Sangeetha Bhat: ನಟಿ ಸಂಗೀತ ಭಟ್ ಮತ್ತೆ ಕಮಾಲ್ ಮಾಡ್ತಾರಾ?

ನಟಿ ಸಂಗೀತ ಭಟ್ ಹೊಸ ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಲು ಬಂದಿದ್ದಾರೆ. ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ನಂತರ ಮತ್ತೆ ಕಂಬ್ಯಾಕ್ ಮಾಡ್ತಿದ್ದಾರೆ. ಈಗ ನಟಿ ಸಂಗೀತ ಭಟ್ ಅಭಿನಯದ ಮುಂದಿನ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಈ ಮೂಲಕ ಮತ್ತೊಮ್ಮೆ ಕಮಾಲ್ ಮಾಡಲು ಸ್ಯಾಂಡಲ್‌ವುಡ್ ನಟಿ ಸಿದ್ಧರಾಗಿದ್ದಾರೆ. ಹಾಗಾದ್ರೆ ನಟಿ ಸಂಗೀತ ಭಟ್ ಅವರ ಹೊಸ ಸಿನಿಮಾದ ಟೀಸರ್ ಹೇಗಿದೆ?

ಅಷ್ಟಕ್ಕೂ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ 'ಕ್ಲಾಂತ' ಚಿತ್ರದ ಟೀಸರ್ ಯುಟ್ಯೂಬ್ ಅಖಾಡದಲ್ಲಿ ರಿಲೀಸ್ ಆಗಿದೆ. ನಟಿ ಸಂಗೀತ ಭಟ್ ಕಂಬ್ಯಾಕ್ ಮಾಡುತ್ತಿರುವ ಈ ಸಿನಿಮಾ, ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಇದೀಗ ರಿಲೀಸ್ ಆಗಿರುವ ಟೀಸರ್ ಅಭಿಮಾನಿಗಳ ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಕ್ಲಾಂತ ಟೀಸರ್ ಸಂಗೀತ ಅವರ ನಟನೆ ಮೂಲಕ ಗಮನ ಸೆಳೆದಿದೆ. ಹಾಗಾದರೆ ಸಿನಿಮಾ ರಿಲೀಸ್ ಆಗೋದು ಯಾವಾಗ? ನಟಿ ಸಂಗೀತಾ ಮತ್ತೊಮ್ಮೆ ತೆರೆ ಮೇಲೆ ಕಮಾಲ್ ಮಾಡ್ತಾರಾ?

Kannada Actress Sangeetha Bhat making comeback to cinema industry

ಸಂಗೀತಾ ಸಿನಿಮಾ ಏನ್ ಹೇಳುತ್ತೆ?

ರಂಗನ್ ಸ್ಟೈಲ್ & ದಗಲು ಬಾಜಿಲು ಸೇರಿದಂತೆ ಡಿಫರೆಂಟ್ ಜಾನರ್ ಸಿನಿಮಾ ನಿರ್ದೇಶಿಸಿರುವ ವೈಭವ್ ಪ್ರಶಾಂತ್ 'ಕ್ಲಾಂತ' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮ ಪಕ್ಷಿಗಳನ್ನು ಗ್ಯಾಂಗ್ ಅಟ್ಯಾಕ್ ಮಾಡುತ್ತದೆ. ಆ ಗ್ಯಾಂಗ್ ನಿಂದ ಈ ಜೋಡಿ ಹೇಗೆ ತಪ್ಪಿಕೊಂಡು ಬರ್ತಾರೆ. ಆ ಗ್ಯಾಂಗ್ ವಿರುದ್ಧ ಹೇಗೆ ಹೋರಾಡುತ್ತಾರೆ ಅನ್ನೋದನ್ನು ಟೀಸರ್ ಮೂಲಕ ಹೇಳಲಾಗಿದೆ. ಹೀಗಾಗಿ ಸಿನಿಮಾ ಕಥೆ ಏನಾಗಿರಬಹುದು? ಎಂಬ ಕುತೂಹಲ ಕೂಡ ಹೆಚ್ಚಾಗಿದೆ.

ಇನ್ನು ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಶೋಭರಾಜ್, ವೀಣಾ ಸುಂದರ್, ಕಾಮಿಡಿ ಕಿಲಾಡಿ ದೀಪಿಕಾ, ಪ್ರವೀಣ್ ಜೈನ್, ಯುವ & ತಿಮ್ಮಪ್ಪ ಕುಲಾಲ್, ಸ್ವಪ್ನ, ರಾಘವೇಂದ್ರ ಕಾರಂತ್, ಪಂಚಮಿ ವಾಮಂಜೂರ್ ಸೇರಿದಂತೆ ವಾಮದೇವ ಪುಣಿಂಚತ್ತಾಯ ಹಾಗೂ ಹಲವರು ಸಿನಿಮಾಗೆ ಸಾಥ್ ನೀಡಿದ್ದಾರೆ. ಇನ್ನೇನು ರಿಲೀಸ್‌ಗೂ 'ಕ್ಲಾಂತ' ಸಿನಿಮಾ ಸಿದ್ಧವಾಗುತ್ತಿದೆ.

ಸಿನಿಮಾ ಯಾವಾಗ ರಿಲೀಸ್?

'ಕ್ಲಾಂತ' ಸಿನಿಮಾ ಚಿತ್ರೀಕರಣ ಕುಕ್ಕೆ ಸುಬ್ರಹ್ಮಣ್ಯ, ಗುಂಡ್ಯ, ಕಳಸ ಸುತ್ತಮುತ್ತಲಿನ ಕಾಡಲ್ಲಿ ಅದ್ಧೂರಿ ವೆಚ್ಚದಲ್ಲಿ ನಡೆಸಲಾಗಿದೆ. ಪಕ್ಕಾ ಆಕ್ಷನ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಚಂದ್ರಕಾಂತ್ ಸಂಗೀತ, ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿದೆ. ಅನುಗ್ರಹ ಪವರ್ ಮೀಡಿಯಾ ಬ್ಯಾನರ್‌ನ ಅಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇನ್ನು ಶೀಘ್ರದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿ ಇದೆ.

Kannada Actress Sangeetha Bhat making comeback to cinema industry

ಒಟ್ನಲ್ಲಿ ನಟಿ ಸಂಗೀತಾ ಭಟ್ ಅವರ ಫ್ಯಾನ್ಸ್ ಈ ಸಿನಿಮಾಗಾಗಿ ಕಾಯುತ್ತಿದ್ದು, ಇದೀಗ ಟೀಸರ್ ಮೂಲಕ ಝಲಕ್ ತೋರಿಸಿದೆ. ಇನ್ನೇನು ಶೀಘ್ರದಲ್ಲಿ ಸಿನಿಮಾ ರಿಲೀಸ್ ಮಾಡಲು ತಯಾರಿ ಭರ್ಜರಿಯಾಗಿ ಸಾಗಿದ್ದು, ಸದ್ಯದಲ್ಲೇ ಈ ಬಗ್ಗೆ ಸಿಹಿಸುದ್ದಿ ಸಿಗುವ ನಿರೀಕ್ಷೆಯೂ ಇದೆ. ಈ ಮೂಲಕ ಸಂಗೀತಾ ಭಟ್ ಅಭಿಮಾನಿಗಳು ಮತ್ತೊಮ್ಮೆ ತಮ್ಮ ನೆಚ್ಚಿನ ನಟಿಯ ಸಿನಿಮಾ ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳಬಹುದು. 2011ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಂಗೀತಾ ಭಟ್ ಕನ್ನಡವೂ ಸೇರಿದಂತೆ ಹಲವು ಭಾಷೆ ಸಿನಿಮಾಗಳಲ್ಲಿ ಮಿಂಚಿದ್ದರು. ಇದೀಗ ಒಂದು ಗ್ಯಾಪ್‌ನ ಬಳಿಕ ಮತ್ತೊಂದು ಭರ್ಜರಿ ಎಂಟ್ರಿಗೆ ಕಾಯುತ್ತಿದ್ದಾರೆ. ಹೀಗಾಗಿ ಫ್ಯಾನ್ಸ್ ಕುತೂಹಲ ಕೂಡ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+