ಹೃದಯಾಘಾತದಿಂದ ಖ್ಯಾತ ನಟ ಮನೋಜ್ ಕೆ. ಭಾರತಿ ಸಾವು

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಭಾರತಿರಾಜ ಅವರ ಪುತ್ರ ಮನೋಜ್ ಭಾರತಿರಾಜ (ಮನೋಜ್ ಕೆ. ಭಾರತಿ) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಮುದ್ರರಾಮ್, ಅಲ್ಲಿ ಅರ್ಜುನ, ಬೇಬಿ, ವಿರುಮನ್ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದ ಅವರು 48ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದು ಸಿನಿಮಾ ರಂಗಕ್ಕೆ ದೊಡ್ಡ ಆಘಾತವಾಗಿದೆ.

ಮನೋಜ್ ಭಾರತಿರಾಜ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ನಟನೆಗೆ ಪಾದಾರ್ಪಣೆ ಮಾಡುವ ಮೊದಲು ಫೈನಲ್ ಕಟ್ ಆಫ್ ಡೈರೆಕ್ಟರ್ (2016) ನಂತಹ ಚಿತ್ರಗಳಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ತನ್ನ ತಂದೆಗೆ ಸಹಾಯ ಮಾಡಿದ್ದರು.

manoj k bharathi passes away heart attack 48

ಮನೋಜ್ ಭಾರತಿರಾಜ ಬಗ್ಗೆ ಮಾಹಿತಿ

ತಮಿಳು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದ ಮನೋಜ್ ಭಾರತಿರಾಜ, 1999 ರಲ್ಲಿ ತಾಜ್ ಮಹಲ್ ಸಿನಿಮಾದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಸಿನಿಮಾರಂಗದಲ್ಲಿ ಕೆಲಸ ಮಾಡಲು ಆರಂಭಿಸುವ ಮುನ್ನ ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ರಂಗಭೂಮಿ ಕಲೆಗಳನ್ನು ಅಭ್ಯಾಸ ಮಾಡಿದರು. ತಮ್ಮ ತಂದೆಯ ಸಿನಿಮಾನಗಳಿಗೆ ಸಹಾಯ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಸಿನಿಮಾ ರಂಗದಲ್ಲಿ ಕೆಲಸ ಆರಂಭಿಸಿದರು. ಮಣಿರ್‍ನಂ ಅವರ ಜೊತೆ ಬಾಂಬೆ ಸಿನಿಮಾದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಎಸ್. ಶಂಕರ್ ಅವರ ಭಾರಿ ಬಜೆಟ್ ಸಿನಿಮಾ ಎಂಥಿರನ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.

ಮನೋಜ್ ಕೆ. ಭಾರತಿ ತಮ್ಮ ದೀರ್ಘಕಾಲದ ಗೆಳತಿ ನಂದನ ಅವರನ್ನು ಮದುವೆಯಾಗಿದ್ದರು. ಎಬಿಸಿಡಿ & ಸಕ್ಸಸ್, ಸಾಧುರಿಯನ್ ನಂತಹ ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ನಂದನ ಮನೋಜ್ ಅವರೊಂದಿಗೆ ಜೋಡಿಯಾಗಿದ್ದರು. 2006ರ ಡಿಸೆಂಬರ್ ತಿಂಗಳಿನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಆರ್ತಿಕಾ ಮತ್ತು ಮತಿವದಾನಿ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಮನೋಜ್ ಕೆ. ಭಾರತಿ ಅವರು ಖ್ಯಾತ ಚಲನಚಿತ್ರ ನಿರ್ಮಾಪಕ ಭಾರತಿರಾಜ ಮತ್ತು ಚಂದ್ರಲೀಲಾ ದಂಪತಿಗಳ ಮಗ. ಸೆಪ್ಟೆಂಬರ್ 11, 1976 ರಂದು ತಮಿಳುನಾಡಿನ ಕಂಬಂನಲ್ಲಿ ಜನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+