೇಳಬೇಕಿಲ್ಲ, ಯಾಕಂದ್ರೆ ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆದಾಗ ಗಾಂಜಾ, ಸಿಗರೇಟ್, ಲಿಕ್ಕರ್ ಹೀಗೆ ಏನೇನು ವಸ್ತು ಸಿಗಬಾರದೋ ಅದೆಲ್ಲಾ ಸಿಕ್ಕಿತ್ತು. ಈಗಲೂ, ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗಳಿಗೆಲ್ಲಾ ಅಧಿಕಾರಿಗಳೇ ಸಹಾಯ ಮಾಡುತ್ತಾರೆ. ಅದರಲ್ಲೂ ಜೈಲಿನ ಒಳಗಡೆ ದುಡ್ಡು ಕೊಟ್ಟರೆ ಏನೇನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಜೈಲಿನ ಒಳಗೆ ಮಾಡ್ತಾರೆ ಎಂಬ ಆರೋಪದ ನಡುವೆ, ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ ಸಪ್ಲೈ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿತ್ತು. ಆದರೆ ಇದಕ್ಕೆಲ್ಲ ಸೂಕ್ತ ಸಾಕ್ಷ್ಯಗಳು ಲಭ್ಯವಾಗಿಲ್ಲ, ಹೀಗಾಗಿ ಇದು ಗಾಳಿ ಸುದ್ದಿ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+