Trivikram-Bhavya Gowda: ಐ ಸೀರಿಯಸ್ಲಿ ಲವ್‌ ಯೂ ಭವ್ಯಾ: ಬಿಗ್‌ ಬಾಸ್‌ ಮನೆಯಲ್ಲಿ ಪ್ರೀತಿ ಹೇಳಿಕೊಂಡ ತ್ರಿವಿಕ್ರಮ್‌

ಪ್ರತಿಯೊಂದು ಬಿಗ್‌ ಬಾಸ್‌ ಸೀಸನ್ ನಲ್ಲೂ ಅದೆಷ್ಟೋ ಸ್ಪರ್ಧಿಗಳ ನಡುವೆ ಮೊದಲು ಸ್ನೇಹವಾಗಿ, ನಂತರ ಪ್ರೀತಿಯನ್ನ ಹೇಳಿಕೊಂಡು ಮದುವೆಯಾಗಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಸೀಸನ್‌ ನಲ್ಲೂ ಭವ್ಯಾ ಗೌಡ ಮತ್ತು ತ್ರಿವಿಕ್ರಮ್‌ ನಡುವಿನ ಸ್ನೇಹಕ್ಕಿಂತ ಹೆಚ್ಚಿನ ಬಾಂಧವ್ಯದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ತ್ರಿವಿಕ್ರಮ್‌ ಹಾಗೂ ಭವ್ಯ ನಡುವೆ ಉತ್ತಮ ಸ್ನೇಹವಿದೆ ಎನ್ನಲಾಗಿತ್ತು. ಅಲ್ಲದೇ ಭವ್ಯ ಜೊತೆಗಿದ್ರು ತ್ರಿವಿಕ್ರಮ್‌ ಆಯ್ಕೆ ಮೋಕ್ಷಿತಾ ಎಂದು ಹೇಳಲಾಗಿತ್ತು. ಆದರೆ, ಇದೀದ ಬಿಗ್‌ ಬಾಸ್‌ ಮನೆಯಲ್ಲಿಯೇ ತ್ರಿವಿಕ್ರಮ್‌ ತಮ್ಮ ಪ್ರೀತಿಯನ್ನ ಹೇಳಿಕೊಂಡಿದ್ದಾರೆ.

ಹೌದು, ಬಿಗ್‌ಬಾಸ್‌ ಕನ್ನಡ 11ರಲ್ಲಿ ಭವ್ಯಾ ಗೌಡ ಮತ್ತು ತ್ರಿವಿಕ್ರಮ್‌ ನಡುವಿನ ಸ್ನೇಹಕ್ಕಿಂತ ಹೆಚ್ಚಿನ ಬಾಂಧವ್ಯವಿದೆ. ಡಿಸೆಂಬರ್ 20ರ ಎಪಿಸೋಡ್‌ನಲ್ಲಿ ಬಿಗ್‌ ಬಾಸ್‌ ಸ್ಪರ್ಧಿ ತ್ರಿವಿಕ್ರಮ್‌, ಭವ್ಯಾಗೆ 'ಐ ಲವ್ ಯೂ' ಎಂದು ಹೇಳಿದ್ದಾರೆ. ಇಬ್ಬರ ನಡುವಿನ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚರ್ಚೆಗೆ ಕಾರಣವಾಗಿದೆ. ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಸ್ಪರ್ಧಿಗಳು ಅನ್ನುವುದಕ್ಕಿಂತ ಉತ್ತಮ ಬಾಂಧವ್ಯ ಹೊಂದಿದ್ದು, ಕ್ಲೋಸ್‌ ಆಗಿ ಮಾತನಾಡುತ್ತಾರೆ.

I Seriously Love You Trivikram Love Confession to Bhavya Gowda

ಈ ಹಿಂದೆ ಬಿಗ್‌ಬಾಸ್ ಮಿನಿ ಸೀಸನ್‌ನಲ್ಲಿ ಭಾಗವಹಿಸಿದ್ದರು. ಅವಾಗಿನಿಂದಲೇ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಅವರಿಬ್ಬರು ಪರಸ್ಪರ ಪರಿಚಯ. ಬಿಗ್‌ ಬಾಸ್‌ ಸೀಸನ್‌ 11 ರ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಮೊದಲೇ ಪರಿಚಯ ಒಂದೆರಡು ಬಾರಿ ಸಿಕ್ಕಾಗ ಹಾಯ್ ಎಂದು ಹೇಳಿದ್ದಷ್ಟೇ ಎಂದು ಸುದೀಪ್‌ ಬಳಿ ಹೇಳಿದ್ದರು.

ಬಿಗ್‌ ಬಾಸ್‌ ಮನೆಯಲ್ಲಿ ಭವ್ಯ ಜೊತೆಗೆ ತ್ರಿವಿಕ್ರಮ್‌ ಮಾತನಾಡುವ ವೇಳೆ ತ್ರಿವಿಕ್ರಮ್‌ ರಿಯಲೀ ಲವ್‌ ಯೂ ಭವ್ಯಾ ಎಂದಿದ್ದಾರೆ. ಭವ್ಯ ಗೌಡ ಹಾಗೂ ತ್ರಿವಿಕ್ರಮ್‌ ಬಿಗ್‌ ಬಾಸ್‌ ಮನೆಗೆ ಬರುವ ಮುನ್ನವೇ ಅವರಿಬ್ಬರ ಮಧ್ಯೆ ಗೆಳತನಕ್ಕೆ ಮೀರಿದ ಬಂಧ ಇತ್ತು ಎನ್ನಲಾಗಿದೆ. ಬಿಗ್‌ಬಾಸ್‌ ಮನೆಯಲ್ಲಿ ಮಾತ್ರ ಸ್ಪರ್ಧಿಗಳಂತೆ ಇಬ್ಬರೂ ವೈಯಕ್ತಿಕ ಆಟ ಆಡುತ್ತಿದ್ದಾರೆ.

ನಾವು ಲಕ್ಷುರಿ ಟಾಸ್ಕ್‌ನಲ್ಲಿ ಎಷ್ಟು ಪಾಯಿಂಟ್‌ ಸೋತೆವೆಂದು ಹೇಳಲಷ್ಟೇ ನಿಂಗೆ ಹೇಳಿಕೊಡೋಕೆ ಬಂದಿದ್ದು. ನಾನು ನಿನಗೆ ಬೈಯಲು ಆಗ್ಲಿ, ಹೊರಗಡೆ ಆಗ್ಲಿ ಇಲ್ಲಿ ಆಗ್ಲಿ ಬಂದಿಲ್ಲ ಎಂದು ತ್ರಿವಿಕ್ರಮ್‌ ಹೇಳಿದ್ದಾರೆ. ಈ ವೇಳೆ ಭವ್ಯಾ ಗೌಡ ಅವರು ಮಾತನಾಡಿ, ನಾನು ಅದನ್ನೇ ಹೇಳಲು ಬಂದೆ. ಮಾತಾಡಿ ಅಂತಾನೆ ಹೇಳಿದ್ದು, ನಾನು ಎಲ್ಲರತ್ರ ಯಾವ ಟೋನ್‌ನಲ್ಲಿ ಮಾತಾಡಬೇಕು. ಅದನ್ನು ಹೇಳಿಕೊಡಿ ಎಂದು ಹೇಳಿದ್ದಾರೆ. ನೀನು ಎಲ್ಲಾರೂ ಅಂತಿದ್ದೀಯಲ್ಲ. ಎಲ್ಲರೂ ನಿನ್ನ ಜೊತೆಗಿದ್ರಾ ಇಷ್ಟು ದಿನ? ಎಂದು ತ್ರಿವಿಕ್ರಮ್‌ ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನೂ ಈ ವೇಳೆ ಭವ್ಯಾ, ಹಂಗಲ್ಲಾ ವಿಕ್ಕಿ, ಎಲ್ಲಾ ವಿಚಾರಕ್ಕೂ ನನ್ನ ಮೇಲೆ ಅಫೆಂಡ್‌ ಆಗ್ತೀದ್ದೀರಾ ಯಾಕೆ? ನಾನು ಏನು ಮಾಡಬೇಕು ಎಂದು ಕೇಳಿದ್ದಾರೆ. ಈ ವೇಳೆ ತ್ರಿ ವಿಕ್ರಮ್‌, ನಾನು ಯಾವ ವಿಚಾರಕ್ಕೆ ಅಫೆಂಡ್‌ ಆದೆ ಭವ್ಯಾ, ಐ ಸೀರಿಯಸ್ಲಿ ಲವ್‌ ಯೂ ಓಕೆ. ವೈಟ್‌ ಕೇಳಿಸಿಕೋ, ನಾನು ನಿಂಗೆ ಅಫೆಂಡ್‌ ಆಗಿ ಆಗ್ಲಿ, ಕೋಪದಲ್ಲಾಗ್ಲಿ, ನಾನು ಏನೂ ಮಾತಾಡ್ತಿಲ್ಲ. ನಾನು ಜಸ್ಟ್ ಕನ್ವಿನ್‌ಸಿಂಗ್‌ ಯೂ, ಜಸ್ಟ್ ಟೆಲ್ಲಿಂಗ್ ಯೂ ಎಂದು ತ್ರಿವಿಕ್ರಮ್‌ ಪ್ರೀತಿ ಕುರಿತು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+