Mokshita Pai Marriage: ಶೀಘ್ರದಲ್ಲೇ ಮೋಕ್ಷಿತಾ ಪೈ ಮದುವೆ- ಡೇಟ್ ರಿವೀಲ್ ಮಾಡಿದ ತಂದೆ
ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಪೈ ತಮ್ಮ ಫ್ಯಾನ್ಸ್‌ಗೆ ಲೇಟಾಗಿ ಯುಗಾದಿ ಹಬ್ಬದ ಶುಭ ಕೋರಿ ಲೆಟೆಸ್ಟ್ ಆಗಿ ಅಡುಗೆ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಕೊಂಚ ಮಟ್ಟಿಗೆ ಅಡುಗೆ ಮಾಡುವುದನ್ನ ಕಲಿತುಕೊಂಡಿದ್ದ ಮೋಕ್ಷಿತಾ ಇದೀಗ ಮನೆಯಲ್ಲೂ ಹೊಸ ಹೊಸ ಬಗೆಯ ಅಡುಗೆ ಮಾಡುವುದನ್ನು ಕಲಿಯುತ್ತಿದ್ದಾರೆ. ಹಾಗಾದರೆ ಯುಗಾದಿ ಹಬ್ಬಕ್ಕೆ ಮೋಕ್ಷಿತಾ ತಯಾರಿಸಿದ ಅಡುಗೆ ಯಾವುದು? ಹೇಗೆ ತಯಾರಿಸಿದ್ರು? ಇದಕ್ಕೆ ಫ್ಯಾನ್ಸ್ ಕಮೆಂಟ್ ಹೇಗಿತ್ತು? ಮೋಕ್ಷಿತಾ ಮದುವೆ ಬಗ್ಗೆ ತಂದೆ ಹೇಳಿದ್ದೇನು? ಎಲ್ಲವನ್ನೂ ತಿಳಿಯೋಣ.
ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಮೋಕ್ಷಿತಾ ಸ್ನೇಹಿತರ ಮದುವ ಹಾಗೂ ಪ್ರವಾಸ ಅಂತ ಬ್ಯೂಸಿ ಆಗಿದ್ದಾರೆ. ಆಗಾಗ ಪ್ರವಾಸಕ್ಕೆ ತೆರಳಿದ ಪೋಟೋಗಳನ್ನು ಮೋಕ್ಷಿತಾ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ವಿಶೇಷ ದಿನಗಳಲ್ಲೂ ಅವರು ಫೋಟೋಗಳನ್ನು ಹಂಚಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಇದೀಗ ಮೋಕ್ಷಿತಾ ರುಚಿಯಾದ ಖಾದ್ಯವನ್ನು ತಯಾರಿಸಿದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಶೇರ್ ಮಾಡಿದ್ದಾರೆ.

ಹೌದು ಯುಗಾದಿ ಹಬ್ಬದ ಪ್ರಯುಕ್ತ ಮೊದಲ ಬಾರಿಗೆ ಹೋಳಿಗೆಯನ್ನು ಮೋಕ್ಷಿತಾ ತಯಾರಿಸಿದ್ದಾರೆ. ಸ್ನೇಹಿತೆ ಭಾರ್ಗವಿಯ ಸಹಾಯದಿಂದ ಮೋಕ್ಷಿತಾ ಹೋಳಿಗೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋಕ್ಕೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.
ಮೈದಾ ಹಿಟ್ಟಿನ ಹೋಳಿಗೆ ಮೋಕ್ಷಿತಾಗೆ ಇಷ್ಟವಾಗುವುದಿಲ್ಲವಂತೆ. ಹೀಗಾಗಿ ಗೋಧಿ ಹಿಟ್ಟಿನ ಹೋಳಿಗೆಯನ್ನು ಮೋಕ್ಷಿತಾ ತಯಾರಿಸಿದ್ದಾರೆ. ಮಜಾ ಏನಂದರೆ ಇಲ್ಲಿ ಎಲ್ಲವೂ ಮಾಡುವುದು ಭಾರ್ಗವಿನೇ. ಹೌದು ಮೋಕ್ಷಿತಾ ಅಡುಗೆ ಮನೆಗೆ ಹೋಗುವ ಹೊತ್ತಿಗೆ ಹೋಳಿಗೆಗೆ ಬೇಕಾಗುವ ಕಣಕ ಹೂರ್ಣ ತಯಾರಾಗಿರುತ್ತದೆ. ಭಾರ್ಗವಿ ಕೊನೆಯಲ್ಲಿ ತೆಂಗಿನ ಕಾಯಿಯನ್ನು ರುಬ್ಬಿಕೊಳ್ಳುತ್ತಿರುತ್ತಾರೆ. ಆಗ ಮೋಕ್ಷಿತಾ ಅಡುಗೆ ಮನೆಗೆ ಹೋಗಿ ಹೋಳಿಗೆ ಮಾಡಲು ಶುರು ಮಾಡುತ್ತಾರೆ. ಈ ವೇಳೆ ಮೋಕ್ಷಿತಾ ಅವರು ಹೋಳಿಗೆಗೆ ಏನೆಲ್ಲಾ ರೆಡಿ ಮಾಡಿಕೊಳ್ಳಲಾಗಿದೆ ಅನ್ನೋದನ್ನು ಭಾರ್ಗವಿಗೆ ವಿವರಿಸಲು ಹೇಳುತ್ತಾರೆ. ಈ ವಿಡಿಯೋದಲ್ಲಿ ಆಗಾಗ ಮೋಕ್ಷಿತಾ ಕಾಮನ್ ಡೈಲಾಗ್ 'ಅರ್ಥ ಆಯ್ತಾ' ಬರುತ್ತಲೇ ಇರುತ್ತೆ.

ವಿಡಿಯೋದಲ್ಲಿ ಮೋಕ್ಷಿತಾ ಬಿಗ್‌ಬಾಸ್ ಮನೆಗೆ ಹೋಗಿ ಚಪಾತಿ ಮಾಡೋದನ್ನು ಕಲಿತೆ, ಹೊರಗಡೆ ಬಂದ ಮೇಲೆ ಹೋಳಿಗೆ ಮಾಡುವುದನ್ನು ಕಲಿಯುತ್ತಿದ್ದೇನೆ ಎಂದಿದ್ದಾರೆ. ಕೊನೆಗೆ ಮೋಕ್ಷಿತಾ ಅವರೇ ಹೂರ್ಣದ ಉಂಡೆ ಮಾಡಿ, ಕಣಕದಲ್ಲಿ ಇಟ್ಟು ತಟ್ಟಿ ಬೇಯಿಸಿ ಅದ್ಭುತವಾಗಿ ಹೋಳಿಗೆ ತಯಾರಿಸಿದ್ದಾರೆ. ನನ್ನ ಲೈಫ್ ಅಲ್ಲೇ ನಾನು ಮೊದಲ ಬಾರಿಗೆ ಹೋಳಿಗೆ ಮಾಡಿದಿನಿ ಅಂತ ಹೇಳಿಕೊಂಡಿದ್ದಾರೆ.
ಶೀಘ್ರದಲ್ಲೇ ಮೋಕ್ಷಿತಾ ಪೈ ಮದುವೆ
ಇದೇ ವೇಳೆ ಮೋಕ್ಷಿತಾ ತಂದೆ ಮೋಕ್ಷಿತಾ ಮದುವೆ ಬಗ್ಗೆ ಮಾತನಾಡಿದ್ದಾರೆ. ಮೋಕ್ಷಿತಾ ಹೋಳಿಗೆ ಮಾಡುವುದನ್ನು ನೋಡಿ ಖುಷಿಯಾಗಿ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಮದುವೆ ಮಾಡೋಣ ಅಂದುಕೊಂಡಿದ್ವಿ. ಇನ್ನೂ ಮೂರು ತಿಂಗಳು ಅಡುಗೆ ಮಾಡೋದನ್ನು ಕಲಿಲಿ. ನಂತರ ಮಾಡಿದರಾಯ್ತು ಅಂದಿದ್ದಾರೆ ಮೋಕ್ಷಿತಾ ತಂದೆ. ಅಲ್ಲಿಗೆ ಮೋಕ್ಷಿತಾ ಇದೇ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಅನ್ನೋದಕ್ಕೆ ತಂದೆ ಸೂಚನೆ ಕೊಟ್ಟಂತಾಗಿದೆ.
ಇನ್ನೋ ಮೋಕ್ಷಿತಾ ಮನೆಯಲ್ಲಿ ಅಚ್ಚುಕಟ್ಟಾಗಿ ಅಡುಗೆ ಮಾಡುವ ವಿಡಿಯೋ ವೀಕ್ಷಿಸಿ ಫ್ಯಾನ್ಸ್ ಕೂಡ ಮೋಕ್ಷಿತಾ ಮದುವೆ ಆಗ್ತಾಯಿರಬೇಕು ಹೀಗಾಗಿ ಇದೆಲ್ಲಾ ಕಲಿಯುತ್ತಿದ್ದಾರೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಇದೇ ವರ್ಷದಲ್ಲಿ ಮೋಕ್ಷಿತಾ ಮದುವೆ ನಡೆಯಲಿದೆ ಅನ್ನೋದಕ್ಕೆ ಅವರ ತಂದೆ ಸೂಚನೆಯನ್ನು ಕೊಟ್ಟಿದ್ದು ಹುಡುಗ ಯಾರು ಎನ್ನುವ ಕುತೂಹಲ ಮೂಡಿದೆ.












Click it and Unblock the Notifications