Kajol viral video: ನಟಿ ಕಾಜೋಲ್‌ ಖಾಸಗಿ ಅಂಗ ಮುಟ್ಟಿದ ವ್ಯಕ್ತಿ, ವಿಡಿಯೋ ವೈರಲ್

ಬಾಲಿವುಡ್‌ನ ಖ್ಯಾತ ನಟಿ ಕಾಜೋಲ್‌ ಅವರು ಸಂಭ್ರಮದಿಂದ ವಿಜಯದಶಮಿ ಆಚರಿಸಲು ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಸಭ್ಯ ಘಟನೆಯೊಂದು ನಡೆದಿದೆ. ದುರ್ಗಾ ಪೂಜೆ ವೇಳೆ ಸೇರಿದ್ದ ಜನರ ಎದುರೇ ನಟಿ ಕಾಜೋಲ್‌ ಅವರ ಖಾಸಗಿ ಭಾಗವನ್ನು ವ್ಯಕ್ತಿಯೊಬ್ಬ ಮುಟ್ಟಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದ್ದು, ವಿಡಿಯೋದಲ್ಲಿ ಕಾಜೋಲ್‌ ತಕ್ಷಣವೇ ದುರ್ಗೆಯ ಅವತಾರ ತಾಳಿದ್ದಾರೆ.

ದಸರಾ ಪ್ರಯುಕ್ತ ದುರ್ಗಾ ಪೂಜೆಯಲ್ಲಿ ಭಾಗವಹಿಸಿದ್ದ ಕಾಜೋಲ್ ಅವರ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ವ್ಯಕ್ತಿ ನಟಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಕಂಡುಬಂದಿದ್ದು, ಇದಕ್ಕೆ ಕಾಜೋಲ್ ತಕ್ಷಣ ಕೋಪಗೊಂಡಿದ್ದಾರೆ. ವಿಜಯದಶಮಿಯಂದು, ಕಾಜೋಲ್ ಬಿಳಿ ಸೀರೆ ಮತ್ತು ಹಣೆಯ ಮೇಲೆ ಬಿಂದಿ ಧರಿಸಿ ಅದ್ಭುತವಾಗಿ ಕಾಣುತ್ತಿದ್ದರು. ದುರ್ಗಾ ಪೂಜಾ ಪೆಂಡಾಲ್‌ನಿಂದ ಕಾಜೋಲ್ ಹೊರಬರುವಾಗ ಅಲ್ಲಿದ್ದ ವ್ಯಕ್ತಿಯೊಬ್ಬ ನಟಿಯ ಖಾಸಗಿ ಭಾಗವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ವರದಿಗಳ ಪ್ರಕಾರ ಆತ ಭದ್ರತಾ ಸಿಬ್ಬಂದಿ ಎನ್ನಲಾಗಿದ್ದು, ಭಾರಿ ಜನ ಇದ್ದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಟಿಯನ್ನು ತಡೆಯುವಾಗ ಆಕೆಯ ಖಾಸಗಿ ಅಂಗದ ಸ್ಪರ್ಶವಾಗಿದೆ. ಇದರಿಂದ ಕಾಜೋಲ್ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ.

Man Inappropriately Touches Actress Kajol Private Part During Durga Puja

ವೈರಲ್‌ ವಿಡಿಯೋದಲ್ಲೇನಿದೆ?

ಕಾಜೋಲ್ ಅವರ ಈ ವೈರಲ್ ವೀಡಿಯೊದಲ್ಲಿ ನಟಿ ಮೆಟ್ಟಿಲುಗಳನ್ನು ಇಳಿಯುತ್ತಿರುವುದು ಕಂಡುಬರುತ್ತದೆ. ಒಬ್ಬ ವ್ಯಕ್ತಿ ಮೇಲಕ್ಕೆ ಹತ್ತಿ ಆಕೆಯ ಎದೆಯನ್ನು ಹಿಡಿದುಕೊಳ್ಳುತ್ತಿರುವುದು ಕಂಡುಬರುತ್ತದೆ. ಕಾಜೋಲ್ ಆಘಾತಕ್ಕೊಳಗಾಗಿ ಕೋಪದಿಂದ ಆ ವ್ಯಕ್ತಿಯ ಕಡೆಗೆ ನೋಡುತ್ತಾರೆ. ನಟಿಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರ ಪ್ರಕಾರ ಆ ವ್ಯಕ್ತಿ ಭದ್ರತಾ ಸಿಬ್ಬಂದಿಯಲ್ಲ. ಆದರೆ, ಕಾಜೋಲ್ ಅವರನ್ನು ಉದ್ದೇಶಪೂರ್ವಕವಾಗಿ ಅನುಚಿತವಾಗಿ ಮುಟ್ಟಿದ್ದಾನೆ ಎಂದು ಹೇಳುತ್ತಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ಕಾಜೋಲ್‌ ಅವರು ಕೋಪಗೊಂಡಂತೆ ಕಂಡರೂ ನಂತರ ಅದೇ ವ್ಯಕ್ತಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದರಲ್ಲಿನ ಸತ್ಯಾಸತ್ಯತೆ ಏನೆಂದು ಜನ ಕೇಳುತ್ತಿದ್ದಾರೆ. ಆ ವ್ಯಕ್ತಿ ಆಕಸ್ಮಿಕವಾಗಿ ಕಾಜೋಲ್ ಎದೆಯನ್ನು ಮುಟ್ಟಿದ ತಕ್ಷಣ, ಕಾಜೋಲ್ ಆಶ್ಚರ್ಯದಿಂದ ಕಣ್ಣು ಕೆಂಪಾಗಿಸಿ, ಹಿಂದೆ ತಿರುಗಿ ಆ ವ್ಯಕ್ತಿಗೆ ಏನು ಎಂದು ಕೇಳಿದ್ದಾರೆ. ಆದರೆ ಆ ವ್ಯಕ್ತಿಯನ್ನು ನೋಡಿದ ತಕ್ಷಣ ಕಾಜೋಲ್ ಕೋಪ ಕಡಿಮೆಯಾಯಿತು. ಹೀಗಾಗಿ ಆ ವ್ಯಕ್ತಿ ಕಾಜೋಲ್‌ಗೆ ಪರಿಚಯ ಇರುವವರು ಎಂದು ಹೇಳಲಾಗುತ್ತಿದೆ.

ಆದರೆ ಕಾಜೋಲ್ ಆಕಸ್ಮಿಕವಾಗಿ ಅವಳನ್ನು ತಪ್ಪು ರೀತಿಯಲ್ಲಿ ಮುಟ್ಟಿದಾಗ ಅಸಮಾಧಾನಗೊಂಡಿದ್ದಂತೂ ನಿಜ ಎನ್ನಲಾಗಿದೆ. ಅವನು ಸೆಕ್ಯುರಿಟಿ ಅಲ್ಲ, ಇದು ಒಬ್ಬ ಕಾಮುಕ ಎಂದು ಆ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಆ ಸ್ಪರ್ಶದಿಂದ ಕಾಜೋಲ್ ಆಘಾತಕ್ಕೊಳಗಾಗಿದ್ದಾರೆ. ಅವನು ನಿಜವಾಗಿಯೂ ನಟಿಯನ್ನು ಅನುಚಿತವಾಗಿ ಮುಟ್ಟಿದನು. ದಯವಿಟ್ಟು ಈ ವ್ಯಕ್ತಿಯನ್ನು ಪ್ರಶ್ನಿಸಿ ಅಜಯ್ ದೇವಗನ್. ಇದು ಕ್ಷಮಿಸಲಾಗದು. ಇದು ಎಲ್ಲ ರೀತಿಯಲ್ಲೂ ತಪ್ಪು. ಮಹಿಳೆಯರ ವಿರುದ್ಧ ಈ ರೀತಿಯ ವರ್ತನೆಗೆ ನಾವು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+