ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್‌ಗೆ ಅಪಘಾತ: ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

ಬೆಂಗಳೂರು, ಸೆಪ್ಟೆಂಬರ್‌ 11: ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿ ಹರ್ಷ ಪಾತ್ರದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಟ ಕಿರಣ್ ರಾಜ್ ಕಾರು ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ನಟ ಕಿರಣ್​ ರಾಜ್ ಕಾರು ಬೆಂಗಳೂರಿನ ಕೆಂಗೇರಿ ಬಳಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.

ಕಾರು ಅಪಘಾತದಲ್ಲಿ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಆ ಕೂಡಲೇ ಕಿರಣ್ ರಾಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರಿಂದ ಚಿಕಿತ್ಸೆ ಮುಂದುವರೆದಿದ್ದು, ಕಿರಣ್​ ರಾಜ್‌ ಹೇಗಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಬಹಿರಂಗ ಪಡಿಸಿಲ್ಲ. ನಟ ಕಿರಣ್​ ರಾಜ್ ಕಾರು ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

Kannada Serial Actor Kiran Raj s Car Accident At Near Kengeri Bengaluru

ಕನ್ನಡತಿ ಧಾರಾವಾಹಿ ಹರ್ಷ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ಕಿರಣ್‌ ರಾಜ್‌ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಕಿರಣ್​​ ರಾಜ್​ ಅಭಿನಯದ ರಾನಿ ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್‌, ಟ್ರೇಲರ್‌ ಮೂಲಕ ರಾನಿ ಸಿನಿಮಾ ಬಹಳ ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾಗೆ ಒಂದು ದಿನ ಬಾಕಿ ಇರುವಾಗಲೇ ನಟ ಕಿರಣ್​​ ರಾಜ್​ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+