ನಟ ಜ್ಯೂ.ಎನ್‌ಟಿಆರ್ ಆರೋಗ್ಯದಲ್ಲಿ ಏರುಪೇರು, ವಿಡಿಯೋ ವೈರಲ್
ಟಾಲಿವುಡ್ ನಟ ಜ್ಯೂನಿಯರ್ ಎನ್.ಟಿ.ಆರ್ (ತಾರಕ್) ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ನಟ ಇತ್ತೀಚೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ಒಂದು ಜಾಹಿರಾತು ಶೂಟ್ ವೇಳೆ ಈ ಅವಘಡ ಸಂಭವಿಸಿತ್ತು. ಇದರಿಂದ ಅವರು ಹೆಚ್ಚಿನ ಹೊತ್ತು ನಿಲ್ಲಲು ಹಾಗೂ ಮಾತನಾಡಲು ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ದೇಹದಲ್ಲಿ ಗಂಭೀರ ಗಾಯಗೊಂಡು ತೀವ್ರ ನೋವಿನಿಂದ ಒದ್ದಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಜೂನಿಯರ್ ಎನ್‌ಟಿಆರ್ ಅವರು ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದನ್ನು ಕೇಳಿ ಅವರ ಅಭಿಮಾನಿಗಳ ಆಘಾತಕ್ಕೆ ಒಳಗಾಗಿದ್ದರು. ಆದರೆ ಯಾವುದೇ ಅಪಾಯವಿಲ್ಲ ಎಂದು ಅವರ ತಂಡ ಸ್ಪಷ್ಟಪಡಿಸಿತ್ತು. ಇದಾದ ಬಳಿಕ ನಟ ಕೆಲ ದಿನಗಳಿಂದ ವಿಶ್ರಾಂತಿಯಲ್ಲೇ ಇದ್ದರು. ಕಾರ್ಯಕ್ರಮಗಳಿಂದಲೂ ದೂರ ಉಳಿದಿದ್ದರು. ರಿಷಬ್‌ಗಾಗಿ ಅವರು ನೋವಿನ ನಡುವೆಯೂ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹೈದರಾಬಾದ್‌ನಲ್ಲಿ ನಡೆದ ರಿಷಬ್ ಶೆಟ್ಟಿ ಅವರ 'ಕಾಂತಾರ: ಚಾಪ್ಟರ್ 1' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ತಾರಕ್ ತನ್ನ ಗಾಯದ ನೋವಿನ ನಡುವೆಯೂ ಹಾಜರಾಗಿ ಗೆಳೆಯನ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಜಾಹಿರಾತು ಚಿತ್ರೀಕರಣ ವೇಳೆಯಲ್ಲಿ ಗಾಯಗೊಂಡಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವೇದಿಕೆ ಮೇಲೆ ಕುಳಿತುಕೊಳ್ಳುವಾಗ ಸ್ವಲ್ಪ ಕಷ್ಟಪಟ್ಟಿದ್ದಾರೆ. ಕಾರ್ಯಕ್ರಮದ ವೇದಿಕೆ ಎನ್‌ಟಿಆರ್ ಅಭಿಮಾನಿ ದಿಢೀರ್ ಬಂದಾಗ ತಮ್ಮ ಗಾಯದ ಮೇಲೆ ಕೈಇಟ್ಟುಕೊಂಡು ತಾರಕ್ ಸುಮ್ಮನಾದರು. ಬಳಿಕ ಎನ್.ಟಿ.ಆರ್ ತಮ್ಮ ಮನೆಗೆ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಅವರನ್ನು ಡಿನ್ನರ್‌ಗೆ ಆಹ್ವಾನಿಸಿದ್ದರು.
ವೈರಲ್ ವಿಡಿಯೋದಲ್ಲಿ ಏನಿದೆ?
ಭಾನುವಾರ ಸಂಜೆ ಹೈದರಾಬಾದ್‌ನಲ್ಲಿ ನಡೆದ ಕಾಂತಾರ ಪ್ರಚಾರ ಕಾರ್ಯಕ್ರಮದಲ್ಲಿ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಭಾಗವಹಿಸಿ ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರನ್ನು ಬೆಂಬಲಿಸಿದರು. ಹತ್ತು ದಿನಗಳ ಹಿಂದೆಯಷ್ಟೇ ಗಾಯಗೊಂಡಿರುವ ಅವರು ಈ ಕಾರ್ಯಕ್ರಮದಲ್ಲಿ ನಿರಂತರ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಭಿಮಾನಿಯೊಬ್ಬರು ಅವರನ್ನು ತಬ್ಬಿಕೊಳ್ಳಲು ಬಂದಾಗ ನೋವಿನಿಂದ ಕಸಿವಿಸಿಗೊಂಡ ವಿಡಿಯೋಗಳು ವೈರಲ್ ಆಗಿವೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್ ಆಗಿದ್ದು, ನಟ ಜೂನಿಯರ್ ಎನ್‌ಟಿಆರ್ ಈ ಕಾರ್ಯಕ್ರಮದಲ್ಲಿ ಸೋಫಾದಲ್ಲಿ ಕುಳಿತಾಗ ಪಕ್ಕೆಲುಬನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು. ಕಾರ್ಯಕ್ರಮದುದ್ದಕ್ಕೂ ನಟ ತನ್ನ ಗಾಯದ ಜಾಗವನ್ನು ಹಿಡಿದು ಅನಾನುಕೂಲವಾಗಿ ಕಾಣುತ್ತಿದ್ದರು, ನೋವಿನಿಂದ ಕ್ಷಣಕಾಲ ಕಣ್ಣು ಮುಚ್ಚುತ್ತಿದ್ದರು ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಇನ್ನೊಂದು ವಿಡಿಯೋದಲ್ಲಿ ರಿಷಬ್ ಜೊತೆ ತಾರಕ್ ನೋವಿನ ನಡುವೆಯೂ ವೇದಿಕೆಯಲ್ಲಿ ಸೇರಿದರು. ಅಭಿಮಾನಿಯೊಬ್ಬ ಸೆಲ್ಫಿ ಕೇಳಲು ಬಂದಾಗ ಅವರು ತಿರಸ್ಕರಿಸಿ ದೂರ ಸರಿದಿದ್ದಾರೆ.












Click it and Unblock the Notifications