Kantara Kannada: ಮೊದಲ ದಿನವೇ 150 ಕೋಟಿ ರೂಪಾಯಿ ಬಾಚಿದ ಕಾಂತಾರ ಸಿನಿಮಾ?
ಕಾಂತಾರ.. ಕಾಂತಾರ.. ಕಾಂತಾರ... ಹೀಗೆ ಕನ್ನಡಿಗರ ಸಿನಿಮಾ ಕಾಂತಾರ ಬಗ್ಗೆ ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಮಾತನಾಡುತ್ತಿದ್ದಾರೆ ಜನ. ಕನ್ನಡಿಗರ ಸಿನಿಮಾ ಕಾಂತಾರ ರಿಲೀಸ್ ಆಗುವ ಮೊದಲೇ ಪ್ರಪಂಚದ ಮೂಲೆ ಮೂಲೆಗೂ ತನ್ನ ಹವಾ ಹಬ್ಬಿಸಿತ್ತು. ಅದರಲ್ಲೂ ರಿಷಬ್ ಶೆಟ್ಟಿ ಅವರ ನಿರ್ದೇಶನ ಇಡೀ ಜಗತ್ತನ್ನು ಕನ್ನಡ ನಾಡಿನ ಕಡೆಗೆ ಸೆಳೆದಿತ್ತು. ಇದೀಗ ಸಿನಿಮಾ ರಿಲೀಸ್ ಆಗಿ ಮತ್ತಷ್ಟು ಸಂಚಲನ ಸೃಷ್ಟಿಯಾಗಿದೆ. ಹಾಗಾದರೆ ಕಾಂತಾರ ಚಾಪ್ಟರ್-1 ಸಿನಿಮಾ ರಿಲೀಸ್ ಆಗಿರುವ ಮೊದಲ ದಿನವೇ ಗಳಿಸಿದ್ದು ಎಷ್ಟು?
ರಿಷಬ್ ಶೆಟ್ಟಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿದ್ದಾರೆ, ರಿಷಬ್ ಅವರ ಸಿನಿಮಾ ಕರಿಯರ್ ದೊಡ್ಡ ಮಟ್ಟದಲ್ಲಿ ರಾರಾಜಿಸುತ್ತಿದೆ. ಅದ್ರಲ್ಲೂ ಕಾಂತಾರ ಸಿನಿಮಾದ ಮೊದಲ ಭಾಗಕ್ಕೆ ಸಿಕ್ಕ, ಅಭೂತಪೂರ್ವ ಬೆಂಬಲ ರಿಷಬ್ ಶೆಟ್ಟಿ ಅವರ ಸಿನಿಮಾ ಬದುಕಿಗೆ ದೊಡ್ಡ ತಿರುವು ನೀಡಿದೆ. ಇಷ್ಟೆಲ್ಲದರ ನಡುವೆ ಇದೀಗ ಕಾಂತಾರ ಸಿನಿಮಾದ ಮುಂದುವರಿದ ಭಾಗ ಸಾವಿರಾರು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿ, ಮಿಂಚಿನ ಸಂಚಲನ ಸೃಷ್ಟಿಸಿದೆ. ಕನ್ನಡಿಗರ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷಿಗರು ಕನ್ನಡ ಸಿನಿಮಾಗೆ ಜೈ ಜೈ ಎಂದಿದ್ದಾರೆ.

150 ಕೋಟಿ ರೂಪಾಯಿ ಬಾಚಿದ ಕನ್ನಡಿಗರ...
ಹೌದು, ರಿಲೀಸ್ ಆಗುವ ಮೊದಲೇ ಭಾರಿ ದೊಡ್ಡ ಮಟ್ಟದಲ್ಲಿ ಟಿಕೆಟ್ ಬುಕಿಂಗ್ ಕಂಡಿದ್ದ ಕನ್ನಡ ಸಿನಿಮಾ ರಂಗದ ಚಿನ್ನ ಕಾಂತಾರ ಸಿನಿಮಾ ಈಗ ಮತ್ತೊಂದು ದಾಖಲೆ ಬರೆದಿದೆ. ವರ್ಲ್ಡ್ ಬಾಕ್ಸ್ ಆಫಿಸ್ ನಡುಗಿ ಹೋಗುವಂತೆ ಗುಡುಗಿದೆ ರಿಷಬ್ ಶೆಟ್ಟಿ ಅವರ ಸಿನಿಮಾ. ಹಾಗಾದರೆ, ಮೊದಲ ದಿನವೇ 150 ಕೋಟಿ ರೂಪಾಯಿ ಬಾಚಿದ ಕಾಂತಾರ ಸಿನಿಮಾ? ಎಂಬ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಹೀಗಾಗಿ ಕಾದು ನೋಡಬೇಕಿದೆ.
ಹಲವು ದಾಖಲೆ ಬರೆದ ಕನ್ನಡ ಸಿನಿಮಾ
ಹೌದು, ಕಾಂತಾರ 2ನೇ ಭಾಗ ಈಗ 3 ವರ್ಷಗಳ ನಂತರ ಮತ್ತೆ ಬಂದಿದೆ. ಕಾಂತಾರ ಹೊಸ ಭಾಗದಲ್ಲಿ ವಿಸ್ಮಯಗಳ ರಾಶಿ ಶತಕೋಟಿ ಭಾರತೀಯರ ಎದುರು ಇಟ್ಟಿದ್ದಾರೆ ರಿಷಬ್ ಶೆಟ್ಟರು. ಹೀಗೆಲ್ಲಾ ಕಾಂತಾರ ಎಂಬ ಅದ್ಭುತ ಸಿನಿಮಾ ನೋಡಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಆನಂದವಾಗಿದೆ. ಈ ಸಿನಿಮಾ ನೋಡಲು ಥಿಯೇಟರ್ ಎದುರು ಮುಗಿಬೀಳುವ ಪರಿಸ್ಥಿತಿ ಕೂಡ ಇದೆ. ಮೊದಲ ಭಾಗದಲ್ಲೇ ಸುಮಾರು 400 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಬಾಚಿಕೊಂಡು ಸಂಚಲನ ಸೃಷ್ಟಿ ಮಾಡಿದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗ ಮತ್ತೊಂದು ವಿಶ್ವದಾಖಲೆ ಬರೆಯುತ್ತಿದೆ...












Click it and Unblock the Notifications