ಕನ್ನಡ ಸಿನಿಮಾ 100 ವರ್ಷಗಳ ದಾಖಲೆ ಮುರಿಯಲು ಸಿದ್ಧವಾಗಿದ್ದು ಹೀಗೆ... Kantara Kannada
ಕನ್ನಡ... ಕನ್ನಡ... ಕನ್ನಡ... ಇದು ಕನ್ನಡಿಗರ ಉಸಿರಾಗಿದ್ದು, ಕನ್ನಡಿಗರು ತಮ್ಮ ಭಾಷೆ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದರೂ ಪರಭಾಷೆಗಳನ್ನು ಗೌರವಿಸುತ್ತಾರೆ. ಹಾಗೇ ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಇಡೀ ಪ್ರಪಂಚದ ಹಳೆಯ ಭಾಷೆ ಕೂಡ ಆಗಿದೆ. ಹೀಗಿದ್ದಾಗ, ಕನ್ನಡ ಸಿನಿಮಾಗಳು ಕೂಡ ಭಾರಿ ದೊಡ್ಡ ಸದ್ದು ಮಾಡುತ್ತಾ & ಕನ್ನಡ ಭಾಷೆಯ ಬಗ್ಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಗೌರವ ಮತ್ತಷ್ಟು ಹೆಚ್ಚಾಗವಂತೆ ಮಾಡುತ್ತಿವೆ. ಹೀಗೆಲ್ಲಾ ಇದ್ದಾಗಲೇ, ಕನ್ನಡ ಸಿನಿಮಾ 100 ವರ್ಷಗಳ ದಾಖಲೆ ಮುರಿಯಲು ಸಿದ್ಧವಾಗಿದ್ದು ಹೀಗೆ...
ಮೂಲ ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗಿರುವ ಕಾಂತಾರ ಕನ್ನಡ ಸಿನಿಮಾ ರಂಗದ ಹೆಮ್ಮೆಯನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಕನ್ನಡಿಗ ರಿಷಬ್ ಶೆಟ್ಟಿ ಅವರು ಈಗ ಮುಟ್ಟಿದ್ದೆಲ್ಲಾ ಚಿನ್ನ. ಯಾಕಂದ್ರೆ ರಿಷಬ್ ಶೆಟ್ಟಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಇಂಡಸ್ಟ್ರಿ ಹಿಟ್ ಸಿನಿಮಾ ನೀಡುವ ಮೂಲಕ, ಇಂಡಿಯಾದ ಮೂಲೆ ಮೂಲೆಯಲ್ಲಿ ಹವಾ ಎಬ್ಬಿಸಿದ್ದಾರೆ. ಕನ್ನಡಿಗ ರಿಷಬ್ ಶೆಟ್ಟಿ ಅವರ ಸಿನಿಮಾ ಕಾಂತಾರ ಈಗ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, ಬಾಕ್ಸ್ ಆಫಿಸ್ ಉಡಾಯಿಸಿದೆ. ಇದೇ ಸಮಯದಲ್ಲಿ, ಕನ್ನಡ ಸಿನಿಮಾ 100 ವರ್ಷಗಳ ದಾಖಲೆ ಮುರಿಯಲು...

ಕನ್ನಡ ಸಿನಿಮಾ 100 ವರ್ಷಗಳ ದಾಖಲೆ ಮುರಿಯಲು...
ಕನ್ನಡಿಗರ ಕಾಂತಾರ ಈಗಾಗಲೇ 800 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ಬಾಚಿ ಈಗ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಮುಂದೆ ನುಗ್ಗಿದೆ. ಇದು ಸಾಧನೆ ಮಾತ್ರವಲ್ಲ, ಮತ್ತೊಂದು ಮಹಾನ್ ಇತಿಹಾಸ ಎನ್ನಬಹುದು. ಏಕೆಂದರೆ ಕನ್ನಡ ಸಿನಿಮಾ ಇಂಡಸ್ಟ್ರಿ ಶುರುವಾಗಿ ಸುಮಾರು 1 ಶತಮಾನ ಅಂದರೆ 100 ವರ್ಷಗಳೇ ಕಳೆದಿದೆ. ಈ 100 ವರ್ಷಗಳಲ್ಲೇ ಯಾವ ಸಿನಿಮಾ ಕೂಡ ಮಾಡದ ದಾಖಲೆಯನ್ನ ಸೃಷ್ಟಿ ಮಾಡಿ, ಹೊಸ ಇತಿಹಾಸ ಸೃಷ್ಟಿಸುತ್ತಿದೆ ಕಾಂತಾರ!
100 ವರ್ಷಗಳ ಇತಿಹಾಸದಲ್ಲೇ ಇದು ಮೊದಲು!
ಹೌದು, ಮೊದಲೇ ಹೇಳಿದಂತೆ ಈಗಾಗಲೇ ಕನ್ನಡಿಗ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ 800 ಕೋಟಿ ರೂಪಾಯಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆಯಂತೆ. ಅದರಲ್ಲೂ ಕರ್ನಾಟಕದಲ್ಲಿ ಈ ಸಿನಿಮಾ ಭಾರಿ ದೊಡ್ಡ ಪ್ರಮಾಣದಲ್ಲಿ ಗಳಿಸುವ ಮೂಲಕ, ಕನ್ನಡ ವರ್ಷನ್ ಅತ್ಯದ್ಭುತವಾಗಿ ಸಾಧನೆ ಮಾಡಿದೆ. ಹೀಗೆ ಕನ್ನಡ ಸಿನಿಮಾ ಒಂದು, ಕನ್ನಡ ಭಾಷೆಯಲ್ಲೇ ಮಿಂಚಿ ಇಷ್ಟು ಕೋಟಿ ಸಂಪಾದನೆ ಮಾಡಿರುವುದು ಹೊಸ ಇತಿಹಾಸವಾಗಿದೆ. ಕನ್ನಡ ಸಿನಿಮಾ ರಂಗದ 100 ವರ್ಷಗಳ ಇತಿಹಾಸದಲ್ಲೇ ಇದು ಮೊದಲು ಅಂತಾ ತಜ್ಞರು ಹೇಳುತ್ತಿದ್ದಾರೆ. ಹಾಗೇ ಮತ್ತಷ್ಟು ದಾಖಲೆಗಳನ್ನ ಸೃಷ್ಟಿ ಮಾಡಲು ಕಾಂತಾರ ಸಿನಿಮಾ ಇದೀಗ ಮುಂದೆ ನುಗ್ಗಿದೆ...












Click it and Unblock the Notifications