Get Updates
Get notified of breaking news, exclusive insights, and must-see stories!

Saroja Devi: ಬಿ.ಸರೋಜಾ ದೇವಿ ನಿಧನ: ರಜನಿಕಾಂತ್ ಸೇರಿ ಕಲಾವಿದರು, ರಾಜಕೀಯ ಗಣ್ಯರ ಸಂತಾಪ..

B.Saroja Devi News: ಕರ್ನಾಟಕ ಮೂಲಕ ಭಾರತೀಯ ಬಹುಭಾಷಾ ನಟಿ ಬಿ.ಸರೋಜಾ ದೇವಿ ಅವರು ಅನಾರೋಗ್ಯ ಕಾರಣದಿಂದ ಇಂದು ಜುಲೈ 14ರಂದು ವಿಧಿವಶರಾದರು. ಅತೀ ಕಿರಿಯ ವಯಸ್ಸಿನಲ್ಲೇ ಸಿನಿ ರಂಗ ಪ್ರವೇಶಿಸಿ ಐದು ಭಾಷೆಗಳ ಸ್ಟಾರ್ ನಟರ ಜೊತೆಗೆ ನಟಿಸಿದ ಬಿ.ಸರೋಜಾದೇವಿ ಅವರು ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತಕ್ಕೇ ಹೆಸರು ತಂದ ಸ್ಟಾರ್ ನಟಿಯಾಗಿ ಮಿಂಚಿದ್ದರು. ಇಂದು ಅವರು ನಮ್ಮನ್ನು ಅಗಲಿದ್ದಾರೆ. ಅವರಿಗೆ ಅನೇಕ ಗಣ್ಯರು, ಕಲಾವಿದರು, ಕರ್ನಾಟಕದ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಹಿರಿಯ ತಾರೆ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಿ.ಸರೋಜಾ ದೇವಿ ಅವರು ಮತ್ತು ಅವರ ಕುಟುಂಬದವರು ನಮಗೂ ಬಹಳ ಆತ್ಮಿಯರಾಗಿದ್ದರು. ರಾಜ್ಯ ಸರ್ಕಾರದ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಆರೋಗ್ಯ ಏರುಪೇರಾಗಿತ್ತು. ರಾಜ್ಯ ಸರ್ಕಾರ ವತಿಯಿಂದ ಹಾಗೂ ವೈಯಕ್ತಿಕವಾಗಿ ನಾನು ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.

Indian Actress B Saroja Devi No More Karnataka Many Politicians actors Express Condolence

ಅವರು ಡಾ.ರಾಜಕುಮಾರ್ ಅವರೊಂದಿಗೆ ಮಾತ್ರವಲ್ಲದೇ ದಕ್ಷಿಣ ಭಾರತದ ಅನೇಕ ನಟರೊಂದಿಗೆ ನಟಿಸಿ ಒಳ್ಳೆ ಹೆಸರು ಪಡೆದುಕೊಂಡಿದ್ದರು. ದಕ್ಷಿಣ ಭಾರತಕ್ಕೆ ದೊಡ್ಡ ಹೆಸರು ತಂಡ ಕೊಟ್ಟ ನಟಿ. ಇಂದು ಅವರಿಲ್ಲ. ಅರ ಅಭಿಮಾನಿಗಳಿಗೆ, ಕುಟುಂಬಕ್ಕೆ ನಿಧನದ ದುಃಖ ತೆಡೆಯುಕೊಳ್ಳುವ ಶಕ್ತಿ ಆ ಭಗವಂತೆ ನೀಡಲು ಎಂದು ಪ್ರಾರ್ಥಿಸುತ್ತೇನೆ ಎಂದರು.

'ಅಭಿನಯ ಸರಸ್ವತಿ' ನಿಧನ ದುಃಖ ತರಿಸಿದೆ: ಮಾಜಿ ಸಿಎಂ

ಬಿಜೆಪಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು, ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖವಾಗಿದೆ. "ಅಭಿನಯ ಸರಸ್ವತಿ" ಎಂದೇ ಖ್ಯಾತರಾಗಿ ಸುಮಾರು ಏಳು ದಶಕಗಳ ಕಾಲ ಕನ್ನಡ ಚಿತ್ರರಂಗವಷ್ಟೇ ಅಲ್ಲದೇ ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿ ಭಾರತೀಯ ಚಿತ್ರ ರಂಗದ ಶ್ರೇಷ್ಠ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು.

ಅನೇಕ ಪೌರಾಣಿಕ ಮತ್ತು ಐತಿಹಾಸಿ ಚಿತ್ರಗಳಲ್ಲಿ ನಟಿಸಿದ್ದ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಅವರು ಕಿತ್ತೂರು ಚೆನ್ನಮ್ಮನ ಪಾತ್ರದಲ್ಲಿ ನಟಿಸಿರುವುದು ಇನ್ನೂ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.

ಬಿ.ಸರೋಜಾದೇವಿ ಅವರ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಅರಸಿ ಬಂದಿದ್ದವು. ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾದಂತಾಗಿದೆ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಅವರ ಕುಟುಂಬದವರಿಗೆ ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ

ಕನ್ನಡ ಚಿತ್ರರಂಗದ ಹಿರಿಯ ನಟಿ, 'ಅಭಿನಯ ಸರಸ್ವತಿ' ಎಂದೇ ಹೆಸರುವಾಸಿಯಾಗಿದ್ದ ಶ್ರೀಮತಿ ಬಿ.ಸರೋಜಾದೇವಿ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಐದು ಭಾಷೆಗಳಲ್ಲಿ ಸುಮಾರು 160ಕ್ಕೂ ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ಅವರ ಅಗಲಿಕೆಯಿಂದ, ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಶೋಕ ವ್ಯಕ್ತಪಡಿಸಿದರು.

ಮಹಾನ್ ಕಲಾವಿದೆ ಅಗಲಿಕೆ ನೋವು ತಂದಿದೆ

ರಾಜ್ಯದ ಹೆಮ್ಮೆಯ ಪುತ್ರಿ, ಭಾರತೀಯ ಚಿತ್ರರಂಗದ ಮಹಾನ್ ಕಲಾವಿದೆ, ಪದ್ಮಶ್ರೀ, ಪದ್ಮಭೂಷಣ, ಡಾ. ಬಿ. ಸರೋಜದೇವಿಯವರು ಈ ಜಗತ್ತು ತೊರೆದಿದ್ದಾರೆ ಎಂಬ ಸುದ್ದಿ ಅಪಾರ ನೋವು ತಂದಿದೆ. ಮಹಾಕವಿ ಕಾಳಿದಾಸರಿಂದ ನಾಡೋಡಿ ಮನ್ನನ್‌ವರೆಗೆ, ಅವರ ಪ್ರಯಾಣವು ಭಾರತೀಯ ಚಿತ್ರರಂಗದಲ್ಲಿ ಒಂದು ಯುಗವನ್ನು ಸೃಷ್ಟಿಸಿದೆ. ಎರಡು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದ ಪ್ರತಿಭಾವಂತ ಕಲಾವಿದೆ ಅವರು. ಭಾರತೀಯ ಚಲನಚಿತ್ರಗಳ ಸೌಂದರ್ಯಮಯ ಯುಗದ ಪ್ರಾತಿನಿಧ್ಯವಾಗಿದ್ದ ಈ ದಿಗ್ಗಜೆಯ ವರ್ಚಸ್ಸು ಶಾಶ್ವತ. ಅವರ ನಿಧನವು ಭಾರತೀಯ ಚಿತ್ರಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಸಚಿವ ಎಂಬಿ ಪಾಟೀಲ್ ಕಂಬನಿ ಮಿಡಿದಿದ್ದಾರೆ.

ಮಹಾನ್ ನಟಿ ನಮ್ಮೊಂದಿಗಿಲ್ಲ:ರಜನಿಕಾಂತ್ ಸಂತಾಪ

ಲಕ್ಷಾಂತರ ಅಭಿಮಾನಿಗಳ ಹೃದಯಗಳನ್ನು ಸೂರೆಗೊಂಡ ಮಹಾನ್ ನಟಿ ಸರೋಜಾ ದೇವಿ ಈಗ ನಮ್ಮೊಂದಿಗಿಲ್ಲ ಎಂದು ಬಿ.ಸರೋಜಾದೇವಿ ಅವರ ಅಗಲಿಕೆಗೆ ನಟ ರಜನಿಕಾಂತ್ ಅವರು ಸಂತಾಪ ಸೂಚಿಸಿದ್ದಾರೆ. ಅವರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು. ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ‌ ಮೂಲಕ ಹಲವು ದಶಕಗಳ‌ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟವಾಗಿದೆ.

ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ದುಃಖತಪ್ತ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸರೋಜಾದೇವಿ ಕರ್ನಾಟಕದ ಹೆಮ್ಮೆ: ತಂಗಡಗಿ

ಬಹುಭಾಷಾ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಬಿ.ಸರೋಜಾ ದೇವಿಯವರ ಅಗಲಿಕೆ ದುಃಖವನ್ನುಂಟು ಮಾಡಿದ್ದು, ನಾಡಿಗೆ ತುಂಬಲಾರದ ನಷ್ಟ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿಯೂ ತಮ್ಮ ನಟನೆಯ ಮೂಲಕ ಸರೋಜಮ್ಮ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.

ರಾಜಕುಮಾರ್ , ಎಂ.ಜಿ.ಆರ್ ಅವರಂತಹ ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿದ್ದ ಸರೋಜಮ್ಮ ಅವರು ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಬಹು ಬೇಡಿಕೆಯ ನಟಿಯಾಗಿದ್ದರು. ಅವರ ಕಲಾ ಪ್ರತಿಭೆಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರಕಿದ್ದವು. ಅದ್ಭುತವಾದ ಅಭಿನಯ ಸರಸ್ವತಿ ನಮ್ಮ ರಾಜ್ಯದಲ್ಲಿ ಜನಿಸಿ ದೇಶಾದ್ಯಂತ ಹೆಸರು ಮಾಡಿದ್ದು ರಾಜ್ಯದ ಹೆಮ್ಮೆ. ಅವರ ನಟನೆ ಮೂಲಕ ಎಂದೆಂದಿಗೂ ಅವರು ನಮ್ಮ ಜೊತೆಗೆ ಇರಲಿದ್ದಾರೆ. ಅವರ ಅಗಲಿಕೆಯಿಂದ ಕಲಾ ಜಗತ್ತು ಹಾಗೂ ನಾಡು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಅವರು ದುಃಖ ವ್ಯಕ್ತಪಡಿಸಿದರು.

ಸಿನಿಮಾಗಳ ಚಿರಸ್ಥಾಯಿ: ಎಂಬಿ ಪಾಟೀಲ್

ಹಿರಿಯ ಅಭಿ‌ನೇತ್ರಿ, ಬಹುಭಾಷಾ ನಟಿ, ಪದ್ಮಭೂಷಣ ಡಾ.ಬಿ ಸರೋಜಾದೇವಿ ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸಂತಾಪ ಸೂಚಿಸಿದ್ದಾರೆ. ಕನ್ನಡ ನೆಲದವರಾಗಿದ್ದ ಸರೋಜಾದೇವಿ ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟಿಯಾಗಿ ಮನೋಜ್ಞ ಅಭಿನಯ ನೀಡಿದ್ದರು. ಕಲಾಪ್ರೇಮಿಗಳ ಮನಸ್ಸಿನಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯಲಿದೆ ಎಂದು ಸ್ಮರಿಸಿಕೊಂಡಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲ ಅವರು ಕಲಾ ಸೇವೆ ಮಾಡಿದ್ದು, ತಮ್ಮ ಕಾಲದ ದಿಗ್ಗಜ ನಟರಾದ ರಾಜಕುಮಾರ್, ಎನ್ ಟಿ ರಾಮರಾವ್, ಎಂ ಜಿ ರಾಮಚಂದ್ರನ್ ಮುಂತಾದವರ ಜೊತೆ ನಟಿಸಿದ್ದರು. ಅವರ ನಟನೆಯ ಕಿತ್ತೂರು ಚೆನ್ನಮ್ಮ, ಬಭ್ರುವಾಹನ ಮುಂತಾದ ಸಿನಿಮಾಗಳು ಚಿರಸ್ಥಾಯಿಯಾಗಿ ಇವೆ ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+