Mokshitha Pai: ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಮೋಕ್ಷಿತಾ ಪೈ

ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ 16ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಟಾಪ್ 4ನೇ ಸ್ಪರ್ಧಿಯಾಗಿ ಮೋಕ್ಷಿತಾ ಹೊರಬಂದಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ 120 ದಿನಗಳ ಜರ್ನಿ ಕಂಪ್ಲೀಟ್ ಮಾಡಿದ ಮೋಕ್ಷಿತಾ ಪೈ ಕ್ರಶ್ ಅಂತಲೇ ಹೆಸರಾಗಿದ್ದಾರೆ. ಹಾಗಾದರೆ ಮೋಕ್ಷಿತಾ ಮುಂದಿನ ನಡೆ ಏನು? ಸೀರಿಯಲ್ ಮಾಡ್ತಾರಾ? ಸಿನಿಮಾ ಮಾಡ್ತಾರಾ? ಮದುವೆ ಆಗ್ತಾರಾ? ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎನ್ನುವ ಬಗ್ಗೆ ಸ್ವತ: ಅವರೇ ವಿವರಣೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಟಾಪ್ 4 ಸ್ಪರ್ಧಿ ಮೋಕ್ಷಿತಾ ಪೈ ಈಗಾಗಲೇ ಸಿನಿಮಾ ಮಾಡಿದ್ದಾರೆ. ಆದರೆ ಒಂದು ಸಿನಿಮಾ ಇನ್ನೂ ಕೂಡ ಪೂರ್ಣಗೊಂಡಿಲ್ಲ. ಆ ಸಿನಿಮಾ ಬಹುತೇಕ ಪೂರ್ಣಗೊಂಡಿದ್ದು 2%ರಷ್ಟು ಮಾತ್ರ ಕೆಲಸ ಬಾಕಿ ಇದೆ. ಇದೀಗ ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಲಿದೆ ಎಂದು ಮೋಕ್ಷಿತಾ ಹೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದ್ದಾರೆ. ಹಾಗಾದರೆ ಸಿನಿಮಾದಲ್ಲಿ ಮೋಕ್ಷಿತಾ ಪಾತ್ರವೇನು? ಯಾವ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ?

Mokshitha pai gave good news to her fans

ಮೋಕ್ಷಿತಾ ಪೈ ಸಿನಿಮಾ ತೆರೆಗೆ ಸಿದ್ಧ

ಮೋಕ್ಷಿತಾ ಅವರೇ ಹೇಳುವಂತೆ ಅವರದ್ದು ಒಂದು ಸಿನಿಮಾ ಕಂಪ್ಲೀಟ್ ಆಗಿದೆ. ಇನ್ನೊಂದು ಸಾಂಗ್ ಬಾಕಿ ಇದೆಯಂತೆ. ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಮೋಕ್ಷಿತಾ ಕಪ್ಪು ಹುಡುಗಿಯಾಗಿರುತ್ತಾರಂತೆ. ಹೀಗೆ ಹೇಳುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ ಮೋಕ್ಷಿತಾ.

ಹೌದು... ಪಾರು ಧಾರವಾಹಿಯ ಮೂಲಕ ಮನೆಮಾತಾದ ಮೋಕ್ಷಿತಾ ಮೊದಲ ಸಿನಿಮಾ ನಿರ್ಣಯಾ. ಈ ಸಿನಿಮಾ ಮೂಲಕ ಮೋಕ್ಷಿತಾ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ಇದರೊಂದಿಗೆ ಮೋಕ್ಷಿತಾಗೆ ಈಗ ಸಿಕ್ಕಾಪಟ್ಟೆ ಸಿನಿಮಾ ಆಫರ್‌ಗಳು ಬಂದಿವೆಯಂತೆ. ಹೀಗಾಗಿ ಚಿತ್ರ ಕತೆ ಕೇಳುವ ಮೂಲಕ ಸಿನಿಮಾ ಆಯ್ಕೆ ಮಾಡಿಕೊಂಡು ಅಭಿನಯಿಸುವುದಾಗಿ ಮೋಕ್ಷಿತಾ ಹೇಳಿದ್ದಾರೆ. ಇದನ್ನು ಬಿಟ್ಟರೆ ನನಗೆ ಸಿನಿಮಾನೇ ಮಾಡ್ಬೇಕು ಸೀರಿಯಲ್ಲೇ ಮಾಡ್ಬೇಕು ಅಂತೇನು ಇಲ್ಲ. ಯಾವುದು ಬೆಸ್ಟ್ ಅನಿಸುತ್ತೆ ನಾನು ಅದನ್ನು ಮಾಡುತ್ತೇನೆ ಎಂದಿದ್ದಾರೆ.

ಮೋಕ್ಷಿತಾ ಬಿಗ್‌ಬಾಸ್‌ ಜರ್ನಿ

ಮೋಕ್ಷಿತಾ ಅವರು ಬಿಗ್‌ಬಾಸ್‌ ಮನೆಗೆ 16ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಬಿಗ್‌ಬಾಸ್‌ ಮನೆಯ 120 ದಿನಗಳ ಜರ್ನಿಯಲ್ಲಿ ಮೋಕ್ಷಿತಾ ಕ್ಯಾಪ್ಟನ್ ಆಗಲು ಆಗಲಿಲ್ಲ. ಅಲ್ಲದೆ ಮೋಕ್ಷಿತಾ ಜೈಲಿಗೂ ಕೂಡ ಹೋಗಿಲ್ಲ. ತುಂಬಾ ಸೈಲೆಂಟ್ ಹುಡುಗಿ ಅಂತಲೇ ಬಿಗ್‌ಬಾಸ್‌ ಮನೆಯಲ್ಲಿ ಹೆಸರು ಪಡೆದಿದ್ದಾರೆ.

ಆಟದಲ್ಲಿ ಕೂಡ ಮೋಕ್ಷಿತಾ ಸೈ ಎನಿಸಿಕೊಂಡಿದ್ದಾರೆ. ಬಿಗ್‌ಬಾಸ್‌ ಆರಂಭ ಹಾಗೂ ಕೊನೆಯ ವಾರಗಳಲ್ಲಿ ಮೋಕ್ಷಿತಾ ದಿ ಬೆಸ್ಟ್ ಪಫಾರ್ಮರ್ ಆಗಿದ್ದರು. ಆರಂಭದಿಂದಲೂ ಮೋಕ್ಷಿತಾ ಆಟವನ್ನು ಮುಂದುವರೆಸಿಕೊಂಡು ಬಂದಿದ್ದರೆ ವಿನ್ನರ್ ಆಗಿರಬಹುದಿತ್ತು. ಅದೇನೇ ಆಗಲಿ ಈಗ ಬಿಗ್‌ಬಾಸ್‌ ಆಟ ಮುಗಿಸಿ ಹೊರ ಬಂದಿರುವ ಮೋಕ್ಷಿತಾ ಸಿನಿಮಾ ಮಾಡಲು ಶುರು ಮಾಡಿದ್ದಾರೆ. ಜೊತೆಗೆ ಎಲ್ಲರ ಆಶೀರ್ವಾದ ಇರಲಿ ಎನ್ನುವ ಮನವಿ ಕೂಡ ಮಾಡಿದ್ದಾರೆ. ಬಿಗ್‌ಬಾಸ್‌ ಮನೆ ಮೋಕ್ಷಿತಾ ಸಿನಿಮಾಗಳಲ್ಲಿ ಹೇಗೆ ಕಾಣಿಸಲಿದ್ದಾರೆ ಎನ್ನುವ ಕುತೂಹಲ ಸದ್ಯ ಅಭಿಮಾನಿಗಳಿಗೆ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+