ಬೆತ್ತಲೆಯಾಗಿ ಆಸ್ಕರ್ ಅವಾರ್ಡ್ ಕೊಡಲು ಸ್ಟೇಜ್ ಮೇಲೆ ಬಂದ WWE ಸ್ಟಾರ್ ಜಾನ್ ಸೀನಾ!
ಜಗತ್ತಿನ ಅತಿದೊಡ್ಡ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದಿರುವ 'ಆಸ್ಕರ್ ಅವಾರ್ಡ್' ಶುರುವಾಗಿದ್ದು ನೂರಾರು ತಾರೆಗಳು ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇನ್ನು ಇದೇ ಸಮಯದಲ್ಲಿ ನಟ ಹಾಗೂ WWE ಸೂಪರ್ ಸ್ಟಾರ್ ಜಾನ್ ಸೀನಾ ಬೆತ್ತಲೆಯಾಗಿಯೇ, ಆಸ್ಕರ್ ಸ್ಟೇಜ್ ಮೇಲೆ ಎಂಟ್ರಿ ಕೊಟ್ಟು ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಅರೆರೆ ಏನಿದು ಆಘಾತಕಾರಿ ಘಟನೆ ಅಂದ್ರಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಅಂದಹಾಗೆ ಈಗ 96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮವು ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 11ರ ಮುಂಜಾನೆಯೇ ಶುರು ಆಗಿದೆ. ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಈ ಅದ್ಧೂರಿ ಕಾರ್ಯಕ್ರಮ ಶುರುವಾಗಿದೆ. ಜಿಮ್ಮಿ ಕಿಮ್ಮೆಲ್ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು, ಈ ಬಾರಿಯ 'ಆಸ್ಕರ್ ಅವಾರ್ಡ್' ಕಾರ್ಯಕ್ರಮವು ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಅದರಲ್ಲಿಯೂ ನಟ ಹಾಗೂ WWE ಸೂಪರ್ ಸ್ಟಾರ್ ಜಾನ್ ಸೀನಾ ಬೆತ್ತಲೆಯಾಗಿ ಆಸ್ಕರ್ ಪ್ರಶಸ್ತಿ ಸಮಾರಂಭದ ಸ್ಟೇಜ್‌ಗೆ ಬಂದರು. ಹಾಗಾದರೆ, ಹೀಗೆ ಜಾನ್ ಸೀನಾ ಬೆತ್ತಲೆಯಾಗಿ ಬಂದಿದ್ದು ಏಕೆ? ವಿಡಿಯೋ ನೋಡಲು ಮುಂದೆ ಓದಿ.

ಜಗತ್ತಿನ ಮೂಲೆ ಮೂಲೆಯಲ್ಲೂ ಫೇಮಸ್!
ವೃತ್ತಿಪರ ಕುಸ್ತಿಪಟು ಎನಿಸಿಕೊಂಡಿರುವ, ಜಾನ್ ಸೀನಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? WWE ಸೂಪರ್ ಸ್ಟಾರ್ ಜಾನ್ ಸೀನಾ ಜಗತ್ತಿನ ವಿವಿಧ ದೇಶಗಳಲ್ಲಿ ಚಿರಪರಿಚಿತ. ಅದರಲ್ಲೂ ಜಾನ್ ಸೀನಾ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಇಂತಿಪ್ಪ ಜಾನ್ ಸೀನಾ, ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಆದ್ರೆ ಈ ಬಾರಿ ತಮ್ಮ ಬಟ್ಟೆಯನ್ನೆಲ್ಲಾ ಬಿಚ್ಚಾಕಿ ದಿಢೀರ್ ಜಗತ್ತಿನ ಅತಿದೊಡ್ಡ ಪ್ರಶಸ್ತಿ ಸಮಾರಂಭದಲ್ಲಿ ಎಂಟ್ರಿ ಹಾಕಿದ್ದಾರೆ. ಇದೀಗ ಈ ಫೋಟೋ ಹಾಗೂ ವಿಡಿಯೋ ಎಲ್ಲೆಲ್ಲೂ ವೈರಲ್ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಜಾನ್ ಸೀನಾ ಬೆತ್ತಲಾದ ವಿಡಿಯೋ ಕಿಚ್ಚು ಹಚ್ಚಿದೆ. ಆ ವಿಡಿಯೋನ ನೋಡಲು, ಇದೀಗ ಮುಂದೆ ಓದಿ.
ಕೋಟಿ ಕೋಟಿ ಖರ್ಚು ಮಾಡ್ತಾರೆ
'ಆಸ್ಕರ್ ಅವಾರ್ಡ್' ಅಂದ್ರೆ 'ಆಸ್ಕರ್ ಪ್ರಶಸ್ತಿ'ಗೆ ಒಂದು ದೊಡ್ಡ ಗತ್ತು ಇದೆ. ಹೀಗಾಗಿಯೇ ಈ ಪ್ರಶಸ್ತಿ ಸಮಾರಂಭಕ್ಕೆ ಬರುವ ಸ್ಟಾರ್‌ಗಳು ಕೋಟಿ ಕೋಟಿ ಬೆಲೆ ಬಾಳುವ ಬಟ್ಟೆಗಳನ್ನು ಧರಿಸಿ ಬರುತ್ತಾರೆ. ಹಾಗೇ ಈ ಕಾರಣಕ್ಕೆ ಅಂತಾನೆ ತಿಂಗಳು ಗಟ್ಟಲೆ ತಮ್ಮ ಸಮಯವನ್ನೂ ವ್ಯರ್ಥ ಮಾಡಿ, ಬಟ್ಟೆಗಳನ್ನು ಅಂದ್ರೆ ಕಾಸ್ಟ್ಯೂಮ್ ರೆಡಿ ಮಾಡಿಕೊಳ್ಳುತ್ತಾರೆ ಹಾಲಿವುಡ್‌ನ ಸ್ಟಾರ್ ನಟ & ನಟಿಯರು. ಆದರೆ ಈಗ ಜಾನ್ ಸೀನಾ ಒಂದೇ ಒಂದು ರೂಪಾಯಿ ಖರ್ಚು ಇಲ್ಲದೆ ಆಸ್ಕರ್ ಪ್ರಶಸ್ತಿ ಸಮಾರಂಭ ಮುಗಿಸಿದ್ದಾರೆ. ಹಾಗೆ ಇಡೀ ಜಗತ್ತು ಈಗ ತಮ್ಮ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ ಜಾನ್ ಸೀನಾ.

#JohnCena presented the #Oscar for Best Costume Design NAKED 😂🥵 https://t.co/r7WoNDVle4 (🎥: ABC) pic.twitter.com/BO4coRLTFA
— TMZ (@TMZ) March 11, 2024
ಜಾನ್ ಸೀನಾಗೆ ದೊಡ್ಡ ಹೆಸರು!
ಮೊದಲೇ ಹೇಳಿದಂತೆ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಈ ಜಾನ್ ಸೀನಾ ಅವರು ಕೋಟಿ ಕೋಟಿ ಆಸ್ತಿಯನ್ನೂ ಮಾಡಿದ್ದಾರೆ. ಅದ್ರಲ್ಲೂ WWE ಅಖಾಡದಲ್ಲಿ ಜಾನ್ ಸೀನಾ ಹವಾ ಬಲು ಜೋರಾಗಿದೆ. ಹೀಗಾಗಿ, ಜಾನ್ ಸೀನಾ ಅಮೆರಿಕ ಮಾತ್ರವಲ್ಲದೆ ಜಗತ್ತಿನ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ್ದಾರೆ. ಹೀಗಿದ್ದರೂ, ಇಂತಹ ನಟ ಕಂ ವೃತ್ತಿಪರ ಕುಸ್ತಿಪಟು ಬೆತ್ತಲೆಯಾಗಿ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಬಂದಿದ್ದು ಭಾರಿ ಚರ್ಚೆಗೆ ಇದೀಗ ವೇದಿಕೆ ಒದಗಿಸಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಜಾನ್ ಸೀನಾ ಹಿಂಗೆ ಬಂದಿದ್ದು ಸಿಕ್ಕಾಪಟ್ಟೆ ಗಮನವನ್ನು ಸೆಳೆಯುತ್ತಿದೆ. ಹಾಗೇ ಜಾನ್ ಸೀನಾ ಹೀಗೆ ಮಾಡಿದ್ದು ಸರಿ ಅಂತಾ ಕೆಲವರು ಹೇಳುತ್ತಿದ್ರೆ, ಇನ್ನೂ ಕೆಲವರು ಇದು ತಪ್ಪು ಅಂತಾ ಹೇಳುತ್ತಿದ್ದಾರೆ. ಆದ್ರೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಜಾನ್ ಸೀನಾ ತಮ್ಮದೇ ನಿರ್ಧಾರ ಸರಿ ಅಂತಾ ಖುಷಿಪಡುತ್ತಿದ್ದಾರೆ. ಈಗಾಗಲೇ ಬಹುತೇಕ ಸಮಾರಂಭವು ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಬಾರಿ ಸಖತ್ ಸ್ಪೆಷಲ್ ಆಗಿ ಆಸ್ಕರ್ ಪ್ರಶಸ್ತಿ ಸಮಾರಂಭ ಆಯೋಜನೆ ಮಾಡಲಾಗಿತ್ತು.
ಆಸ್ಕರ್ ಗೆದ್ದ ಸಿನಿಮಾಗಳು ಯಾವುವು?
ಹಾಲಿವುಡ್ ಸಿನಿಮಾ ರಂಗ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಅಮೆರಿಕ ಮೂಲದ ಸಿನಿಮಾ ರಂಗ ಎಂಬ ಹೆಸರು ಇದ್ದರೂ ಹಾಲಿವುಡ್ ಈಗ ಜಗತ್ತಿನಾದ್ಯಂತ ಭಾರಿ ದೊಡ್ಡ ಸಂಚಲನ ಸೃಷ್ಟಿಸಿದೆ. ಒಂದೊಂದು ಸಿನಿಮಾಗೆ ಸಾವಿರ ಸಾವಿರ ಕೋಟಿ ಬಂಡವಾಳ, ಹೂಡಿಕೆ ಮಾಡುವ ಹಾಲಿವುಡ್ ಸಿನಿಮಾ ಮಂದಿ ಸದಾ ಹೈ ಲೆವೆಲ್‌ನಲ್ಲಿ ಇರುತ್ತಾರೆ. ಈ ಸಿನಿಮಾ ರಂಗದಲ್ಲಿ ಬರುವ ಚಿತ್ರಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ 'ಆಸ್ಕರ್ ಪ್ರಶಸ್ತಿ' ಎನ್ನಬಹುದು. ಹಾಗಾದರೆ 2024 ರ ಆಸ್ಕರ್ ಅಖಾಡದಲ್ಲಿ ಯಾವೆಲ್ಲಾ ಸಿನಿಮಾಗೆ ಅವಾರ್ಡ್ ಬಂದಿದೆ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಪ್ರಮುಖ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ
* ಅತ್ಯುತ್ತಮ ಸಿನಿಮಾ- ಓಪನ್ ಹೈಮರ್
* ಅತ್ಯುತ್ತಮ ನಟ- ಕಿಲಿಯನ್ ಮರ್ಫಿ (ಓಪನ್ ಹೈಮರ್)
* ಅತ್ಯುತ್ತಮ ನಟಿ- ಎಮ್ಮಾ ಸ್ಟೋನ್ (ಫೋರ್ ಥಿಂಗ್ಸ್)
* ಅತ್ಯುತ್ತಮ ಡೈರೆಕ್ಟರ್- ಕ್ರಿಸ್ಟೋಫರ್ ನೋಲನ್ (ಓಪನ್ ಹೈಮರ್)
* ಅತ್ಯುತ್ತಮ ಸಂಕಲನ- ಓಪನ್ ಹೈಮರ್
* ಅತ್ಯುತ್ತಮ ಸೌಂಡ್- ದಿ ಜೋನ್ ಆಫ್ ಇಂಟ್ರೆಸ್ಟ್
* ಅತ್ಯುತ್ತಮ ಛಾಯಾಗ್ರಹಣ- ಹೊಯ್ಟೆ ವ್ಯಾನ್ ಹೊಯ್ಟೆಮಾ (ಓಪನ್ ಹೈಮರ್)
* ಒರಿಜಿನಲ್ ಸಾಂಗ್- ವಾಟ್ ವಾಸ್ ಐ ಮೇಡ್ ಫಾರ್ (ಬಾರ್ಬಿ)












Click it and Unblock the Notifications