Darshan Thoogudeepa: ಪರಪ್ಪನ ಅಗ್ರಹಾರದಲ್ಲಿ ಬಡವ ಬದುಕುವುದಕ್ಕೆ ಆಗಲ್ಲ, ದುಡ್ಡು ಇರುವ ಕ್ರಿಮಿನಲ್‌ಗಳ ಅಬ್ಬರ ನೋಡಕ್ಕಾಗಲ್ಲ!

ಪರಪ್ಪನ ಅಗ್ರಹಾರದಲ್ಲಿ ಸಾವಿರಾರು ಖೈದಿಗಳು ನರಳುತ್ತಿದ್ದಾರೆ ಅಂತಾ ಹೊರಗಿನ ಜಗತ್ತು ಅಂದುಕೊಂಡಿದೆ. ಆದರೆ ಸತ್ಯ ಅದಲ್ಲ ಸ್ವಾಮಿ, ನಮ್ಮ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಜವಾಗಿಯೂ ನರಳಾಟ ಪಡುತ್ತಿರುವುದು ಬಡವರು. ಯಾಕೆ ಅಂದ್ರೆ ಪರಪ್ಪನ ಅಗ್ರಹಾರ ಜೈಲಲ್ಲಿ ದುಡ್ಡು ಇದ್ದರೆ ಸಾಕು, ನೀವು ಎಂತಹ ಕ್ರಿಮಿನಲ್ ಕೆಲಸ ಮಾಡಿದ್ದರು ಕೂಡ ನಿಮ್ಮನ್ನ ರಾಜನಂತೆ ನೋಡಿಕೊಳ್ಳುತ್ತಾರೆ. ನಿಮ್ಮ ಕೈ & ಕಾಲು ಒತ್ತುವ ಸೇವೆಯು ಕೂಡ ಅಲ್ಲಿ ಇದೆಯಂತೆ! ಅದು ಹೇಗೆ ಗೊತ್ತಾ? ಕನ್ನಡಿಗರು ಮಾಡುತ್ತಿರುವ ಆರೋಪ ಏನು?

ನಟ ದರ್ಶನ್ ತೂಗುದೀಪ್ ಅವರ ಹಣೆ ಬರಹ ಸರಿ ಇಲ್ಲವೇನೋ ಅಂತಾ ಫ್ಯಾನ್ಸ್ ಇದೀಗ ಗೊಣಗುತ್ತಾ, ಚಿಂತೆ ಮಾಡುವ ಪರಿಸ್ಥಿತಿ ಬಂದಿದೆ. ಯಾಕೆ ಅಂದ್ರೆ ಈಗಿರುವ ಪರಿಸ್ಥಿತಿಯಲ್ಲಿ, ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಗಳಿಗೂ ರಾಜ ಮರ್ಯಾದಿ ಸಿಗುತ್ತಿದೆಯಾ? ದುಡ್ಡು ಇದ್ದರೆ ಕೊಲೆ ಆರೋಪಿಗು ಜೈಲು ಸ್ವರ್ಗ ಆಗುತ್ತಾ? ಅಂತಾ ಜನರು ರೊಚ್ಚಿಗೆದ್ದಿದ್ದು, ಈ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಅವರ ಫೋಟೋ ಬಿರುಗಾಳಿ ಎಬ್ಬಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಹೀಗೆ ದುಡ್ಡು ಇದ್ದರೆ ತಿಂಗಳಿಗೆ ಲಕ್ಷ ಲಕ್ಷ ಕೊಡಬಹುದು, ಆದರೆ ಕೈಯಲ್ಲಿ ಕಾಸು ಇಲ್ಲದೆ ಬಂದ ಬಡ ಖೈದಿಗಳ ಕಥೆ ಏನು?

Parappana Agrahara And Darshan Thoogudeepa Incident Explained

ದುಡ್ಡು ಇದ್ದರೆ ಒಂದು ನ್ಯಾಯ...

ಪರಪ್ಪನ ಅಗ್ರಹಾರ ಜೈಲಿನ ಒಳಗೆ ದುಡ್ಡು ಇದ್ದ ಖೈದಿಗಳಿಗೆ ಒಂದು ನ್ಯಾಯ, ಹಣ ಇಲ್ಲ ಎಂದು ಬಂದ ಖೈದಿಗಳಿಗೆ ಮತ್ತೊಂದು ನ್ಯಾಯ. ಯಾಕಂದ್ರೆ ಜೈಲಿನ ಒಳಗೆ ಅಧಿಕಾರಿಗಳೇ ಭ್ರಷ್ಟಾಚಾರ ನಡೆಸುತ್ತಾರೆ ಎಂಬ ಆರೋಪ ಇದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಈಗ, ನಟ ದರ್ಶನ್ ತೂಗುದೀಪ್ ಮತ್ತು ನಾಗರಾಜ್ ಫೋಟೋ ಹರಿದಾಡುತ್ತಿದೆ. ಇಂತಹ ಸ್ಥಿತಿ ಎದುರಾದ ಸಮಯದಲ್ಲೇ, ಪರಪ್ಪನ ಅಗ್ರಹಾರ ಜೈಲಲ್ಲಿ ದುಡ್ಡು ಇಲ್ಲದೆ ಹೋದರೆ ಹೇಗೆ ನಡೆಸಿಕೊಳ್ಳುತ್ತಾರೆ? ಎಂಬ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.

ಜೈಲಿನಲ್ಲಿ ಹೆಂಡ & ಸಿಗರೇಟ್ ಸಪ್ಲೈ?

ದರ್ಶನ್ ತೂಗುದೀಪ್ ಅವರಿಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಕೂಡ, ಸಿಗರೇಟ್ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಇಡೀ ಕರ್ನಾಟಕದ ಜನರನ್ನು ಕಾಡುತ್ತಿದೆ. ಹೀಗಾಗಿ, ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತೆ? ಅನ್ನೋದನ್ನ ಕೂಡ ಕಾದು ನೋಡಬೇಕು. ಇದರ ಜೊತೆಯಲ್ಲಿ ವಿಡಿಯೋ ಕಾಲ್ ಕೂಡ ಮಾಡಿದ್ದಾರೆ ನಟ ದರ್ಶನ್. ದರ್ಶನ್ ತೂಗುದೀಪ್ ಅವರು ವಿಡಿಯೋ ಕಾಲ್ ಕೂಡ ಮಾಡಿರುವ ಬಗ್ಗೆ ಸಾಕ್ಷಿ ಸಿಕ್ಕಿರುವುದು ಅವರಿಗೆ ಮತ್ತಷ್ಟು ಗಂಡಾಂತರವನ್ನ ತರಿಸಿದೆ. ಹಾಗೇ ಜಾಮೀನು ಸಿಗುವುದು ಕೂಡ ಮತ್ತಷ್ಟು ಕಷ್ಟ ಆಗಲಿದೆ ಎಂಬ ಮಾತು ಕೇಳಿಬಂದಿದೆ.

ಕನ್ನಡ ನಾಡಿನಲ್ಲಿ ಏನಿದು?

ಈಗಾಗಲೇ ದರ್ಶನ್ ತೂಗುದೀಪ್ ತಮ್ಮ ಗ್ಯಾಂಗ್ ಜೊತೆಗೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟು ಸೇದಿರುವ & ವಿಡಿಯೋ ಕಾಲ್‌ನ ಮೂಲಕ ಮಾತನಾಡಿರುವ ಫೋಟೋ & ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ & ದರ್ಶನ್ ಅವರಿಗೆ ಸಂಬಂಧಿಸಿದ ಫೋಟೋ ಕೂಡ ಲೀಕ್ ಆಗಲಿದೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಮಾಹಿತಿಗಳು ಹರಿದಾಡುತ್ತಿರುವುದು ದುರದೃಷ್ಟದ ಸಂಗತಿ ಅಂತಿದ್ದಾರೆ ಕನ್ನಡಿಗರು. ಅಲ್ಲದೆ ಈ ವಿಚಾರವಾಗಿ ಸರ್ಕಾರ & ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+