Kantara: Chapter 1: ಕಾಂತಾರ ಚಾಪ್ಟರ್ 01: ಸಿನಿಮಾ ಪಯಣ ನೆನಪಿಸಿಕೊಂಡ ರಿಷಬ್, ಜೂನಿಯರ್ ಎನ್‌ಟಿಆರ್ ಹೇಳಿದ್ದೇನು ?
Kantara: Chapter 1: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 01 ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿದೆ. ಈ ಸಿನಿಮಾವನ್ನು ನೋಡಿರುವ ಜನ ಇದು ಮತ್ತೊಂದು ದಾಖಲೆಯನ್ನು ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಕನ್ನಡಿಗರು ಮಾತ್ರವಲ್ಲ ಭಾರತದ ವಿವಿಧ ರಾಜ್ಯಗಳ ಸಿನಿ ಪ್ರಿಯರಿಂದಲೂ ಕಾಂತಾರ ಚಾಪ್ಟರ್ 1ಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರೀತಿ ಇರುವಾಗಲೇ ನಟ ರಿಷಬ್ ಶೆಟ್ಟಿ ಅವರು ತಮ್ಮ ಸಿನಿ ಪಯಣದ ಬಗ್ಗೆ ಮಹತ್ವದ ವಿಷಯವೊಂದನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ನಟ ರಿಷಬ್ ಶೆಟ್ಟಿ ಅವರು ತಮ್ಮ ಸಿನಿಮಾ ಪಯಣದ ಅನುಭವವನ್ನು ಸಹ ಹಂಚಿಕೊಂಡಿದ್ದಾರೆ. ಕನ್ನಡದ ಸ್ಟಾರ್ ನಟನ ಬಗ್ಗೆ ದೇಶದಾದ್ಯಂತ ಸಿನಿ ಪ್ರಿಯರು ಮಾತನಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರು ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿದ್ದಾರೆ. 2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು HouseFull ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.

ಈ ಯಶಸ್ಸಿಗೆ ನೀವು ಸಂಪೂರ್ಣ ಅರ್ಹರು: ಇನ್ನು ನಟ ರಿಷಬ್ ಶೆಟ್ಟಿ ಅವರು ಈ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಕನ್ನಡಿಗರು ಹಾಗೂ ಸಿನಿಮಾ ಪ್ರಿಯರು ಈ ಯಶಸ್ವಿ ಪಯಣಕ್ಕೆ ನೀವು ಅರ್ಹರು. ಕಾಂತಾರ ಚಾಪ್ಟರ್ 1 ಅದ್ಭುತವಾಗಿದೆ. ಕನ್ನಡ ಚಿತ್ರರಂಗದ ಕಡೆ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಕ್ಕೆ ಧನ್ಯವಾದ ಎಂದು ಕನ್ನಡಿಗರು ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.
ಜೂನಿಯರ್ ಎನ್ ಟಿಆರ್: ಇನ್ನು ಕಾಂತಾರ ಚಾಪ್ಟರ್ 1ಕ್ಕೆ ಭಾರತೀಯ ಸಿನಿಮಾ ರಂಗದ ಗಣ್ಯರು ಸಹ ರಿಷಬ್ ಶೆಟ್ಟಿ ಅವರಿಗೆ ಶುಭಕೋರಿದ್ದಾರೆ. ಜೂನಿಯರ್ ಎನ್ ಟಿಆರ್ (ನಂದಮೂರಿ ತಾರಕ ರಾಮರಾವ್ ಜೂನಿಯರ್) ಅವರು ಸಹ ಟ್ವೀಟ್ ಮಾಡಿ ರಿಷಬ್ ಅವರಿಗೆ ಶುಭಕೋರಿದ್ದಾರೆ. ಅದ್ಭುತ ಯಶಸ್ಸನ್ನು ಗಳಿಸಿದ #KantaraChapter1 ತಂಡಕ್ಕೆ ಅಭಿನಂದನೆಗಳು. ರಿಷಬ್ ಶೆಟ್ಟಿ ಸರ್ ಅದ್ಭುತ ನಟ ಮತ್ತು ಅದ್ಭುತ ನಿರ್ದೇಶಕರಾಗಿ ಅಮೋಘವಾದ ಸಾಧನೆ ಮಾಡಿದ್ದಾರೆ.
ರಿಷಬ್ ಅವರ ದೃಷ್ಟಿಕೋನವನ್ನು ನಿರ್ಭಯವಾಗಿ ಬೆಂಬಲಿಸಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಇಡೀ ಚಿತ್ರತಂಡ ಮತ್ತು ತಂಡಕ್ಕೆ ನನ್ನ ಶುಭಾಶಯಗಳು ಎಂದು ಎನ್‌ಟಿಆರ್ ಅವರು ಶುಭಕೋರಿದ್ದಾರೆ.












Click it and Unblock the Notifications