ಕರಾವಳಿ ಪ್ರತಿಭೆ & ‘ದಿಯಾ’ ಸಿನಿಮಾ ಹೀರೋ ಮಲಯಾಳಂಗೆ ಭರ್ಜರಿ ಎಂಟ್ರಿ!
ಕನ್ನಡ ಸಿನಿಮಾಗಳ ಗತ್ತು ಬದಲಾಗಿದ್ದು, ಜಗತ್ತಿನಾದ್ಯಂತ ಕನ್ನಡ ಸಿನಿಮಾಗಳಿಗು ಕೋಟಿ ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅದರಲ್ಲೂ ಕೆಜಿಎಫ್ & ಕಾಂತಾರ ಸಿನಿಮಾ ಇಂಡಸ್ಟ್ರಿ ಹಿಟ್ ಆದ ಬಳಿಕ ಸ್ಯಾಂಡಲ್‌ವುಡ್ ಅಬ್ಬರ ಬಲು ಜೋರಾಗಿದೆ. ಹೀಗಾಗಿ ಹೊರ ರಾಜ್ಯದಲ್ಲೂ ಕನ್ನಡ ನಟ & ನಟಿಯರಿಗೆ ಬೇಡಿಕೆ ಹೆಚ್ಚಾಗಿದೆ. ಇದೀಗ 'ದಿಯಾ' ಸಿನಿಮಾ ಹೀರೋ ದೀಕ್ಷಿತ್ ಶೆಟ್ಟಿ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
'ದಿಯಾ' ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ ದಸರಾ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆದರು. ನ್ಯಾಚುರಲ್ ಸ್ಟಾರ್ ನಾನಿ ಜೊತೆ ನಟಿಸಿ ಗೆದ್ದಿದ್ದ ಕರಾವಳಿ ಪ್ರತಿಭೆ ಈಗ ಮತ್ತೊಂದು ಎಕ್ಸ್‌ಪೆರಿಮೆಂಟ್ ಮಾಡೋದಕ್ಕೆ ಮುಂದಾಗಿದ್ದಾರೆ. ಈ ಚಾಕ್ಲೇಟ್ ಹೀರೋ ಈಗ ಮಲಯಾಳಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು, ಸದ್ಯ ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಇರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾದರೆ ಈ ಸಿನಿಮಾದಲ್ಲಿ ಯಾವ ಕ್ಯಾರೆಕ್ಟರ್ ನಿಭಾಯಿಸಲಿದ್ದಾರೆ ದಿಯಾ ಹೀರೋ? ಶೂಟಿಂಗ್ ಶೂರುವಾಗೋದು ಯಾವಾಗ ಅನ್ನೋದರ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಸಿನಿಮಾ ಟೈಟಲ್ ಏನು ಗೊತ್ತಾ?
ಒಪ್ಪೀಸ್ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ಕೇರಳದಲ್ಲಿ ಸರಳವಾಗಿ ನಡೆದಿದೆ. 10 ವರ್ಷ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಬಂದ್ರೆ ಏನಾಗುತ್ತೆ? ಎಂಬ ಕಥೆಯ ತಿರುಳು ಇಟ್ಟುಕೊಂಡು ಸಿನಿಮಾ ಹೆಣೆಯಲಾಗಿದೆ. ಫೆಬ್ರವರಿ ತಿಂಗಳಿಂದ 'ಒಪ್ಪೀಸ್' ಸಿನಿಮಾ ಶೂಟಿಂಗ್ ಶುರು ಆಗಲಿದೆ. ಇನ್ನು, ಸೌಜನ್ ಜೋಸೆಫ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾ ಇದ್ದಾರೆ. ಪ್ರದ್ಯುಮನ್ಹಾ ಕೊಳ್ಳೇಕಾಲ ಬಂಡವಾಳವನ್ನು ಹೂಡಿದ್ದಾರೆ. ಎಂ. ಜಯಚಂದ್ರನ್ ಮ್ಯೂಸಿಕ್ ಈ ಚಿತ್ರಕ್ಕೆ ಇದೆ.
ದೀಕ್ಷಿತ್ ಶೆಟ್ಟಿ ಪಯಣ ಹೇಗಿತ್ತು?
ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು 'ದಿಯಾ' ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸು ಸೆಳೆದಿದ್ರು ದೀಕ್ಷಿತ್ ಶೆಟ್ಟಿ. ಈಗ ದೀಕ್ಷಿತ್ ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿರುವ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ದೀಕ್ಷಿತ್ ನಟನೆ ಮಾಡಿರುವ, 'ಕೆಟಿಎಂ' ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ, ತಮಿಳು ಸಿನಿಮಾ ಒಂದು ಕೂಡ ತೆರೆಗೆ ಬರಲು ಅಣಿಯಾಗಿದೆ. ಇಷ್ಟೆಲ್ಲದರ ಮಧ್ಯೆ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹೊಸ ನಿರೀಕ್ಷೆಯಲ್ಲಿದ್ದಾರೆ.

ಒಟ್ನಲ್ಲಿ ಕನ್ನಡದಲ್ಲಿ ವಿಭಿನ್ನ ಕಥಾಹಂದರದ ಸಿನಿಮಾ ಮೂಲಕ ದೊಡ್ಡ ಹೆಸರು ಗಳಿಸಿ, ಮಿಂಚಿದ್ದ ನಟ ಈಗ ಮತ್ತೊಮ್ಮೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಅದೂ ನೆರೆ ರಾಜ್ಯದ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿರುವ ದೀಕ್ಷಿತ್ ಅವರಿಗೆ, ಅವರ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.












Click it and Unblock the Notifications