Orry : ಒಂದು ಟಚ್‌ಗೆ 25 ಲಕ್ಷ ಪೀಕುವ 'ಒರಿ' ಬಗ್ಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ವಿಷಯಗಳು
'ಒರಿ' ಎಂದೇ ಫೇಮಸ್ ಆಗಿರುವ ಇಂಟರ್ನೆಟ್ ಸೆನ್ಸೇಷನ್ ಓರ್ಹಾನ್ ಅವತ್ರಾಮನಿ ಮನೆಯಿಂದ ಹೊರ ಬಂದು ಫೋಟೋಗೆ ಫೋಸ್ ಕೊಟ್ಟರು ಸಾಕು ಲಕ್ಷ ಲಕ್ಷ ಪೀಕುತ್ತಾರೆ. ಒಂದು ಟಚ್‌ಗೆ 25 ಲಕ್ಷ ತೆಗೆದುಕೊಳ್ಳುವ ಈತ ಯಾವ ಹಾಲಿವುಡ್, ಬಾಲಿವುಡ್ ಸೆಲಬ್ರಿಟಿಗೂ ಕಡಿಮೆಯಲ್ಲ ಬಿಡಿ.
ಹೌದು.. ಒರಿ.. ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಹೆಸರು. ಬಾಲಿವುಡ್‌ನ ಯಾವುದೇ ಕಾರ್ಯಕ್ರಮ ಇರಲಿ, ಉದ್ಯಮಿಗಳ ಯಾವುದೇ ದೊಡ್ಡ ಸಮಾರಂಭಗಳಿರಲಿ ಅಲ್ಲಿ ಒರಿ ಇರಲೇಬೇಕು ಎನ್ನುವಂತಿದೆ ಸದ್ಯದ ಸ್ಥಿತಿ. ಎಲ್ಲ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುವ ಒರಿಯ ಒಂದು ಟಚ್‌ಗೆ ಬಾಲಿವುಡ್ ತಾರೆಯರು ಹಾತೊರೆಯುತ್ತಾರೆ. ಲಕ್ಷ ಲಕ್ಷ ಕೊಟ್ಟು ಫೋಟೋಗೆ ಫೋಸ್ ಕೊಡುತ್ತಾರೆ. ಆದರೂ, ಒರಿ ಯಾರು..? ಅವರ ತಂದೆ ತಾಯಿ ಯಾರು..? ಎಂಬ ಅನೇಕ ವಿಷಯಗಳ ಬಗ್ಗೆ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ನೀಡಲಿದೆ ಈ ಬರಹ.

ವೈಯಕ್ತಿಕ ಜೀವನದ ಬಗ್ಗೆ ಕಡಿಮೆ ಮಾತನಾಡುವ ಒರಿ
ದೊಡ್ಡ ಸೆಲಬ್ರಿಟಿ ಆಗಿರುವ ಒರಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಗೌಪ್ಯತೆ ಕಾಪಾಡುತ್ತಾರೆ. ಇಲ್ಲಿಯವರೆಗೂ ಎಲ್ಲಿಯೂ ಹೆಚ್ಚು ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಹೀಗಾಗಿಯೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೆಟಿಜನ್‌ಗಳು ಆಗಾಗ್ಗೆ ಅವರ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದಾರೆ. ಅವರ ಫೋಟೋಗಳಿಗೆ ಕಾಮೆಂಟ್ ಮಾಡಿ ಪ್ರಶ್ನಿಸಿದ್ದಾರೆ.
ಒರಿ ಯಾರು? ಎನ್ನುವುದೇ ಹಲವರ ಪ್ರಶ್ನೆ. ಈ ಇಂಟರ್‌ನೆಟ್ ಸೆನ್ಸೇಷನ್ ಜಾನ್ವಿ ಕಪೂರ್ ಅವರ ಬೆಸ್ಟ್ ಫ್ರೆಂಡ್ ಮತ್ತು ಇನ್‌ಫ್ಲುಯೆನ್ಸರ್. ಇದಲ್ಲದೆ, ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಮತ್ತು ಬಾಲಿವುಡ್ ಸ್ಟಾರ್ ಸೇರಿ ಖ್ಯಾತ ಉದ್ಯಮಿಗಳೊಂದಿಗೆ ಫೋಸ್ ಕೊಡುವುದು ಅವರ ಕೆಲಸ. ಆದರೆ, ಅವರು ಯಾರು ಎಲ್ಲಿಂದ ಬಂದರು, ಹೇಗೆ ಸಡನ್ ಆಗಿ ಖ್ಯಾತಿ ಗಳಿಸಿದರು ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ.
ಕೊನೆಗೂ ಕುಟುಂಬದ ಬಗ್ಗೆ ಮಾಹಿತಿ ಹಂಚಿಕೊಂಡ ಒರಿ
ಇತ್ತೀಚೆಗೆ ಒರಿ ಅವತ್ರಾಮನಿ ಮೊದಲ ಬಾರಿಗೆ ತಮ್ಮ ಕುಟುಂಬದ ಬಗ್ಗೆ ಕೆಲವು ಆಶ್ಚರ್ಯಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನಟಿ ಭಾರತಿ ಸಿಂಗ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ತಂದೆ ತಾಯಿಯ ಬಗ್ಗೆ ಹೆಚ್ಚು ಮಾತನಾಡದ ಅವರು ತನಗೆ ಇನ್ನೂ ಇಬ್ಬರು ಸಹೋದರರಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

"ತನಗೆ ಇನ್ನೂ ಇಬ್ಬರು ಸಹೋದರರಿದ್ದಾರೆ, ಒಬ್ಬರು ತನಗಿಂತ ಹಿರಿಯರು ಮತ್ತು ಇನ್ನೊಬ್ಬರು ತನಗಿಂತ ಕಿರಿಯರು. ನಮ್ಮ ಮೂವರಿಗೂ ಒಂದೇ ಮಗುವಿನ ಸಿಂಡ್ರೋಮ್ ಇದೆ. ನನ್ನ ಸಹೋದರರಿಬ್ಬರೂ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಒಬ್ಬರು ನ್ಯೂಯಾರ್ಕ್‌ನಲ್ಲಿದ್ದಾರೆ ಮತ್ತು ಒಬ್ಬರು ಕ್ಯಾಲಿಫೋರ್ನಿಯಾದಲ್ಲಿದ್ದಾರೆ, ಅವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಪೋಷಕರೊಂದಿಗೆ ಇಲ್ಲೇ ಇರುತ್ತೇನೆ. ನನಗೆ ಸಿಕ್ಕ ಮಾಧ್ಯಮಗಳ ಗಮನವನ್ನು ನೋಡಿ ನನ್ನ ಹೆತ್ತವರು ಕೆಲವು ದಿನಗಳ ಕಾಲ ಸಂತೋಷಪಟ್ಟರು. ಆದರೆ, ಈಗ ಅದನ್ನು ದಾಟಿ ಮುಂದೆ ಹೋಗಿದ್ದಾರೆ" ಎಂದಿದ್ದಾರೆ.
ಸಿನಿಮಾದಲ್ಲಿ ಕೆಲಸ ಮಾಡಲು ಇಷ್ಟವಿಲ್ಲ!
ಸದ್ಯದ ದಿನಗಳಲ್ಲಿ, ಪ್ರತಿಯೊಬ್ಬ ಇನ್‌ಫ್ಲುಯೆನ್ಸರ್ ಪ್ರಮುಖ ಗುರಿ ಸಿನಿಮಾ, ಒಟಿಟಿ ಅಥವಾ ಬಿಗ್ ಬಾಸ್ ವೇದಿಕೆಗೆ ಹೋಗುವುದು. ಕೆಲವರು ಸಿನಿಮಾ ಲೋಕದಲ್ಲಿ ಮಿಂಚುವ ಕನಸು ಕಾಣುತ್ತಾರೆ. ಆದರೆ, ಇಷ್ಟೊಂದು ಖ್ಯಾತಿಯ ಬಳಿಕವೂ ಒರಿಗೆ ಅಂತಹ ಯಾವುದೇ ಆಸೆಗಳಿಲ್ಲ. ಅವರಿಗೆ ಸಿನಿಮಾರಂಗದಲ್ಲಿ ಅಥವಾ ಒಟಿಟಿಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲವಂತೆ. ಇನ್ನು, ಕರಣ್ ಜೋಹರ್ ಅವರ ಧರ್ಮ ಕಾರ್ನರ್‌ಸ್ಟೋನ್ ಏಜೆನ್ಸಿ ಒರಿ ಅವರ ವ್ಯವಹಾರಗಳನ್ನು ನಿರ್ವಹಿಸುತ್ತದೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications