ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಲೆಜೆಂಡ್ ನಟ ಆಂಕರ್ ಅಂತಾ... Kannada Kotyadhipathi
ಕನ್ನಡದ ಕೋಟ್ಯಾಧಿಪತಿ... ಇದು ಕೇವಲ ಒಂದು ಕಾರ್ಯಕ್ರಮ ಅಲ್ಲ, ಕನ್ನಡ ನಾಡಿನ ಬಡವರ ಮನೆಯಲ್ಲಿ ಹೊಸ ಬೆಳಕು ತುಂಬಿದ ಚಿಲುಮೆ ಆಗಿದೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಈ ಕಾರ್ಯಕ್ರಮದ ನಿರೂಪಣೆ ಶುರು ಮಾಡಿದ ನಂತರ, ಇಡೀ ಇಂಡಿಯಾ ಪೂರ್ತಿ ಕನ್ನಡದ ಕೋಟ್ಯಾಧಿಪತಿ ದೊಡ್ಡ ಸದ್ದು ಮಾಡಿತ್ತು. ಆದರೆ ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿದ ನಂತರ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವು ನಿಂತೇ ಹೋಗಿದೆ...
ಬಡವರ ಮನೆ ಮಕ್ಕಳು ತಮ್ಮ ಜ್ಞಾನದ ಮೂಲಕ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡಬಹುದು ಎಂಬುದನ್ನ ಎಲ್ಲರಿಗೂ ತೋರಿಸಿದ್ದೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ. 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಸೌಂಡ್‌ನ ಮಾಡಿತ್ತು, ಕನ್ನಡ ಟಿವಿ ಲೋಕದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಹೀಗೆ ಮಿಂಚಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಆಂಕರಿಂಗ್ ಶೈಲಿ ಕಾರಣ ಎಂಬುದರಲ್ಲಿ ಅನುಮಾನ ಇಲ್ಲ. ಹೀಗಿದ್ದಾಗಲೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಲೆಜೆಂಡ್ ನಟ ಆಂಕರ್ ಅಂತಾ...

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಲೆಜೆಂಡ್ ....
ಹೀಗಿದ್ದಾಗ ಪವರ್ ಸ್ಟಾರ್ ಅಪ್ಪು ಅವರು ಇಲ್ಲದೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ನೆನಪು ಮಾಡಿಕೊಳ್ಳುವುದಕ್ಕೂ ಆಗುತ್ತಿಲ್ಲ. ಕೋಟಿ ಕೋಟಿ ಕನ್ನಡಿಗರೆಲ್ಲರೂ ಈ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನೋಡಲು ಕಾಯುತ್ತಿದ್ದಾರೆ. ಆದರೆ, ಅಪ್ಪು ಅವರು ಇಲ್ಲದ ನೋವು ಕೂಡ ಕಾಡುತ್ತಿದೆ. ಯಾವಾಗ ಕಾರ್ಯಕ್ರಮ ಮತ್ತೆ ಶುರುವಾಗುತ್ತೋ? ಎನ್ನುವ ಭಾರಿ ದೊಡ್ಡ ನಿರೀಕ್ಷೆಯೂ ಇದೆ. ಹೀಗಿದ್ದಾಗಲೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಲೆಜೆಂಡ್ ನಟ ಆಂಕರ್ ಅಂತಾ...
ಹ್ಯಾಟ್ರಿಕ್ ಹೀರೋ ಕೋಟ್ಯಾಧಿಪತಿ ಕಾರ್ಯಕ್ರಮ...
ಹೌದು, ಕೋಟ್ಯಾಧಿಪತಿ ಕಾರ್ಯಕ್ರಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಲ್ಲದೆ ಅನಾಥವಾಗಿದೆ ಎಂಬ ಬೇಸರ ಹೊರ ಹಾಕುತ್ತಿದ್ದರು ಅಭಿಮಾನಿಗಳು. ಹೀಗಿದ್ದಾಗ ಮುಂದೆ ಈ ಕಾರ್ಯಕ್ರಮ ನಡೆಸಿಕೊಡುವುದು ಯಾರು? ಎಂಬ ಪ್ರಶ್ನೆಗಳು ಮೂಡಿರುವ ಸಮಯದಲ್ಲೇ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರೇ ಕಾರ್ಯಕ್ರಮ ನಡೆಸಿಕೊಡಲಿ ಅಂತಾ ಈಗ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದು ಕಡೆ, ಕನ್ನಡದ ಕೋಟ್ಯಾಧಿಪತಿಗೆ ಲೆಜೆಂಡ್ ನಟ ಆಂಕರ್ ಅಂತಾನೂ ಸುದ್ದಿ ಇದೀಗ ಹಬ್ಬಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ಆದರೆ ಈವರೆಗೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗೆ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದ್ದು, ಶಿವಣ್ಣ ಬರಬೇಕು ಎಂಬ ಡಿಮ್ಯಾಂಡ್ ಇಟ್ಟು ಫ್ಯಾನ್ಸ್ ಕಾಯುತ್ತಿದ್ದಾರೆ.












Click it and Unblock the Notifications