Kiccha Sudeep: ಕಿಚ್ಚ ಸುದೀಪ್‌ ಜೊತೆಗಿದ್ದ ವ್ಯಕ್ತಿಯಿಂದ ರೀಲ್ಸ್‌ ಸ್ಟಾರ್‌ ಸಮೀರ್‌ ಅಕ್ಕನಿಗೆ ಮಹಾಮೋಸ?

ಸೋಶಿಯಲ್‌ ಮೀಡಿಯಾದಲ್ಲಿ ಕನ್ನಡದ ರೀಲ್ಸ್‌ ಸ್ಟಾರ್‌ ಆಗಿ ಗುರುತಿಸಿಕೊಂಡಿರುವ ಸಮೀರ್‌ ಗಂಭೀರ ಆರೋಪ ಮಾಡಿದ್ದಾರೆ. ನಟ ಕಿಚ್ಚ ಸುದೀಪ್‌ ಹೆಸರಿನಲ್ಲಿ ಸಮೀರ್‌ ತನ್ನ ಅಕ್ಕನ ಗಂಡ ಹಲವು ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದಾನೆ, ನನ್ನ ಅಕ್ಕನ ಬದುಕನ್ನೂ ಹಾಳು ಮಾಡಿದ್ದಾನೆ ಎಂದು ವಿಡಿಯೋ ಮಾಡಿ ಆರೋಪಿಸಿದ್ದಾರೆ. ತನ್ನ ಬಾವ ʼನನ್ನ ಅಕ್ಕ ಹಾಗೂ ಹಲವು ಹುಡುಗಿಯರಿಗೆ ಮೋಸ ಮಾಡಿದ್ದಾನೆʼ ಎಂದು ಸಮೀರ್‌ ದೂರಿದ್ದಾರೆ. ಆ ವ್ಯಕ್ತಿಯು ಸುದೀಪ್‌ ಸರ್‌ ಅವರ ಜೊತೆಯಲ್ಲಿದ್ದೇನೆ ಅನ್ನೋ ಧೈರ್ಯದ ಮೇಲೆ ಈ ರೀತಿ ಮಾಡಿದ್ದಾನೆ ಎಂದೂ ಸಮೀರ್‌ ವಿಡಿಯೋದಲ್ಲಿ ತಿಳಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಫುಲ್‌ ವೈರಲ್‌ ಆಗಿದೆ. ʼಬಾವ ನಮ್ಮ ಹತ್ರ ಹಣ ತಗೊಂಡು, ನಮ್ಮ ಅಕ್ಕನಿಗೆ ಸಾಲ ಮಾಡಿ ಬೇರೆ ಇನ್ಯಾವುದೋ ಹುಡುಗಿಗೆ ಐಫೋನ್‌ ಕೊಡಿಸಿದ್ದಾನೆ. ಹಲವು ಹುಡುಗಿಯರ ಜೊತೆ ಚಾಟ್‌ ಮಾಡಿದ್ದಾನೆ. ನನ್ನ ಕಾರ್‌ ತಗೊಂಡು ಹುಡುಗಿಯರೊಂದಿಗೆ ಸುತ್ತಾಡಿದ್ದಾನೆʼ ಎಂದು ಸಮೀರ್‌ ಲೈವ್‌ನಲ್ಲೇ ಜಾಡಿಸಿದ್ದಾರೆ.

Influencer Sameer Alleges Brother-in-law Scammed Women Using Kiccha Sudeep Name

ʼಕೆಲಸ ಇದೆ ಎಂದು ಹೇಳಿ ನನ್ನ ಕಾರು ತಗೊಂಡು ಹುಡುಗಿಯರನ್ನು ಕರ್ಕೊಂಡು ಸುತ್ತಾಡಿದ್ದಾನೆ. ನನ್ನ ಹೆಸರು ಹೇಳಿಕೊಂಡು ತುಂಬಾ ಜನರ ಹತ್ತಿರ ಪ್ರಮೋಷನ್‌ ಮಾಡಿಸ್ತೀನಿ ಅಂತ ದುಡ್ಡು ಹಾಕಿಸಿಕೊಂಡಿದ್ದಾನೆ. ಇವನಿಗೆ ಸುದೀಪ್‌ ಸರ್‌ ಜೊತೆ ಇದ್ದೀನಿ ಅನ್ನೋ ಧೈರ್ಯʼ ಎಂದು ಸಮೀರ್‌ ಆರೋಪಗಳನ್ನು ಮಾಡಿದ್ದಾರೆ.

ʼರಾಜಕಾರಣಿಗಳು, ನಟ ಸುದೀಪ್‌ ಅವರ ಜೊತೆಗಿನ ಫೋಟೋ ತೆಗೆಸಿಕೊಂಡಿದ್ದ ಈತ, ಅವರ ಹೆಸರು ಹೇಳಿಕೊಂಡು ಈ ಕೃತ್ಯಗಳನ್ನು ಎಸಗುತ್ತಿದ್ದ. ನನ್ನ ಅಕ್ಕ ಮಾತ್ರವಲ್ಲ, ಸಾಕಷ್ಟು ಹುಡುಗಿಯರಿಗೆ ಮೆಸೇಜ್‌ ಮಾಡಿದ್ದಾನೆ. ನನ್ನ ಅಕ್ಕನ ಬದುಕಿಗೆ ಕೊಳ್ಳಿ ಇಟ್ಟಿದ್ದಾನೆ ಎಂದು ದೂರಿದ್ದಾರೆ. ಸುದೀಪ್‌, ಸಮೀರ್‌ ಅವರ ಮೂಲಕ ನಿಮಗೆ ಒಳ್ಳೆಯ ಅವಕಾಶಗಳನ್ನು ಕೊಡಿಸುತ್ತೀನಿ ಎಂದು ಹಲವು ಹುಡುಗಿಯರಿಗೆ ಮೋಸ ಮಾಡಿದ್ದಾನೆ. ಅಲ್ಲದೆ ಯುವತಿಯರಿಗೆ ಕೆಟ್ಟದಾಗಿ ಮೆಸೇಜ್‌ ಮಾಡಿರುವುದು ಕೂಡ ಬೆಳಕಿಗೆ ಬಂದಿದೆʼ ಈ ಬಗ್ಗೆ ಪ್ರಶಾಂತ್ ಗೌಡ ಎದುರೇ ಸಮೀರ್‌ ವಿಡಿಯೋ ಮಾಡಿ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ʼಮೊದಲಿಗೆ ಈ ಲೈವ್‌ ನೋಡಿ ಪ್ರಾಂಕ್‌ ವಿಡಿಯೋ ಇರಬೇಕು ಎಂದು ಜನ ಭಾವಿಸಿದ್ದರು. ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ಸಮೀರ್‌, ವೈರಲ್‌ ಆಗಿರುವ ವಿಡಿಯೋ ಫೇಕ್‌ ಅಲ್ಲ. ಈ ಘಟನೆ ಬಗ್ಗೆ ನಮ್ಮ ಕುಟುಂಬ ಲೀಗಲ್‌ ಆಕ್ಷನ್‌ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಆ ವಿಡಿಯೋದಲ್ಲಿ ನಾನು ಇಬ್ಬರು ದೊಡ್ಡವರ ಹೆಸರನ್ನು ಉಲ್ಲೇಖಿಸಿದ್ದೆ. ಏಕೆಂದರೆ ಆತ ಆ ದೊಡ್ಡವರ ಹೆಸರನ್ನೇ ಹೇಳಿಕೊಂಡು ಮೋಸ ಮಾಡಿದ್ದಾನೆ. ನಾನು ವಿಡಿಯೋದಲ್ಲಿ ಸುದೀಪ್‌ ಸರ್‌ ಹೆಸರು ಹೇಳಿದ್ದೀನಿ. ಆದರೆ ಸುದೀಪ್‌ ಸರ್‌ಗೆ ಇವನು ಯಾರು ಎಂದೇ ಗೊತ್ತಿರೋದಿಲ್ಲ. ಸುದೀಪ್‌ ಅವರೊಂದಿಗೆ ಫೋಟೊ ತಗೊಂಡು ಈ ರೀತಿ ಮೋಸ ಮಾಡಿದ್ದಾನೆ. ದಯವಿಟ್ಟು ಇಂತವರನ್ನು ನಂಬಬೇಡಿʼ ಎಂದು ಸಮೀರ್‌ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+