ಶೂಟಿಂಗ್‌ ವೇಳೆ ಭಾರೀ ಅನಾಹುತ! ಎತ್ತರದಿಂದ ನೆಲಕ್ಕೆ ಬಿದ್ದ ಕನ್ನಡದ ಖ್ಯಾತ ನಟಿ

ಕನ್ನಡ ಸಿನಿಮಾವೊಂದರ ಶೂಟಿಂಗ್‌ ವೇಳೆ ಭಾರಿ ಅನಾಹುತ ನಡೆದಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯೊಬ್ಬರು ಆಯತಪ್ಪಿ ಎತ್ತರದಿಂದ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಹಿರಿಯ ನಟಿ ರೇಖಾ ದಾಸ್ ಅವರ ಪುತ್ರಿ, ನಟಿ ಶ್ರಾವ್ಯ ರಾವ್ ಅವರು ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾಗ ಈ ಅವಘಡ ನಡೆದಿದ್ದು, ನೆಲಕ್ಕೆ ಬಿದ್ದಿದ್ದಾರೆ. ಇದು ನಿರ್ದೇಶಕ ಸಿಂಪಲ್ ಸುನಿ ಅವರ ನಿರ್ದೇಶನದ ಶೂಟಿಂಗ್​ ಸೆಟ್​​​ನಲ್ಲಿ ನಡೆದಿರುವ ಘಟನೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾವೊಂದರ ಶೂಟಿಂಗ್‌ ನಡೆಯುತ್ತಿತ್ತು. ನಿರ್ದೇಶಕ ಸಿಂಪಲ್ ಸುನಿ ತಮ್ಮ ಹೊಸ ಚಿತ್ರದ ಶೂಟಿಂಗ್ ಪ್ಲ್ಯಾನ್‌ ಮಾಡಿಕೊಂಡಿದ್ದರು. ಮೂಲಗಳ ಪ್ರಕಾರ ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ನಟಿ ಮೇಲಿನಿಂದ ಬಿದ್ದಿದ್ದಾರೆ. ಈ ಸಿನಿಮಾದಲ್ಲಿ ರೋಪ್‌ ಡ್ಯಾನ್‌ ಇದ್ದಿದ್ದರಿಂದ ಆ ಭಾಗದ ಚಿತ್ರೀಕರಣ ನಡೆಯುತ್ತಿತ್ತು.

kannada-actress-shravya-rao-falls-on-set-at-kanteerava-studio-escapes-with-no-injuries

ನಟಿ ಶ್ರಾವ್ಯ ಹಾಗೂ ಸಿನಿಮಾದ ಹೀರೋ ರೋಪ್‌ನಲ್ಲಿ ಡ್ಯಾನ್ಸ್‌ ಮಾಡುತ್ತಾ ನೇತಾಡುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ರೋಪ್ ಮೂಲಕ ನೇತಾಡುತ್ತಿದ್ದಾಗ ನಟಿ ಶ್ರಾವ್ಯ ರಾವ್ ಆಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ನಟಿ ಶ್ರಾವ್ಯ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಶ್ರಾವ್ಯ ರಾವ್ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಖ್ಯಾತ ಪ್ರಸಿದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತು ನಟಿ ರೇಖಾ ದಾಸ್ ಅವರ ಪುತ್ರಿಯಾಗಿದ್ದು, ಸಿನಿಮಾ ರಂಗದ ಹಿನ್ನೆಲೆಯಲ್ಲೇ ಬೆಳೆದವರು. ಶ್ರಾವ್ಯ ಅವರು ತಮ್ಮ ತಂದೆಯ ನಿರ್ದೇಶನದ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದರು. ಬೇರೆ ಆಡಿಷನ್‌ಗಳಿಗೆ ಹೋಗಿದ್ದರು. ಮೊದಲಿಗೆ 2013ರಲ್ಲಿ ಲೂಸ್‌ಗಳು ಸಿನಿಮಾ ಮೂಲಕ ಶ್ರಾವ್ಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಬಳಿಕ ರೋಸ್‌ ಸಿನಿಮಾದಲ್ಲಿ ಅವರು ನಟ ಅಜಯ್ ರಾವ್ ಅವರೊಂದಿಗೆ ಬ್ರಾಹ್ಮಣ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಕಟ್ಟೆ ಸಿನಿಮಾದಲ್ಲೂ ನಟಿಸಿದ್ದರು. ಅವರು 2017ರಲ್ಲಿ ವಾನವಿಲ್ಲು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಅವರ ತಂದೆಯ ಕೋರಿಕೆಯ ಮೇರೆಗೆ ಹುಚ್ಚ-2 ಚಿತ್ರದಲ್ಲಿ ನಟಿಸಿದ್ದರು.

ಈ ಹಿಂದೆ ಶ್ರಾವ್ಯ ನಟಿಸಿದ್ದ ಅಥಿ ಐ ಲವ್ ಯು ಸಿನಿಮಾದಲ್ಲಿ 11 ನಿಮಿಷದ ಸೀನ್ ಅನ್ನು ಸಿಂಗಲ್ ಶಾಟ್‌ನಲ್ಲಿ ಮುಗಿಸಿದ್ದರು. ನಾನು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೆ. ಅದೆಲ್ಲವೂ ನನಗೆ ಇಷ್ಟವಾಗಿತ್ತು. ಆದರೆ ಅಥಿ ಐ ಲವ್ ಯು ಚಿತ್ರದಲ್ಲಿ ನಾನು ಬೇರೊಂದು ಬಗೆಯ ಅನುಭವ ಪಡೆದೆ. ಈ ಚಿತ್ರದ ಚಿತ್ರೀಕರಣ ನನಗೊಂದು ವಿಷೇಶ ಅನುಭವ ನೀಡುತ್ತಿದೆ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+