Get Updates
Get notified of breaking news, exclusive insights, and must-see stories!

Puneeth Rajkumar: 4ನೇ ಪುಣ್ಯಸ್ಮರಣೆ: ರಾಜಕಾರಣಿಗಳಿಗೆ ಅಪ್ಪು ಅಚ್ಚುಮೆಚ್ಚು, ಪುನೀತ್ ಸ್ಮರಿಸಿದ ಗಣ್ಯರು

ಬೆಂಗಳೂರು, ಅಕ್ಟೋಬರ್ 29: ಇಂದು ನಟ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ನಾಲ್ಕು ವರ್ಷ ಕಳೆದಿವೆ. ಅವರ ನಟನೆ, ಸಮಾಜಸೇವೆ, ಸರಳ ವ್ಯಕ್ತಿತ್ವ ಇಂದಿಗೂ ಜೀವಂತವಾಗಿದೆ. ನಟನಾಗಿ, ದೊಡ್ಮನೆ ಮಗನಾಗಿ, ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಹೇಗೆ ಬದುಬೇಕೆಂದು ಕಲಿಸಿಕೊಟ್ಟ ನಟ ಪುನೀತ್ ಅವರನ್ನು ಇಂದಿಗೂ ಎಲ್ಲ ವರ್ಗದ ಜನರು ಸ್ಮರಿಸುತ್ತಾರೆ. ಸಹ ಕಲಾವಿದರಿಗೆ, ಚಿಕ್ಕಮಕ್ಕಳಿಗೆ, ವಯೋವೃದ್ಧರಿಗೂ ಅಪ್ಪು ಎಂದರೆ ಅಚ್ಚು ಮೆಚ್ಚು. ಅನೇಕ ರಾಜಕೀಯ ವ್ಯಕ್ತಿಗಳಿಗೂ ಪುನೀತ್ ವಿಶೇಷ.

2021ರ ಅಕ್ಟೊಬರ್ 29ರಂದು ಪುನೀತ್ ಹೃದಯಾಘಾತದಿಂದ ನಿಧನರಾದರು. ಬಳಿಕವೇ ಅವರು ಮಾಡಿದ ಸಮಾಜ ಸೇವೆ, ಬಡವರಿಗೆ ತೋರಿದ ಸಹಾಯಹಸ್ತ, ಕಷ್ಟದಲ್ಲಿರುವವರಿಗೆ ಸ್ಪಂದಿರುವ ರೀತಿ ಜಗತ್ತಿಗೆ ಬಹಿರಂಗವಾಯಿತು. ಅಲ್ಲಿಯವರೆಗೂ ಅವರ ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿದ್ದರು. ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ಅಪ್ಪು ಸಾವಿನ ಬಳಿಕ ಅವರು ದೇವತಾ ಮನುಷ್ಯರಾದರು. ಅವರ ಆದರ್ಶ, ಸಮಾಜ, ಬಡವರ ಬಗೆಗಿನ ಅವರ ಕಾಳಜಿ ಇಂದಿಗೂ ಅವರ ಹೆಸರಿನಲ್ಲಿ ಅಭಿಮಾನಿಗಳು ಮುಂದುವರಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ, ತೆಲುಗು, ಹಿಂದಿ, ತೆಮಿಳು ಚಿತ್ರರಂಗದಲ್ಲೂ ಅಪ್ಪು ಕಂಡರೆ ಇಷ್ಟ. ಅಜಾತಶತ್ರುವಾಗಿ ಬದುಕಿದ್ದ ವ್ಯಕ್ತಿ ಅಪ್ಪು ಅವರನ್ನು ಫ್ಯಾನ್ಸ್ ಇಂದಿಗೂ ಸ್ಮರಿಸುತ್ತಿದ್ದಾರೆ. ಇಂದು ರಾಜಕಾರಣಿಗಳು ಸಹ ಅಪ್ಪು ನೆನೆದಿದ್ದಾರೆ. ಗಣ್ಯರು ಎಕ್ಸ್‌ ಪೋಸ್ಟ್ ಮಾಡಿದ್ದಾರೆ.

Karnataka Pays Tribute to Puneeth Rajkumar on 4th Death Anniversary Include Politicians

ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಕರ್ನಾಟಕ ರತ್ನ, ಡಾ. ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ಈ ದಿನದಂದು ಅವರನ್ನು ಗೌರವದಿಂದ ಸ್ಮರಿಸುತ್ತೇನೆ. ನಟನಾಗಿ, ಗಾಯಕನಾಗಿ, ನಿರ್ಮಾಪಕರಾಗಿ ಅದಕ್ಕಿಂತ ಮುಖ್ಯವಾಗಿ ಸಹೃದಯಿ ಮನುಷ್ಯರಾಗಿ ಅವರು ಎಲ್ಲರಿಗೂ ಮಾದರಿ. ಅವರ ಸರಳತೆ, ಶಿಸ್ತಿನ ಬದುಕು, ಸೇವಾ ಮನೋಭಾವ-ಇವೆಲ್ಲವೂ ಅಚ್ಚಳಿಯದ ನೆನಪಾಗಿ ಉಳಿದಿವೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಎಕ್ಸ್ ಪೋಸ್ಟ್ ಮೂಲಕ ಸ್ಮರಿಸಿದ್ದಾರೆ.

ಪುನೀತ್ ನಿಧನ ವೇಳೆ ಮೂರು ದಿನ ಅಂದಿನ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದರು. ದೊಡ್ಮನೆ ಜೊತೆಗೆ ನಿಂತು ಆಗು ಹೋಗುಗಳನ್ನು ನೋಡಿಕೊಂಡಿದ್ದರು. ಅವರು ಸಹ ಅಪ್ಪು ನೆನದಿದ್ದಾರೆ. 'ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ "ಕರ್ನಾಟಕ ರತ್ನ", ನಮ್ಮೆಲ್ಲರ ಪ್ರೀತಿಯ "ಅಪ್ಪು" ದಿ. ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳು' ಎಂದಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್ ಅವರು, ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಪ್ರತಿಯೊಬ್ಬರ ಮನೆ ಮಗನಾಗಿ ಜನ ಮನ್ನಣೆ ಗಳಿಸಿದ್ದ ಅಪ್ಪು ನಮ್ಮನ್ನೆಲ್ಲ ಅಗಲಿ ಇಂದಿಗೆ 4 ವರ್ಷ, ಕರ್ನಾಟಕ ರತ್ನ ಅಪ್ಪು ಅವರ ಪುಣ್ಯಸ್ಮರಣೆಯಂದು ಅವರ ಕಲಾ ಸೇವೆ ಹಾಗೂ ಜನಸೇವೆಯನ್ನು ಸ್ಮರಿಸೋಣ ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಅಜರಾಮರ ರಾಜರತ್ನ: ಡಿಕೆಶಿ

ಅಜರಾಮರ ರಾಜರತ್ನ.. ಕರುನಾಡು ಕಂಡ ಅಪ್ರತಿಮ ಕಲಾವಿದ, ನಮ್ಮೆಲ್ಲರ ಪ್ರೀತಿಯ 'ಪವರ್ ಸ್ಟಾರ್' ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆಯಂದು ಗೌರವ ಪೂರ್ವಕ ನಮನಗಳು. ಅಪ್ಪು ನಗು, ಸರಳತೆ, ಮತ್ತು ಸಮಾಜಮುಖಿ ಕಾರ್ಯಗಳು ನಮಗೆ ಸದಾ ಪ್ರೇರಣೆ. ಯುವರತ್ನ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪುಗಳು ಮಾತ್ರ ಯಾವಾಗಲೂ ಅಜರಾಮರ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಮರಿಸಿದ್ದಾರೆ.

ಅವರ ನಟನೆಗೆ ಅನೇಕ ಪ್ರಶಸ್ತಿಗಳು ಬಂದಿವೆ. ಸೈಮಾ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು, ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನ ಸಹ ಅಪ್ಪು ಅಗಲಿಕೆ ನಂತರ ಸಿಕ್ಕಿದೆ. ಅವರ ಬಹುಮುಖ ಪ್ರತಿಭೆಯಾಗಿದ್ದ ನಟ ಅಪ್ಪು ಅವರ ಅಗಲಿಕೆಗೆ ಕರ್ನಾಟಕದ ಜನತೆ ಇಂದಿಗೂ ಕಂಬನಿ ಮಿಡಿಯುತ್ತಿದೆ.

ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಫ್ಯಾನ್ಸ್ ಅಸೋಸಿಯೇಷನ್, ಅಭಿಮಾನಿಗಳು, ಸಂಘ ಸಂಸ್ಥೆಗಳು ಸಮಾಜ ಸೇವೆ ಮುಂದುವರಿಸಿವೆ. ಇಂದು ಅವರ ಸ್ಮರಣಾರ್ಥ ಅನೇಕ ಕಡೆಗಳಲ್ಲಿ ಅನ್ನದಾನ, ರಕ್ತದಾನ ಕಾರ್ಯಕ್ರಮ ಜರುಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+