Darshan Thoogudeep: ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಜೈಲಿನ ಒಂದೇ ಕೋಣೆಯಲ್ಲಿ? ಸಂಚಲನ ಸೃಷ್ಟಿ ಮಾಡಿದ ಆರೋಪ!
ದರ್ಶನ್ ತೂಗುದೀಪ್ ತಮ್ಮ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಆರೋಪಕ್ಕೆ, ರೇಣುಕಾಸ್ವಾಮಿ ಎಂಬ ಯುವಕನನ್ನ ಕೊಲೆ ಮಾಡಿರುವ ಆರೋಪವನ್ನ ಈಗ ಎದುರಿಸುತ್ತಿದ್ದಾರೆ. ಹೀಗೆ ಕೊಲೆ ಆರೋಪಿ ಆಗಿರುವ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಇಬ್ಬರೂ ಒಂದೇ ಕೋಣೆಯಲ್ಲಿ ಇದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ! ಹಾಗಾದ್ರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡು ಇದ್ದರೆ ಇದೆಲ್ಲಾ ಸಾಧ್ಯ ಆಗುತ್ತಾ? ಬನ್ನಿ ತಿಳಿಯೋಣ.
ದರ್ಶನ್ ಜೈಲಿನಲ್ಲಿ ಇದ್ದರೂ ಎಲ್ಲಾ ರೀತಿಯ ಸೇವೆಗಳು ಸಿಗುತ್ತಿವೆ ಎಂಬ ಆರೋಪ ಇದೆ. ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಆಗಾಗ ಆರೋಪಗಳ ಸುರಿಮಳೆಯೇ ಕೇಳಿಬರುತ್ತದೆ. ಈ ವಿಚಾರದಲ್ಲಿ ಹಿಂದೆ ಪೊಲೀಸ್ ಅಧಿಕಾರಿ ಡಿ. ರೂಪ ಅವರು ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ, ಗಾಂಜಾ, ಅಫೀಮು, ಚಾಕು & ಚೂರಿ ಹೀಗೆ ವಿನಾಶಕಾರಿ ವಸ್ತುಗಳನ್ನ ಸೀಜ್ ಮಾಡಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುತ್ತೆ ಅನ್ನೋ ಆರೋಪ ನಿಜವಾಗಿತ್ತು. ಈಗ ನೋಡಿದರೆ ದರ್ಶನ್ ತೂಗುದೀಪ್ ಮತ್ತು ನಟನ ಪ್ರೇಯಸಿ ಪವಿತ್ರಾ ಗೌಡ ಒಂದೇ ಕೋಣೆಯಲ್ಲಿ ಇದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಹಾಗಾದ್ರೆ ಈ ಆರೋಪ ಸಾಬೀತು ಮಾಡುವುದು ಹೇಗೆ? ಮುಂದೆ ಓದಿ.

ಸಿಸಿ ಕ್ಯಾಮೆರಾ ಪರಿಶೀಲನೆ ಆಗಲಿ!
ದರ್ಶನ್ ತೂಗುದೀಪ್ ಭಾರಿ ದೊಡ್ಡ ಪ್ರಭಾವಿ ವ್ಯಕ್ತಿ. ಕನ್ನಡ ಸಿನಿಮಾಗಳ ಮೂಲಕ ನಟ ದರ್ಶನ್ ಬೆಳೆದು ನೂರಾರು ಕೋಟಿ ರೂಪಾಯಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇರುತ್ತೆ. ದರ್ಶನ್ ಪರಪ್ಪನ ಅಗ್ರಹಾರ ಸೇರಿದ ನಂತರ ಅವರಿಗೆ ಒಳಗೆ ಬಿರಿಯಾನಿ ಸಿಗುತ್ತಿದೆ ಹಾಗೂ ಪವಿತ್ರಾ ಗೌಡ & ದರ್ಶನ್ ಅವರನ್ನು ಒಂದೇ ಕೋಣೆಯಲ್ಲಿ ಇರಲು ಬಿಟ್ಟಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಆರೋಪಗಳು ಸಂಚಲನ ಕೂಡ ಸೃಷ್ಟಿ ಮಾಡಿವೆ.
ಪರಪ್ಪನ ಅಗ್ರಹಾರದ ವಿವಿಐಪಿ ಸೆಲ್ ಒಳಗೆ ಇದೀಗ ನಟ ದರ್ಶನ್ ಇದ್ದಾರೆ ಎಂಬ ಕುರಿತು ಮಾಹಿತಿ ಇದೆ. ಅಂದಹಾಗೆ ಪರಪ್ಪನ ಅಗ್ರಹಾರದ ವಿವಿಐಪಿ ಜೈಲು ಕೋಣೆಗಳಿಗೆ ವಿಶೇಷ & ಅತ್ಯಾಧುನಿಕ ಭದ್ರತೆ ಇದೆ. ಹಾಗೇ ಅದೇ ಜಾಗದಲ್ಲಿ ಸಿಸಿ ಕ್ಯಾಮೆರಾ ಕೂಡ ಇದೆ. ಹೀಗಾಗಿ ಇದೀಗ ಕೇಳಿಬಂದಿರುವ ಆರೋಪದ ಬಗ್ಗೆ ತನಿಖೆ ನಡೆಸಲು, ಪರಪ್ಪನ ಅಗ್ರಹಾರದ ವಿವಿಐಪಿ ಜೈಲು ಕೋಣೆಗಳ ಬಳಿಯೇ ಇರುವ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ?
ನಟ ದರ್ಶನ್ ತೂಗುದೀಪ್ ಸಾಕಷ್ಟು ಪ್ರಭಾವಿ ವ್ಯಕ್ತಿ, ಹೀಗಾಗಿ ದರ್ಶನ್ ಜೈಲಿನಿಂದ ಹೊರಗಡೆ ಇದ್ದಾಗ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳಿಗೆ ಕೆಲಸ ಮಾಡಿಕೊಡುತ್ತಿದ್ದರು. ಚುನಾವಣೆಯ ವೇಳೆ ಪ್ರಚಾರ ನಡೆಸಿ, ಮತದಾರರ ಗಮನ ಸೆಳೆಯಲು ಸಾಹಯ ಮಾಡುತ್ತಿದ್ದರು ಎಂಬ ಮಾತು ಇದೆ. ಈಗ ಅದೇ ರಾಜಕಾರಣಿಗಳು ನಟ ದರ್ಶನ್ ನೆರವಿಗೆ ಬಂದು ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್‌ಗೆ ಏನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಈಗ ಕೇಳಿಬಂದಿದೆ. ಬಿರಿಯಾನಿ ಊಟದ ಜೊತೆಯಲ್ಲೆ ಎಣ್ಣೆ ಕೂಡ ಸಪ್ಲೈ ಆಗುತ್ತಿದೆ ಎಂಬ ಗಂಭೀರ ಆರೋಪ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಪರಪ್ಪನ ಅಗ್ರಹಾರದ ವಿವಿಐಪಿ ಜೈಲು ಕೋಣೆಗಳ ಬಳಿ ಇರುವ ಸಿಸಿ ಕ್ಯಾಮೆರಾ ಪರಿಶೀಲನೆಗೆ ಆಗ್ರಹ ಕೇಳಿಬಂದಿದೆ.
ಎಣ್ಣೆ & ಬಿರಿಯಾನಿ ಕೊಡ್ತಿರುವುದು ಯಾರು?
ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆ ಬಗ್ಗೆ ಬಿಡಿಸಿ ಹೇಳಬೇಕಿಲ್ಲ ಯಾಕಂದ್ರೆ ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆದಾಗ ಗಾಂಜಾ & ಸಿಗರೇಟ್, ಎಣ್ಣೆ ಹೀಗೆ ಏನೇನು ವಸ್ತು ಸಿಗಬಾರದೋ ಅದೆಲ್ಲಾ ಸಿಕ್ಕಿತ್ತು. ಈಗಲೂ ಅಷ್ಟೇ ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗು ಜೈಲಿನ ಅಧಿಕಾರಿಗಳೇ ಸಹಾಯ ಮಾಡುತ್ತಾರೆ, ಅದರಲ್ಲೂ ಜೈಲಿನ ಒಳಗಡೆ ದುಡ್ಡು ಕೊಟ್ಟರೆ ಏನೇನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಜೈಲಿನ ಒಳಗೆ ಮಾಡ್ತಾರೆ ಎಂಬ ಆರೋಪ ಇದೆ. ಹೀಗೆ ದರ್ಶನ್ & ಗ್ಯಾಂಗ್‌ಗೆ ಕೂಡ ಜೈಲು ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಈಗ ಕೇಳಿಬಂದಿದೆ.
ನಟ ದರ್ಶನ್ ರಿಲೀಸ್ ಯಾವಾಗ?
ದರ್ಶನ್ ಕನ್ನಡದ ಟಾಪ್ ನಟನಾಗಿ ನೂರಾರು ಕೋಟಿ ರೂಪಾಯಿ ಸಂಪಾದಿಸಿದ್ದರು. ಅದ್ರಲ್ಲೂ ನಟ ದರ್ಶನ್ ಸಿನಿಮಾ ಬರುತ್ತೆ ಅಂದ್ರೆ ವರ್ಷಗಟ್ಟಲೇ ಅಭಿಮಾನಿ ಬಳಗ ಕಾಯುತ್ತಾ ಕೂರುತಿತ್ತು ಆದರೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟವರಂತೆ, ಏನೋ ಎಡವಟ್ಟು ಮಾಡಿಕೊಂಡು ಇದೀಗ ದರ್ಶನ್ ಜೈಲಿಗೆ ಹೋಗಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಕೊರಗು. ಹೀಗಿದ್ದಾಗ ದರ್ಶನ್ ಅವರ ಬಗ್ಗೆ ದಿನಕ್ಕೊಂದು ಗಾಳಿಸುದ್ದಿ ಜೈಲಿನಿಂದ ಹೊರಗೆ ಬಂದು ಸಂಚಲನ ಸೃಷ್ಟಿ ಮಾಡುತ್ತಿದೆ. ಮತ್ತೊಂದು ಕಡೆ ದರ್ಶನ್ ಅವರಿಗೆ ಜಾಮೀನು ಕೊಡಿಸಿ ಹೊರಗೆ ಕರೆದುಕೊಂಡು ಬರಲು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಅವರ ಕುಟುಂಬ ಮಾಡುತ್ತಿದೆ.
ದರ್ಶನ್‌ಗೆ ವಿಗ್ ಪ್ರಾಬ್ಲಂ?
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್ ಈಗ ಸಾಮಾನ್ಯ ಖೈದಿಯ ರೀತಿ ಜೀವನ ನಡೆಸುತ್ತಿದ್ದಾರೆ. ಜೈಲಿನ ಖೈದಿಗಳಿಗೆ ನೀಡುವ ಮುದ್ದೆ, ಅನ್ನ, ಸಾರು ತಿಂದು ಜೀವನ ನಡೆಸುತ್ತಿದ್ದಾರೆ. ಹೀಗಿದ್ದಾಗ ಜೈಲಿನಲ್ಲಿ ದರ್ಶನ್‌ಗೆ ತಲೆ ಕೂದಲು & ವಿಗ್ ಮೇಂಟೇನ್ ಮಾಡುವುದು ಕಷ್ಟ ಆಗುತ್ತಿದೆಯಂತೆ. ಹೀಗಾಗಿ ನಟ ದರ್ಶನ್ ಈ ಕೂದಲು ಸಮಸ್ಯೆ ಸರಿ ಮಾಡಿಕೊಳ್ಳಲು ತಲೆ ಕೂದಲನ್ನೇ ಸಂಪೂರ್ಣ ತೆಗಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿದಿನ ನರಳಾಡುತ್ತಿದ್ದಾರೆ. ಹೊರಗೆ ಈ ನಟ ದೊಡ್ಡ ಹೀರೋ ಅಂತಾ ಗುರುತಿಸಿಕೊಂಡು, ಭರ್ಜರಿ ಬಾಡಿ ಬೆಳೆಸಿಕೊಂಡು ಅಕ್ಷರಶಃ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಸಖತ್ ಸೌಂಡ್ ಮಾಡುತ್ತಿದ್ದರು. ಹೀಗಿದ್ದಾಗ ಕೋಪದಲ್ಲಿ ಮಾಡಿದ ತಪ್ಪಿಗೆ ಇದೀಗ ದರ್ಶನ್ ಜೈಲು ಸೇರಿದ್ದಾರೆ ಎಂಬ ಕೊರಗು ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಇಂತಹ ಸಮಯದಲ್ಲೇ ದರ್ಶನ್ ಅವರ ಆರೋಗ್ಯದ ಬಗ್ಗೆ ಸ್ಫೋಟಕ ಮಾಹಿತಿ ಸಂಚಲನ ಸೃಷ್ಟಿ ಮಾಡಿದೆ!












Click it and Unblock the Notifications