ಕಿಚ್ಚನ ಹಾಡಿಗೆ ಮೈ ಕುಣಿಸಿ ಕಿಚ್ಚು ಹೊತ್ತಿಸಿದ ಚಂದನದ ಗೊಂಬೆ
'ಚಂದನ'ದ ಗೊಂಬೆ ಅಂತಲೇ ಹೆಸರಾದ ನಿವೇದಿತಾ ಗೌಡ ವಿಚ್ಚೇದನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇದೀಗ ನಿವೇದಿತಾ ಗೌಡ ಶಾರ್ಟ್ ಡ್ರೆಸ್ ಹಾಕಿಕೊಂಡು ಕನ್ನಡ ಹಾಡಿಗೆ ಬಾತ್‌ರೂಮ್‌ನಲ್ಲಿ ಸ್ಟೆಪ್ಸ್ ಹಾಕಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾದ 'ತರಾ ತರಾ ಹಿಡಿಸಿದೆ ಮನಸ್ಸಿಗೆ ನೀನು' ಹಾಡಿಗೆ ನೃತ್ಯ ಮಾಡಿದ್ದಾರೆ ನಿವೇದಿತಾ. ಬಾತ್‌ರೂಮ್‌ನಲ್ಲೇ ನಿವೇದಿತಾ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದು ಜನ ಕೊಂಡಾಡಿದ್ದಾರೆ. ಕಳೆದ ಬಾರಿ ನಿವೇದಿತಾ ಬಿಳಿ ಸೀರೆ ಉಟ್ಟು ಮಳೆಯಲ್ಲಿ ನೃತ್ಯ ಮಾಡುತ್ತಾ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಇದೀಗ ಅವರು 'ಹೃದಯ ಹಿಡಿತಕೆ ಸಿಗುತ್ತಿಲ್ಲ' ಅಂತಾ ಹಾಡು ಹೇಳಿ ಜನ ತಿರುಗಿ ನೋಡುವಂತೆ ಮಾಡಿದ್ದಾರೆ.

ಹೌದು ನಿವೇದಿತಾ ಈಗ ಸಿಂಗಲ್ ಆಗಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರೊಂದಿಗೆ ವಿಚ್ಚೇದನ ಪಡೆದ ಬಳಿಕ ನಿವೇದಿತ ಹೆಚ್ಚಾಗಿ ಪ್ರವಾಸ ಮಾಡುತ್ತಿದ್ದಾರೆ. ಅಲ್ಲದೆ ತಾವು ಹೋದ ಕಡೆಗಳೆಲ್ಲಾ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಪಾರ್ಟಿ, ಪಬ್, ಕ್ಲಬ್ ಅಂತ ಸುತ್ತಾಡಿಕೊಂಡು ಇರುವ ನಿವೇದಿತಾ ಇತ್ತೀಚೆಗೆ ಶಾರ್ಟ್ ಡ್ರೆಸ್ ಹಾಕಿಕೊಂಡು ನೃತ್ಯ ಮಾಡುವ ವಿಡಿಯೋಗಳೇ ಹೆಚ್ಚೆಚ್ಚು ವೈರಲ್ ಆಗುತ್ತಿವೆ.
ಈ ವಿಡಿಯೋಗಳಿಗೆ ಜನ ಬ್ಯೂಟಿ, ಸ್ವೀಟಿ, ಕ್ಯೂಟಿ, ಗೊಂಬೆ, ಬೇಬಿ ಡಾಲ್, ನೈಸ್ ಡ್ರೆಸ್, ನೈಸ್ ಲುಕ್ ಅಂತೆಲ್ಲಾ ಲೈಕ್ ಮಾಡುತ್ತಿರುತ್ತಾರೆ. ಕೆಲವರು ಬೈದು ಕೆಟ್ಟದಾಗಿ ಕಾಮೆಂಟ್ ಮಾಡಿದರೂ ಕೂಡ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ರೀಲ್ಸ್ ಜೊತೆಗೆ ನಿವೇದಿತಾ ರಿಯಾಲಿಟಿ ಶೋನಲ್ಲೂ ಆಗಾಗ ಕಾಣಿಸಿಕೊಳ್ಳುತ್ತಾರೆ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ನಿವೇದಿತಾ ಸ್ಪರ್ಧಿಸುತ್ತಿದ್ದು ಆಗಾಗ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಇದರೊಂದಿಗೆ ನಿವೇದಿತಾ ಗೌಡಾಗೆ ಸಿನಿಮಾ ಆಫರ್‌ಗಳು ಬರುತ್ತಿದ್ದು ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ.
ವಿಚ್ಚೇದನದ ಬಳಿಕ ದೂರವಾಗಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಪರಸ್ಪರ ನಾಯಕ ನಾಯಕಿ ಪಾತ್ರದಲ್ಲಿ 'ಮುದ್ದು ರಾಕ್ಷಸಿ' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ತೆರೆಗೆ ಬರಲು ಸಿದ್ಧಗೊಳ್ಳುತ್ತಿದೆ. ಈ ಸಿನಿಮಾ ಮೂಲಕನಾದರೂ ಚಂದನ್ ಹಾಗೂ ನಿವೇದಿತಾ ಮತ್ತೆ ಒಂದಾಗ್ತಾರಾ ಅನ್ನೋ ಕುತೂಹಲದಲ್ಲಿ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಯಾಕೆಂದರೆ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಗಾಯಕ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡು ಪ್ರೀತಿಸಿ ಮದುವೆಯಾದರು. ಆದರೆ ಮದುವೆ ಮಾಡಿಕೊಂಡ ಬಳಿಕ ಈ ಜೋಡಿ ಹೆಚ್ಚು ವರ್ಷ ಸಂಸಾರ ಮಾಡಲಿಲ್ಲ. ಕೆಲವೇ ವರ್ಷದಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಂಡಿತು. ನಂತರ ನಿವೇದಿತಾ ಫುಲ್ ಜಾಲಿ ಜಾಲಿಯಾಗಿ ಸುತ್ತಾಡಿಕೊಂಡು, ಖುಷಿ ಖುಷಿಯಾಗಿದ್ದಾರೆ. ಈ ಜೋಡಿ ಬೇರೆಯಾಗಲು ಸರಿಯಾದ ಕಾರಣ ಈಗಲೂ ಯಾರಿಗೂ ಗೊತ್ತಿಲ್ಲ. ಹೀಗಾಗಿ ಮತ್ತೆ ಒಂದಾಗ್ತಾರಾ ಅನ್ನೋ ನಿರೀಕ್ಷೆಯಲ್ಲಿ ಜನ ಇದ್ದಾರೆ.
ಆದರೆ ವೈಷ್ಣವಿ ಗೌಡ ಅವರ ವಿಡಿಯೋಗಳು ಕೆಲವರಿಗೆ ಇಷ್ಟ ಆದರೆ ಕೆಲವರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಆದರೆ ಇದಕ್ಕೆ ಡೋಂಟ್ ಕೇರ್ ಅನ್ನೋ ಗೊಂಬೆ ತಾನಾಯ್ತು ತನ್ನ ವಿಡಿಯೋ ಆಯ್ತು ಅಂತ ಇದ್ದಾರೆ. ಒಟ್ಟಿನಲ್ಲಿ ಚಂದನ್ ಶೆಟ್ಟಿ ಎರಡನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿದ್ದರೆ ಇತ್ತ ನಿವೇದಿತಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಫುಲ್ ಎಂಜಾಯ್ ಮಾಡ್ತಾ ಕಾಲ ಕಳೆಯುತ್ತಿದ್ದಾರೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications