Darshan Thoogudeepa: ಬಳ್ಳಾರಿ ಜೈಲಲ್ಲಿ ದರ್ಶನ್ ತೂಗುದೀಪ್ ಆರೋಗ್ಯ ಸ್ಥಿತಿ ಗಂಭೀರ?
ದರ್ಶನ್ ತೂಗುದೀಪ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಳ್ಳಾರಿ ಜೈಲು ಸೇರಿದ ನಂತರ ದರ್ಶನ್ 20 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಬಳ್ಳಾರಿ ಜೈಲಿನ ಊಟ ಸರಿಯಾಗದೆ, ನಟ ದರ್ಶನ್ ಅವರು ಊಟ ಕೂಡ ಬಿಟ್ಟು ಕೂತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಭಾರಿ ನಿಶ್ಯಕ್ತರಾಗಿದ್ದಾರೆ ಎಂಬ ಸುದ್ದಿ ಕಿಚ್ಚು ಹೊತ್ತಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದೋಣ ಬನ್ನಿ.
ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಿಸಿದ್ದರು ಅಂತಾ ಹೊರಗೆ ಎಲ್ಲರೂ ಅಂದುಕೊಳ್ಳುತ್ತಿದ್ದರು. ಹೀಗಿದ್ದಾಗ ಜೈಲಿನ ಒಳಗೆ ಭರ್ಜರಿ ಸೌಲಭ್ಯ ಪಡೆಯುತ್ತಾ, ಐಷಾರಾಮಿ ಜೀವನ ನಡೆಸುತ್ತಿದ್ದಾರೆ ನಟ ದರ್ಶನ್ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ದರ್ಶನ್ ತೂಗುದೀಪ್ & ಗ್ಯಾಂಗ್ ಬೇರೆ ಬೇರೆ ಜೈಲಿಗೆ ಶಿಫ್ಟ್ ಆಗಿದ್ದು. ಇದೀಗ ಗಣಿ ನಾಡು ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಿರುವ ನಟ ದರ್ಶನ್ ಆರೋಗ್ಯ ಪರಿಸ್ಥಿತಿ ತುಂಬಾ ಗಂಭೀರ ಆಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ದರ್ಶನ್ ಅವರಿಗೆ ಏನಾಯ್ತು?

ದರ್ಶನ್ ತೂಗುದೀಪ್ ಆರೋಗ್ಯ ಗಂಭೀರ?
ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ತೂಗುದೀಪ್ ಅವರನ್ನ ಕೆಲವು ದಿನಗಳ ಹಿಂದಷ್ಟೇ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದರು. ಹೀಗಿದ್ದಾಗ, ಬಳ್ಳಾರಿ ಜೈಲು ನಟ ದರ್ಶನ್‌ಗೆ ಸೆಟ್ ಆಗಿಲ್ಲ. ಬಳ್ಳಾರಿ ಜೈಲಿನ ಒಳಗೆ ವೆಸ್ಟರ್ನ್ ಟಾಯ್ಲೆಟ್ ಇಲ್ಲ & ಸರಿಯಾಗು ಊಟ ಸಿಗುತ್ತಿಲ್ಲ ಎಂಬುದು ಅವರ ಅಭಿಮಾನಿಗಳ ಆರೋಪ. ಹೀಗಾಗಿ ದರ್ಶನ್ ಅಭಿಮಾನಿ ಬಳಗ ತಮ್ಮ ನೆಚ್ಚಿನ ಡಿ-ಬಾಸ್ ಪರಿಸ್ಥಿತಿ ಕಂಡು ಪರದಾಡುತ್ತಿದೆ. ಒಂದು ಕಡೆ ಇಂಡಿಯನ್ ಟಾಯ್ಲೆಟ್ ಮೇಲೆ ಕೂರಲು ಆಗದೆ ದರ್ಶನ್ ಪರದಾಡುತ್ತಿದ್ದರೆ, ಮತ್ತೊಂದು ಕಡೆ ಆರೋಗ್ಯ ಪರಿಸ್ಥಿತಿ ಕೂಡ ಗಂಭೀರವಾಗಿ 20 ಕೆ.ಜಿ. ಸೊರಗಿದ್ದಾರೆ ಎಂದು ಆರೋಪ ಮಾಡಲಾಗಿದೆ.
ನಾಗನ ಜೊತೆ ದರ್ಶನ್ ಫೋಟೋ ವೈರಲ್!
ದರ್ಶನ್ ಅವರ ಅಭಿಮಾನಿಗಳು ಕೆಲವೊಮ್ಮೆ ಅತಿರೇಕ ತೋರಿಸುತ್ತಾರೆ ಎಂಬ ಆರೋಪವಿದೆ. ಅದ್ರಲ್ಲೂ ನಟ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂತು, ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಸಿಗರೇಟು ಸೇದಿ ಟೀ ಕುಡಿದ ಫೋಟೋ ವೈರಲ್ ಮಾಡ್ತಿದ್ದಾರೆ ದರ್ಶನ್ ಅಭಿಮಾನಿಗಳು. ಆದರೆ ಈ ಫೋಟೋ ಮಾನ್ಯ ನ್ಯಾಯಾಲಯ & ಮಾನ್ಯ ಜಡ್ಜ್ ಅವರಿಗೆ ತಲುಪಿದರೆ ಕಥೆ ಏನು? ಎಂಬ ಚರ್ಚೆ ಸೋಷಿಯಲ್ ಮೀಡಿಯಾ ತುಂಬಾ ನಡೆಯುತ್ತಿದೆ. ದರ್ಶನ್ ತೂಗುದೀಪ್ ಅಭಿಮಾನಿಗಳ ಈ ವರ್ತನೆಯೇ ಇದೀಗ ತಮ್ಮ ನೆಚ್ಚಿನ ಹೀರೋಗೆ ಕಂಟಕ ತಂದಿದೆ ಎಂಬ ಭಾರಿ ಗಂಭೀರ ಆರೋಪ ಕೂಡ ಕೇಳಿಬಂದಿದೆ.












Click it and Unblock the Notifications