kapil sharma atlee controversy: ಹಿಂದಿ ಶೋನಲ್ಲಿ ದಕ್ಷಿಣ ಭಾರತದ ಫೇಮಸ್ ನಿರ್ದೇಶಕನಿಗೆ ಅವಮಾನ, ಕನ್ನಡಿಗರ ವಿರೋಧ
ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಿಗೆ ಹಿಂದಿ ಶೋವೊಂದರಲ್ಲಿ ನಿರ್ದೇಶಕರ ಬಣ್ಣವನ್ನು ಉಲ್ಲೇಖಿಸಿ ಮಾಡಿರುವ ಕಾಮಿಡಿ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ದಕ್ಷಿಣ ಭಾರತೀಯರ ಬಗ್ಗೆ ಕೆಲವು ಉತ್ತರ ಭಾರತೀಯರು ಮಾಡುವ ಕಾಮಿಡಿಗಳು ವಿವಾದದ ಸ್ವೂರಪವನ್ನು ಪಡೆದುಕೊಂಡಿದ್ದು ಇದೆ. ಇದೀಗ ದಕ್ಷಿಣ ಭಾರತದ ಹಾಗೂ ದೇಶದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅಟ್ಲಿ (Atlee Kumar) ಬಗ್ಗೆ ಕಪಿಲ್ ಶರ್ಮಾ ( kapil sharma) ಅವರು ಆಡಿರುವ ಮಾತುಗಳು ತೀವ್ರ ಚರ್ಚೆಗೆ ಕಾರಣವಾಗಿದೆ. ಕಪ್ಪು ಬಣ್ಣವನ್ನು ಪರೋಕ್ಷವಾಗಿ ಹೇಳಿರುವ ಕಪಿಲ್ ಶರ್ಮಾ ಮಾತಿಗೆ ಕನ್ನಡಿಗರೂ ಸಹ ತಮ್ಮ ಅಸಮಾಧಾನವನ್ನು ದಾಖಲಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ದೇಶದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದೆ. ಈ ಶೋ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದು. ಇದಕ್ಕೆ ಕನ್ನಡದ ನಟರಾದ ಕಿಚ್ಚ ಸುದೀಪ್ ಹಾಗೂ ಗಣೇಶ್ ಸೇರಿದಂತೆ ಹಲವು ನಟ ಹಾಗೂ ನಟಿಯರು ಸಹ ಈ ಹಿಂದೆಯೂ ಭಾಗವಹಿಸಿದ್ದಾರೆ. ಸಿನಿಮಾ ಪ್ರಮೋಷನ್‌ಗಳಿಗೆ ಹಾಗೂ ಚಿಟ್‌ಚಾಟ್‌ಗೆ ಈ ಕಾರ್ಯಕ್ರಮಕ್ಕೆ ಬರುವುದು ಇದೆ. ಇನ್ನು ಈ ಕಾರ್ಯಕ್ರಮಕ್ಕೆ ಈಚೆಗೆ ಅಟ್ಲಿ ಅವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಅಟ್ಲಿ ಅವರೊಂದಿಗೆ ಮಾತನಾಡುವಾಗ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋದ ನಿರೂಪಕ ಕಪಿಲ್ ಶರ್ಮಾ ಅವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಭಾರೀ ವಿರೋಧ ವ್ಯಕ್ತವಾಗಿದೆ. ಶೋ ನಲ್ಲಿ ಮಾತನಾಡುವಾಗ ನಿಮಗೆ ಮೊದಲ ಅವಕಾಶ ಹೇಗೆ ಸಿಕ್ಕಿತು ಎಂದು ಕೇಳುವಾಗ ಕಪಿಲ್ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಟ್ಲಿ ನಗುತ್ತಲ್ಲೇ ಉತ್ತರಿಸಿದ್ದಾರೆ.
ನೀವು ಯಾವುದಾದರೂ ಪ್ರಮುಖ ನಟರನ್ನೂ ನೋಡುವುದಕ್ಕೆ ಹೋದಾಗ ಅಟ್ಲಿ ಅವರು ಎಲ್ಲಿ ಅಂತ ಕೇಳಿದ್ದು ಇದೆಯೇ ಅಂತ ಕೇಳಿದ ಕಪಿಲ್ ನಕ್ಕಿದ್ದಾರೆ. ಈ ಪ್ರಶ್ನೆಗೆ ಗಂಭೀರವಾಗಿರುವ ಅಟ್ಲಿ ಅವರು ನಗದೆ ಉತ್ತರಿಸಿದ್ದಾರೆ. ನೀವು ಯಾವ ಅರ್ಥದಲ್ಲಿ ಈ ಪ್ರಶ್ನೆ ಕೇಳ್ತಿದ್ದೀರಿ ಅಂತ ಅರ್ಥವಾಯ್ತು ಅದಕ್ಕೆ ನಾನು ಉತ್ತರಿಸುತ್ತೇನೆ ಎಂದಿದ್ದಾರೆ.
ಮುಂದುವರಿದು ಅಟ್ಲಿ ಅವರು ನಾನು ನೀವು ಕೇಳಿರುವ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನಿಸುತ್ತೇನೆ. ಈ ವಿಷಯದಲ್ಲಿ ನಾನು ಮೊದಲು ಎಆರ್ ಮುರುಗದಾಸ್ ಅವರಿಗೆ ಥ್ಯಾಂಕ್ಸ್ ಹೇಳ್ಬೇಕು. ಅವರು ನನ್ನ ಮೊದಲ ಸಿನಿಮಾಗೆ ನಿರ್ಮಾಪಕರು (ನಿರ್ಮಾಣ) ಮಾಡಿದವರು. ನಾನು ಮೊದಲು ಹೋದಾಗ ಅವರು ನನ್ನ ಸ್ಕ್ರಿಪ್ಟ್ ಮಾತ್ರ ಕೇಳಿದ್ರು ಬಿಟ್ರೆ ನಾನು ಯಾವ ರೀತಿ ಇದೀನಿ ಅಂತ ನೋಡಲಿಲ್ಲ. ಅವರಿಗೆ ನನ್ನ ಕೆಲಸ ಇಷ್ಟವಾಯ್ತು. ಸ್ಕ್ರಿಪ್ಟ್ ನರೇಷನ್ ಇಷ್ಟ ಆಯ್ತು. ನಾವು ಯಾವ ರೀತಿ ಕಾಣುತ್ತೇವೆ ಎನ್ನುವುದರ ಮೇಲೆ ಜಡ್ಜ್ ಮಾಡ್ಬಾರದು. ಮನಸ್ಸನ್ನು ನೋಡಿ ಜಡ್ಜ್ ಮಾಡಬೇಕು ಅಂತ ಅಟ್ಲಿ ಅವರು ಹೃದಯ ಮುಟ್ಟಿಕೊಂಡು ಹೇಳಿದ್ದಾರೆ. ಇದಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.
ಕಪಿಲ್ ಶರ್ಮಾ ಶೋನಲ್ಲೇ ಶರ್ಮಾ ಮುಂದೆಯೇ ಅಟ್ಲಿ ಅವರು ತಿರುಗೇಟು ನೀಡಿದ್ದಾರೆ. ಶರ್ಮಾ ಪ್ರಶ್ನೆ ಕೇಳಿದ ಮೇಲೆ ನಕ್ಕಾಗಲೇ ಅಟ್ಲಿ ಅವರು ಅದಕ್ಕೆ ನಗದೆ ಖಡಕ್ ಆಗಿ ಹಾಗೂ ಗಂಭೀರವಾಗಿ ಇದ್ದರು. ಅಟ್ಲಿ ಅವರ ಮದುವೆಯ ಪೋಟೋಗಳು ಸಹ ಈ ಹಿಂದೆ ವೈರಲ್ ಆಗಿತ್ತು. ಅದಕ್ಕೂ ಇದೇ ರೀತಿಯ ಕಮೆಂಟ್‌ಗಳು ಬಂದಿದ್ದವು.
ಇದೀಗ ಅಟ್ಲಿ ಹಾಗೂ ಕಪ್ಪು ಬಣ್ಣದ ಬಗ್ಗೆ ಕಪಿಲ್ ಮಾತನಾಡಿರುವ ಮಾತುಗಳಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ವಿ ಲವ್ ಬ್ಲಾಕ್ ಎನ್ನುವ ಹ್ಯಾಷ್ ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಟ್ರೆಂಡ್ ಆಗ್ತಿದೆ. ಕಳೆದ 10 ವರ್ಷಗಳ ಹಿಂದೆ ಕಪಿಲ್ ಶರ್ಮಾ ಶೋ ನೋಡಿದರೆ ಇಷ್ಟವಾಗುತ್ತಿತ್ತು. ಆದರೆ, ಈಗ ನಗು ಬರಲ್ಲ. ಕಪಿಲ್ ಒಳ್ಳೆಯ ಅಭಿರುಚಿಯನ್ನ ಬೆಳೆಸಿಕೊಂಡಿಲ್ಲ ಅಂತ ಕನ್ನಡಿಗರು ಹೇಳಿದ್ದಾರೆ.












Click it and Unblock the Notifications