ʼನಿಮ್ಮಂತ ಅಭಿಮಾನಿಗಳಿಂದಲೇ ದರ್ಶನ್‌ಗೆ ಕೆಟ್ಟ ಹೆಸರು..ʼ ಪೊಲೀಸರಿಂದ ಫುಲ್ ಕ್ಲಾಸ್
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಅವರನ್ನು ಸದ್ಯ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಂದು ನಟ ದರ್ಶನ್ ಅಭಿನಯಿಸಿರುವ ʼಕರಿಯಾʼ ಸಿನಿಮಾ ರೀರಿಲೀಸ್ ಆಗಿದ್ದು, ಈ ವೇಳೆ ಅಭಿಮಾನಿಗಳು ಮಿತಿಮೀರಿ ವರ್ತಿಸುತ್ತಿದ್ದರು. ಈ ವೇಳೆ ಪೊಲೀಸರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಹೌದು ಇಂದು ರಾಜ್ಯಾದ್ಯಂತ ಕರಿಯ ಸಿನಿಮಾ ರೀರಿಲೀಸ್ ಆಗಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್‌ನಲ್ಲೂ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ವೇಳೆ ಕೆಲ ಅಭಿಮಾನಿಗಳು ಅವಾಚ್ಯವಾಗಿ ನಿಂದಿಸುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ವೇಳೆ ಅವರಿಗೆಲ್ಲ ಪೊಲೀಸರು ಚಳಿಬಿಡಿಸಿದ್ದಾರೆ.

ʼನಿಮ್ಮಂತ ಅಭಿಮಾನಿಗಳಿಂದಲೇ ದರ್ಶನ್‌ಗೆ ಕೆಟ್ಟ ಹೆಸರು ಬರುತ್ತಿದೆ. ಮುಚ್ಕೊಂಡು ಸೈಲೆಂಟ್ ಆಗಿರಬೇಕುʼ ಎಂದು ಖಡಕ್ ಆಗಿ ವಾರ್ನ್ ಮಾಡಿದ್ದಾರೆ. ಸಿನಿಮಾ ರೀರಿಲೀಸ್ ಹಿನ್ನೆಲೆ ಥಿಯೇಟರ್‌ಗಳ ಬಳಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಫ್ಯಾನ್ಸ್ ಹೆಚ್ಚಾಗಿ ಜಯಾಮಿಸಿದ್ದರಿಂದ ಅವರನ್ನು ಕಂಟ್ರೋಲ್ ಮಾಡುವಲ್ಲಿ ಪೊಲೀಸರಿಗೆ ತಲೆನೋವಾಯಿತು.
ಕೆಲವರು ಬಾಸ್..ಬಾಸ್...ಡಿಬಾಸ್ ಎಂದು ಅಭಿಮಾನ ಮೆರೆದರೆ, ಇನ್ನು ಕೆಲವರಿಗೆ ಕೌಂಟರ್ ನೀಡುವ ಹಾಗೂ ಟಾರ್ಗೆಟ್ ಮಾಡುವ ರೀತಿಯಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ಅವರಿಗೆಲ್ಲ ಪೊಲೀಸರು ಖಡಕ್ಕಾಗಿ ವಾರ್ನಿಂಗ್ ಕೊಟ್ಟಿದ್ದಲ್ಲದೆ, ಸಿನಿಮಾ ನೋಡಲು ಬಂದಿದ್ದೀರಿ, ನೋಡಿ ಖುಷಿ ಪಡಬೇಕು. ಅದನ್ನು ಬಿಟ್ಟು ಪುಂಡರಂತೆ ವರ್ತಿಸಿದರೆ, ಇದರಿಂದ ನಿಮ್ಮ ದರ್ಶನ್‌ಗೆ ಕೆಟ್ಟ ಹೆಸರು ಬರಲು ನೀವೇ ಕಾರಣ ಆಗುತ್ತೀರ ಎಂದು ಬುದ್ಧಿಮಾತನ್ನೂ ಹೇಳಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಟ್ಟ ಫ್ಯಾನ್ಸ್, ಬಳಿಕ ಸುಮ್ಮನಾಗಿದ್ದಾರೆ.
ಹೊಸ ಚಿತ್ರಕ್ಕೂ ಇಷ್ಟು ಜನ ಸೆರಲ್ವಲ್ಲೂ, ಕರಿಯನ ಡಿ ಫ್ಯಾನ್ಸ್ 💥🔥
— 𝐁𝐡𝐮𝐦𝐢𝐏𝐮𝐭𝐫𝐚𝐚🌾 (@BhumiPutraa_24) August 30, 2024
BOSS OF SANDALWOOD 👑@dasadarshan 👑 | #DBoss | #BossOfSandalwood #DBoss𓃰 | #Kariya | #KariyaReRelease | #Darshan pic.twitter.com/rCIROHC40D
ಮತ್ತೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಅಭಿಮಾನಿಗಳು ಕೆಟ್ಟ ಕೆಟ್ಟ ಪೋಸ್ಟ್ ಮಾಡುವುದು ಮುಂದುವರೆದಿದೆ. ಕೆಲ ಅಂದಾಭಿಮಾನಿಗಳು ಅವಹೇಳನಕಾರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಮಾಧ್ಯಮಗಳನ್ನು ಟ್ರೋಲ್ ಮಾಡಲಾಗ್ತಿದೆ. ಇದು ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಗಲಾಟೆಗೆ ಕಾರಣವಾಗಿದೆ.

ನಟ ದರ್ಶನ್ ಅಧಿಕೃತ ಅಭಿಮಾನಿ ಸಂಘ, ಡಿ ಕಂಪನಿಯಿಂದ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಲಾಗಿದೆ. "ಡಿ ಬಾಸ್ ಸೆಲೆಬ್ರಿಟಿಗಳಲ್ಲಿ ವಿನಂತಿ. ಸಮಸ್ತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳಲ್ಲಿ ವಿನಂತಿ. ನಮ್ಮ ಪ್ರೀತಿಯ ಡಿ ಬಾಸ್ ರವರು ಆರೋಪ ಮುಕ್ತರಾಗಿ ಬರುವವರೆಗೂ ಯಾವುದೇ ಮಾಧ್ಯಮ, ಹಾಗೂ ಬೇರೆ ನಟರ ಅಭಿಮಾನಿಗಳಿಗೆ ನೀವು ರಿಯಾಕ್ಟ್ ಆಗಬೇಡಿ. ನಮ್ಮಿಂದ ಬಾಸ್ ಗೆ ಯಾವುದೇ ತೊಂದರೆಯಾಗದಿರಲಿ" ಎಂದು ಪೋಸ್ಟ್ ಕೂಡ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್ ರೌಡಿಗಳನ್ನು ದರ್ಶನ್ ಭೇಟಿ ಮಾಡಿದ್ದು ಹಾಗೂ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದಕ್ಕೆ 3 ಎಫ್‌ಐಆರ್ ದಾಖಲಾಗಿದೆ. ಇದೇ ಕಾರಣಕ್ಕೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದು ಅಂದು ಏನಾಯಿತು ಎನ್ನುವುದನ್ನು ದರ್ಶನ್ ವಿವರಿಸಿದ್ದಾರೆ. ಇನ್ನು ದರ್ಶನ್ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 9ರವರೆಗೆ ವಿಸ್ತರಣೆ ಆಗಿದೆ.












Click it and Unblock the Notifications