‘ಕೆಜಿಎಫ್’ ಬಳಿಕ ಗಡ್ಡ ಕತ್ತರಿಸಿದ ಯಶ್: ಟಾಕ್ಸಿಕ್ ಲುಕ್ ಇದೇನಾ?
ಕನ್ನಡಿಗರ ಮನಸ್ಸು ಗೆದ್ದು 'ಕೆಜಿಎಫ್' ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ, ದೊಡ್ಡ ಹೆಸರನ್ನ ತಂದುಕೊಟ್ಟ ನಟ ಯಶ್ ಅವರು ಇದೀಗ ಹಾಲಿವುಡ್ ಲೆವೆಲ್ ಸಿನಿಮಾ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ 'ಟಾಕ್ಸಿಕ್' ಬಗ್ಗೆ ಸಖತ್ ಕುತೂಹಲ ಕಾಡುತ್ತಿದೆ. ಇಷ್ಟೆಲ್ಲಾ ಕೌತುಕ & ಕುತೂಹಲದ ನಡುವೆ ಇಂದು ಯಶ್ ಅವರು ಗಣಿನಾಡು ಬಳ್ಳಾರಿಗೆ ಬಂದಿದ್ದರು. ಇದೇ ವೇಳೆ 'ಟಾಕ್ಸಿಕ್' ಲುಕ್ ರಿವೀಲ್ ಆಗಿದೆ ಅಂತಾ ಹೇಳ್ತಿದ್ದಾರೆ ಅಭಿಮಾನಿಗಳು.
ಅಷ್ಟಕ್ಕೂ, ಗಣಿನಾಡು ಬಳ್ಳಾರಿ ಜಿಲ್ಲೆಯ ಅಮೃತೇಶ್ವರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಬಂದು ದೇವರಿಗೆ ನಮಿಸಿದರು ರಾಕಿಂಗ್ ಸ್ಟಾರ್ ಯಶ್. ಇನ್ನು ರಾಕಿಭಾಯ್ ಯಶ್ ಅವರು ಕುರ್ತಾ-ಪೈಜಾಮಾ ಸೆಟ್‌ನಲ್ಲಿ, ನೀಲಿ ಬಣ್ಣದ ಬಂಡಾನಾ & ಸನ್‌ಗ್ಲಾಸ್ ಹಾಕಿಕೊಂಡು ಕ್ಲಾಸ್ ಆಗಿ ಭರ್ಜರಿ ಎಂಟ್ರಿ ಕೊಟ್ಟರು. ಹೀಗೆ ತಮ್ಮ ನೆಚ್ಚಿನ ನಟನ ನಯಾ ಲುಕ್ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು.

ಹಾಗೆಯೇ ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಟಾಕ್ಸಿಕ್ ಸಿನಿಮಾ ಲುಕ್ ಇದು ಅಂತಾ ಮಾತನಾಡುತ್ತಿದ್ದಾರೆ ಯಶ್ ಅವರ ಫ್ಯಾನ್ಸ್. ಹಾಗಾದರೆ ಈ ಮಾತು ನಿಜಾನಾ? ಯಶ್ ಅವರ ಮುಂದಿನ ಸಿನಿಮಾದ ಲುಕ್ ಇದೀಗ ಬಳ್ಳಾರಿಯಲ್ಲೇ ರಿವೀಲ್ ಆಯ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಮುಂದೆ ಓದಿ.
ಕನ್ನಡಿಗ ಯಶ್ ಹವಾ ಜೋರು
ನಟ ಯಶ್ ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಹೀಗಾಗಿ ಯಶ್ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹೀಗಿದ್ರೂ ಯಶ್ ತಾವು ಕನ್ನಡಿಗ ಅನ್ನೋದನ್ನು ಇಂದಿಗೂ ಮರೆತಿಲ್ಲ. ಹಾಗೇ, ಹೊರಗಡೆ ಹೋದಾಗ ಕೂಡ ಕನ್ನಡದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಈ ನಟ, ದೈವಭಕ್ತಿ ಮೆರೆದು ಉತ್ತರ ಕರ್ನಾಟಕದ ತಮ್ಮ ಅಭಿಮಾನಿಗಳ ಜೊತೆಗೆ ಕಾಲ ಕಳೆದಿದ್ದಾರೆ. ಇದೇ ಸಮಯದಲ್ಲಿ ನಟ ಯಶ್ ಅವರು ಈಗ ಕಾಣಿಸಿಕೊಂಡ ಲುಕ್ ಅವರ ಮುಂದಿನ ಸಿನಿಮಾದ್ದು, ಅಂದ್ರೆ 'ಟಾಕ್ಸಿಕ್' ಸಿನಿಮಾ ಲುಕ್ ಅಂತಿದ್ದಾರೆ ಅಭಿಮಾನಿಗಳು. ಅಲ್ಲದೆ ಈ ಫೋಟೋಗಳು ವೈರಲ್ ಆಗುತ್ತಿವೆ.
@TheNameIsYash Boss Stylish Look From Today's Event !!#SreeAmrutheswaraTemple 💥#YashBoss #ToxicTheMovie pic.twitter.com/F6OJ4qD5ca
— Yash Creators (@YashCreators) February 29, 2024
ಕನ್ನಡ ಸಿನಿಮಾಗಳ ಅಬ್ಬರ ಜೋರು
ಯಶ್ ತಮ್ಮ 'ಕೆಜಿಎಫ್' ಸಿನಿಮಾ ಸರಣಿ ಮೂಲಕ ಕ್ರಿಯೇಟ್ ಮಾಡಿರುವ ಸೌಂಡ್ ಜಗತ್ತಿನಲ್ಲಿ ಮೂಲೆ ಮೂಲೆಗೂ ಹಬ್ಬಿತ್ತು. ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಸೀಮಿತ ಅಂತಾ, ಡೈಲಾಗ್ ಹೊಡೆಯುತ್ತಿದ್ದವರ ಬಾಯಿ ಮುಚ್ಚಿತ್ತು. ನಂತರ ಮತ್ತೆ ಯಶ್ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದು, 'ಟಾಕ್ಸಿಕ್' ಫಸ್ಟ್ ಲುಕ್ ಟೀಸರ್ ಈಗಾಗಲೇ ಜಗತ್ತಿನ ಮೂಲೆ ಮೂಲೆಗೆ ಆವರಿಸುತ್ತಿದೆ. ಇದೇ ಸಮಯದಲ್ಲಿ ಬಳ್ಳಾರಿಯಲ್ಲಿ ಕಾಣಿಸಿಕೊಂಡ ನಟ ಯಶ್ ಅವರೀಗ, ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ. ಅಲ್ಲದೆ ಇದೇನಾ ಯಶ್‌ರ 'ಟಾಕ್ಸಿಕ್' ಸಿನಿಮಾ ಲುಕ್ ಅಂತಾ ದೊಡ್ಡ ಕುತೂಹಲ ಮೂಡಿದೆ.

ರಾಕಿಂಗ್ ಸ್ಟಾರ್ ಡಬಲ್ ಆಕ್ಟಿಂಗ್?
ಯಶ್ 19ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆದ ನಂತರ, ಕೋಟ್ಯಂತರ ಫ್ಯಾನ್ಸ್ ಅದಕ್ಕೆ ಫಿದಾ ಆಗಿದ್ದಾರೆ. ಹಾಗೇ ಉತ್ತರ ಭಾರತದ ವಿವಿಧ ಪ್ರದೇಶದಲ್ಲಿ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಫಸ್ಟ್ ಲುಕ್ ಲಾಂಚ್ ಹಿನ್ನೆಲೆ ಸೆಲೆಬ್ರೇಷನ್ ನಡೆದಿತ್ತು ಮಾತ್ರವಲ್ಲ ಜಗತ್ತಿನಾದ್ಯಂತ ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಟೈಟಲ್ ಟೀಸರ್ ನೋಡಿ ಸಾಕಷ್ಟು ಜನರು ಯುಟ್ಯೂಬ್ ರಿವೀವ್ ಮಾಡಿದ್ದಾರೆ. ಹೀಗಿದ್ದಾಗಲೆ ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ದ್ವಿಪಾತ್ರ ಮಾಡ್ತಿದ್ದಾರೆ ಅನ್ನೋ ಗಾಳಿ ಸುದ್ದಿ ಹಬ್ಬಿದ್ದು, ಇದಕ್ಕೆಲ್ಲಾ ಮುಂದಿನ ವರ್ಷ ಸ್ಪಷ್ಟನೆ ಸಿಗಲಿದೆ.
ಒಟ್ನಲ್ಲಿ ಯಶ್ ಅವರು ಏನೇ ಮಾಡಿದ್ರೂ ದೊಡ್ಡ ಮಟ್ಟದಲ್ಲಿ ಮಾಡ್ತಾರೆ ಅನ್ನೋದು ಫ್ಯಾನ್ಸ್ ಮಾತು. ಈಗ ಕೂಡ ಅಷ್ಟೇ 'ಟಾಕ್ಸಿಕ್' ಮೂಲಕ ಬಹುದೊಡ್ಡ ಯೋಜನೆಯನ್ನೇ ಯಶ್ ಅವರು ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಮಾತುಗಳಿಗೂ ಮುಂದಿನ ವರ್ಷವೇ ಉತ್ತರ ಕೂಡ ಸಿಗಲಿದ್ದು, ಹೀಗಾಗಿ ಅಲ್ಲಿಯವರೆಗೂ ಕಾದು ನೋಡಬೇಕಿದೆ.












Click it and Unblock the Notifications