ಮೇಘನಾ ರಾಜ್ 2ನೇ ಮದುವೆ, ವಿಜಯ್ ರಾಘವೇಂದ್ರ ಬಗ್ಗೆ... Meghana Raj
ಮೇಘನಾ ರಾಜ್ 2ನೇ ಮದುವೆ ಆಗುತ್ತಾರೆ.. ಮೇಘನಾ ರಾಜ್ 2ನೇ ಮದುವೆ ಯಾವಾಗ.. ಮೇಘನಾ ರಾಜ್ 2ನೇ ಮದುವೆ ಬಗ್ಗೆ ನಿರ್ಧಾರ ಏನು... ಹೀಗೆ ನಟಿ ಮೇಘನಾ ರಾಜ್ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಅದರಲ್ಲೂ ಈ ಬಗ್ಗೆ ಕೆಲವರು ಬೇಕು ಅಂತಲೇ ಸುಳ್ಳು ಸುದ್ದಿ ಹಬ್ಬಿಸಿ, ಸೋಷಿಯಲ್ ಮೀಡಿಯಾಗಳಲ್ಲಿ ಕಿಚ್ಚು ಹೊತ್ತಿಸಿದ್ದರು. ಹೀಗಿದ್ದಾಗಲೇ, ಮೇಘನಾ ರಾಜ್ 2ನೇ ಮದುವೆ, ವಿಜಯ್ ರಾಘವೇಂದ್ರ ಬಗ್ಗೆ...
ಮೇಘನಾ ರಾಜ್ ಅವರು ನಟಿಯಾಗಿ ಮಾತ್ರವಲ್ಲ ಸಂಕಷ್ಟ ಸಮಯದಲ್ಲಿ ಜೀವನ ಎದುರಿಸುವ ಬಗ್ಗೆ ಕೂಡ ಸಮಾಜಕ್ಕೆ ಮಾದರಿ ಆಗಿದ್ದಾರೆ. ಎಲ್ಲಾ ಕಷ್ಟಗಳನ್ನು ಎದುರಿಸಿ, ನಟಿ ಮೇಘನಾ ರಾಜ್ ಅವರು ಮಗನ ಆರೈಕೆ ಮಾಡುತ್ತಿದ್ದಾರೆ. ಅದರಲ್ಲೂ ಪ್ರೀತಿಸಿ ಮದುವೆ ಆಗಿದ್ದ ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವು ಕಾಡುತ್ತಿದ್ದರೂ, ಅದನ್ನ ಎದುರಿಸಿ ನಿಂತಿದ್ದಾರೆ. ಇಂತಹ ಸಮಯದಲ್ಲೇ ಮೇಘನಾ ರಾಜ್ 2ನೇ ಮದುವೆಯ ಬಗ್ಗೆ...

ಮೇಘನಾ ರಾಜ್ 2ನೇ ಮದುವೆಯ ಬಗ್ಗೆ...
ನಮ್ಮ ಸಮಾಜದಲ್ಲಿ ಕೆಟ್ಟ ಮನಸ್ಥಿತಿಯ ಮನುಷ್ಯರು ತುಂಬಾ ಇದ್ದಾರೆ ಅನ್ನೋ ಆರೋಪ ಇದೆ. ಅದರಲ್ಲೂ ಹೆಣ್ಣುಮಕ್ಕಳ ವಿಚಾರದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಕೆಟ್ಟ ಮನಸ್ಥಿತಿಯ ಹುಳಗಳು ಹೆಚ್ಚಾಗಿವೆ ಇವೆ. ಅದೇ ರೀತಿ ನಟಿ ಮೇಘನಾ ರಾಜ್ ಅವರ 2ನೇ ಮದುವೆಯ ಬಗ್ಗೆ ಕೂಡ ಸುಳ್ಳು ಸುದ್ದಿ ಹಬ್ಬಿತ್ತು. ಆದರೆ ಇದೀಗ ನಟಿ ಮೇಘನಾ ರಾಜ್ ಅವರೇ ತಮ್ಮ 2ನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ವಿಜಯ್ ರಾಘವೇಂದ್ರ ಬಗ್ಗೆ ಕೂಡ...
ನಟಿ ಮೇಘನಾ ರಾಜ್ ಅವರು 1990ರ ಮೇ 3 ರಂದು ಬೆಂಗಳೂರು ನಗರದಲ್ಲಿ ಹುಟ್ಟಿದರು. ನಟಿ ಮೇಘನಾ ರಾಜ್ ಅವರು 2018ರಲ್ಲಿ ಚಿರಂಜೀವಿ ಸರ್ಜಾರ ಜೊತೆಗೆ ಸಪ್ತಪದಿ ತುಳಿದು, ಮದುವೆ ಕೂಡ ಆಗಿದ್ದರು. ಆದರೆ ವಿಧಿ ಕೈವಾಡ ಚಿರಂಜೀವಿ ಸರ್ಜಾ ಅವರು 2020ರ ಜೂನ್ 7 ರಂದು ಅಕಾಲಿಕ ಮರಣ ಹೊಂದಿದರು. ಹೀಗೆ ಕನ್ನಡದ ನಟಿ ಮೇಘನಾರ ಬಾಳಲ್ಲಿ ಘೋರ ದುರಂತ ಒಂದು ನಡೆದು ಹೋಗಿತ್ತು. 1984ರ ಅಕ್ಟೋಬರ್ 17ರ ಬುಧವಾರ ಜನಿಸಿದ್ದ ನಟ ಚಿರಂಜೀವಿ ಸರ್ಜಾ ಅವರು 2020ರ ಜೂನ್ 7 ರಂದು 35ನೇ ವಯಸ್ಸಿಗೆ ಅಕಾಲಿಕ ಮರಣ ಹೊಂದಿದ್ದರು. ಈ ನಡುವೆ ಖುದ್ದಾಗಿ ಖಾಸಗಿ ಸಂದರ್ಶನ ಒಂದರಲ್ಲಿ ನಟಿ ಮೇಘನಾ ರಾಜ್ ಅವರೇ ತಮ್ಮ 2ನೇ ಮದುವೆ ವಿಚಾರ ಪ್ರಸ್ತಾಪದ ಬಗ್ಗೆ ಮಾತನಾಡಿದ್ದಾರೆ...
2ನೇ ಮದುವೆ ವಿಚಾರ ಪ್ರಸ್ತಾಪದ ಬಗ್ಗೆ...
ನಟಿ ಮೇಘನಾ ರಾಜ್ ತಮ್ಮ 2ನೇ ಮದುವೆಯ ಬಗ್ಗೆ ಈಗ ಮಹತ್ವದ ಹೇಳಿಕೆಯನ್ನ ನೀಡಿದ್ದು, '2ನೇ ಮದುವೆ ಬಗ್ಗೆ ಜನ ಏನು ಆಲೋಚಿಸುತ್ತಾರೆ ಎಂದು ನಾನು ಯೋಚಿಸಲ್ಲ. ನಾನು ಏನು ಮಾಡಬೇಕು ಎಂದುಕೊಳ್ಳುತ್ತೇನೆ ಅದು ಆಗುತ್ತಿಲ್ಲ. ನಾನು ಕೂಡ ಸಾಮಾನ್ಯ ವ್ಯಕ್ತಿ' ಎನ್ನುವ ಜೊತೆಗೆ 'ಯಾವುದಾದರೂ ವ್ಯಕ್ತಿ ನನ್ನ ಜೀವನದಲ್ಲಿ ಬರುತ್ತಾರೋ ಗೊತ್ತಿಲ್ಲ. ಚಿರುಗೆ ಈ ವ್ಯಕ್ತಿ ಸರಿ ಅಂತಾ ಅನಿಸಿದ್ರೆ ಆಗ ಚಿರು ಅದನ್ನ ಮಾಡಿಸುತ್ತಾರೆ. ಯಾವ ವ್ಯಕ್ತಿಯೂ ಸರಿ ಇಲ್ಲ ಅಂತಾ ಅನಿಸಿದರೆ ಚಿರು ಕಳಿಸೋದೆ ಇಲ್ಲ. ಆಗ ನಾನು ಹೀಗೇ ಇದ್ದು ಬಿಡುತ್ತೇನೆ' ಎನ್ನುವ ಮೂಲಕ ನಟಿ ಮೇಘನಾ ರಾಜ್ ತಮ್ಮ 2ನೇ ಮದುವೆಯ ಬಗ್ಗೆ ಮಾತನಾಡಿದ್ದೂ ಅಲ್ಲದೆ, ಚಿರು ಅಂದ್ರೆ ಚಿರಂಜೀವಿ ಅವರನ್ನ ಈಗಲೂ ಎಷ್ಟು ಪ್ರೀತಿ ಮಾಡುತ್ತಾರೆ ಎಂಬುದನ್ನ ತಿಳಿಸಿದ್ದಾರೆ. ಹಾಗೂ ವಿಜಯ್ ರಾಘವೇಂದ್ರ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಕೆಲವರ ಬಗ್ಗೆ ಕೋಪ ಹೊರ ಹಾಕಿದ್ದಾರೆ.












Click it and Unblock the Notifications