ಮುಂಗಾರು ಮಳೆ ಸಿನಿಮಾದ ಹುಚ್ಚು ಹಿಡಿಸಿದ ಹಾಡುಗಳು!
ಕನ್ನಡ ಸಿನಿಮಾ ರಂಗದಲ್ಲಿ 'ಮುಂಗಾರು ಮಳೆ' ಮಾಡಿದ ಸಾಧನೆ ಯಾರು ಎಂದೆಂದಿಗೂ ಮರೆಯಲು ಆಗಲ್ಲ. ಅದರಲ್ಲೂ 90s & 80s ಕಿಡ್‌ಗಳ ಪಾಲಿಗೆ ಈ ಸಿನಿಮಾ ಎವರ್‌ಗ್ರೀನ್ ಅನ್ನಬಹುದು. ಒಂದೆರಡು ತಲೆಮಾರು ಈ ಸಿನಿಮಾಗೆ ಮಾರು ಹೋಗಿದ್ದ ದಿನಗಳು ಆಗಿನ ಕಾಲಘಟ್ಟದಲ್ಲಿ ಇದ್ದವು. ಅದರಲ್ಲೂ 'ಮುಂಗಾರು ಮಳೆ' ಸಿನಿಮಾದ ಹಾಡುಗಳು ಇಲ್ಲದೆ ಮದುವೆ, ಗೃಹಪ್ರವೇಶ ಸೇರಿದಂತೆ ಹಬ್ಬ & ಹರಿದಿನಗಳೇ ನಡೆಯುತ್ತಿರಲಿಲ್ಲ!
ಅದು 2006ರ ಡಿಸೆಂಬರ್, ಆಗ ಒಂದು ಸಿನಿಮಾ ಕನ್ನಡ ಸಿನಿ ರಂಗದಲ್ಲಿ ಮಿಂಚಿನ ಸಂಚಲನ ಸೃಷ್ಟಿ ಮಾಡಿತ್ತು. ಹೊಸಬರ ಸಿನ್ಮಾ ಜಗತ್ತಿನಾದ್ಯಂತ ಕನ್ನಡ ಬಾವುಟವನ್ನು ರಾರಾಜಿಸುವಂತೆ ಮಾಡಿತ್ತು. ಆ ಸಿನಿಮಾ ಹೆಸರೇ ಮುಂಗಾರು ಮಳೆ, ಹೀಗೆ ಮುಂಗಾರು ಮಳೆ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗು ದೂದ್ ಪೇಡ ದಿಗಂತ್ ಹತ್ತಿರವಾದರು. ಈ ಸಿನಿಮಾದಲ್ಲಿ ಭರ್ಜರಿ 7 ಹಾಡು ಇದ್ದವು. ಈ ಪೈಕಿ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದರೆ 'ಅನಿಸುತಿದೆ ಯಾಕೋ ಇಂದು' ಹಾಡು ಮಾತ್ರ ಹೊಸ ಇತಿಹಾಸ ಸೃಷ್ಟಿಸಿತ್ತು.

ಹೃದಯಕ್ಕೆ ಹತ್ತಿರವಾದ ಹಾಡು ಇದು!
'ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು' ಅಂತ 2006-07ರ ಕಾಲ ಘಟ್ಟದಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು, ಹಿರಿಯರ ತನಕ ಹಾಡು ಗುನುಗುತ್ತಿದ್ದರು. ಇದಕ್ಕೆಲ್ಲಾ ನಮ್ಮ ಜಯಂತ್ ಕಾಯ್ಕಿಣಿ ಅವರೇ ಮೂಲ ಪುರುಷರಾದರು. ಹಾಗೇ ಮನೋ ಮೂರ್ತಿ ಮ್ಯಾಜಿಕ್ ಮಾಡಿದ್ರು. ಅಂದಹಾಗೆ ಜಯಂತ್ ಕಾಯ್ಕಿಣಿ ಅವರು ಸಾಹಿತ್ಯ ಬರೆದು ಮನೋ ಮೂರ್ತಿ ಮ್ಯೂಸಿಕ್ ಕೊಟ್ಟ ಈ ಹಾಡು ಎಲ್ಲೆಲ್ಲೂ ಅಬ್ಬರಿಸಿತ್ತು. ಹಾಗೇ ಇಂದಿಗೂ ಈ ಹಾಡು ಪ್ಲೇ ಆದರೆ, ಆಗಿನ ಕಾಲದಲ್ಲಿ ಹುಟ್ಟದಿರುವ ಮಕ್ಕಳು ಕೂಡ ಖುಷ್ ಆಗ್ತಾರೆ!
ಸೋಷಿಯಲ್ ಮೀಡಿಯಾದಲ್ಲೂ ಹವಾ!
'ಅನಿಸುತಿದೆ ಯಾಕೋ ಇಂದು' ಹಾಡು ಇಂದಿಗೂ ಸೋಷಿಯಲ್ ಮೀಡಿಯಾದಲ್ಲೂ ಭಾರಿ ಹವಾ ಇಟ್ಟಿದೆ. ಯಾಕಂದ್ರೆ ಎಂದೆಂದಿಗೂ ಹೊಂದುವಂತೆ, ಮುಂಗಾರು ಮಳೆ ಸಿನಿಮಾದ ಹಾಡುಗಳನ್ನ ರಚನೆ ಮಾಡಲಾಗಿದೆ. ಹಾಗೇ ಸಿನಿಮಾದಲ್ಲಿ ಇರುವ ಬರೋಬ್ಬರಿ 7 ಸಾಂಗ್ಸ್ ಪೈಕಿ ಅಷ್ಟೂ ಹಾಡುಗಳು ಕನ್ನಡ ಸಿನಿಮಾ ಪ್ರಿಯರ ಎದೆಯಲ್ಲಿ ಆಳವಾಗಿ ಕೂತಿವೆ. ಹೀಗೆ ಕನ್ನಡಿಗರ ಎದೆಯಲ್ಲಿ 'ಮುಂಗಾರು ಮಳೆ' ಅಚ್ಚಳಿಯದೆ ಉಳಿದಿದೆ. ಹಾಗಾದರೆ, ಹಾಡಿನ ಲಿರಿಕ್ಸ್ ಪೂರ್ತಿಯಾಗಿ ನೀವು ಓದಿದ್ದೀರಾ?
'ಅನಿಸುತಿದೆ ಯಾಕೋ ಇಂದು' ಹಾಡಿನ ಲಿರಿಕ್ಸ್
ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗಿ ಬಂದವಳೆಂದು
ಆಹಾ ಎಂತ ಮಧುರ ಯಾತನೇ!
ಕೊಲ್ಲು ಹುಡುಗಿ ಒಮ್ಮೆ ನನ್ನ
ಹಾಗೆ ಸುಮ್ಮನೆ...
ಅನಿಸುತಿದೆ ಯಾಕೋ ಇಂದು...
ಸುರಿಯುವ ಸೋನೆಯು
ಸೂಸಿದೆ ನಿನ್ನದೆ ಪರಿಮಳ
ಇನ್ಯಾರ ಕನಸಲೂ
ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೊ ಒಮ್ಮೆ...
ಹಾಗೆ ಸುಮ್ಮನೆ...
ಅನಿಸುತಿದೆ ಯಾಕೋ ಇಂದು...
ತುಟಿಗಳ ಹೂವಲಿ
ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ
ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ?
ನನ್ನ ಹೆಸರ ಕೂಗೆ ಒಮ್ಮೆ...
ಹಾಗೆ ಸುಮ್ಮನೆ...
ಅನಿಸುತಿದೆ ಯಾಕೋ ಇಂದು...
ನೀನೇನೆ ನನ್ನವಳೆಂದು...
ಮಾಯದ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ ಎಂತ ಮಧುರ ಯಾತನೇ!
ಕೊಲ್ಲು ಹುಡುಗಿ ಒಮ್ಮೆ ನನ್ನ...
ಹಾಗೆ ಸುಮ್ಮನೆ...
ಅನಿಸುತಿದೆ ಯಾಕೋ ಇಂದು
ಒಟ್ನಲ್ಲಿ ಕನ್ನಡಿಗರ ಪಾಲಿಗೆ ಮುಂಗಾರು ಮಳೆ ಸಿನ್ಮಾ ಎಂದೆಂದು ಎವರ್ ಗ್ರೀನ್ ಎನ್ನಬಹುದು. ಯಾಕಂದ್ರೆ ಈ ಸಿನಿಮಾ ಜೊತೆಗೆ ಕನ್ನಡಿಗರ ಭಾವನೆಗಳು ಕೂಡ ಬೆರೆತು ಹೊಗಿವೆ. ಇದೇ ಕಾರಣಕ್ಕೆ ಈ ಹಾಡು ಇಂದಿಗೂ ಟಾಪ್ ಅಲ್ಲೇ ಇದ್ದು ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಈ ಮೂಲಕ ಹೊಸ ತಲೆಮಾರಿನ ಯುವಕ & ಯುವತಿಯರನ್ನ ಕೂಡ ಸೆಳೆಯುತ್ತಿದೆ.












Click it and Unblock the Notifications